ಕೀರ್ತನೆ ಮೂಲಕ ಅರಿವು ಮೂಡಿಸಿದ್ದ ಕನಕರು: ಕೆ.ಪಿ. ಪಾಲಯ್ಯ

KannadaprabhaNewsNetwork |  
Published : Nov 28, 2026, 01:45 AM IST
​೨೭ಜೆಎಲ್‌ಆರ್‌ಚಿತ್ರ೧ಎ): ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಕೀರ್ತನೆಕಾರರು ಹಾಗೂ ವಚನಕಾರರ ಜ್ಞಾನವನ್ನು ತಿಳಿದವರು ಎಂದಿಗೂ ದಡ್ಡರಾಗುವುದಿಲ್ಲ ಎಂದು ಕೆಪಿಸಿಸಿ ಎಸ್‌ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಜಗಳೂರು

ಕೀರ್ತನೆಕಾರರು ಹಾಗೂ ವಚನಕಾರರ ಜ್ಞಾನವನ್ನು ತಿಳಿದವರು ಎಂದಿಗೂ ದಡ್ಡರಾಗುವುದಿಲ್ಲ ಎಂದು ಕೆಪಿಸಿಸಿ ಎಸ್‌ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ ಅಭಿಪ್ರಾಯಪಟ್ಟರು.

​ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಕನಕದಾಸರ 539ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೀರ್ತನೆಗಳ ಮೂಲಕ ಸಮಾಜಕ್ಕೆ ಅರಿವು ಮೂಡಿಸಿದ ಮಹಾನ್ ಜ್ಞಾನಿ ಕನಕದಾಸರ ಮೂಲ ಉದ್ದೇಶವನ್ನು ಈಗಿನ ಪೀಳಿಗೆ ಅರ್ಥೈಸಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ ಎಂದು ವಿಷಾಧ ವ್ಯಕ್ತ ಪಡಿಸಿದರು.

​ಕನಕದಾಸರು ಜ್ಞಾನ ಸಾಗರ: ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಶಿರಸ್ತೇದಾರ್ ಬದರಿನಾಥ್, ಹರಿದಾಸ ಸಾಹಿತ್ಯದ ಪ್ರಮುಖ ಕವಿ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕರಾದ ಕನಕದಾಸರು ಜ್ಞಾನ ಸಾಗರವಿದ್ದಂತೆ. ಕೀರ್ತನೆಗಳು, ಕಾವ್ಯ ಹಾಗೂ ಜಾತಿ ತಾರತಮ್ಯದ ವಿರುದ್ಧದ ಚಿಂತನೆಗಳ ಮೂಲಕ ಕನ್ನಡ ಸಂಸ್ಕೃತಿಗೆ ಇವರು ನೀಡಿದ ಕೊಡುಗೆ ಅಗಣಿತ. ಹೀಗಾಗಿ ಇವರನ್ನು ''''''''ಅಶ್ವಿನಿ ದೇವತೆ''''''''ಗಳ ಸಾಲಿನಲ್ಲಿ ಬಣ್ಣಿಸಲಾಗುತ್ತದೆ ಎಂದರು. ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ ಕಾವ್ಯಗಳೊಂದಿಗೆ ಕಾಗಿನೆಲೆ ಆದಿಕೇಶವರಾಯ ಎಂಬ ಅಂಕಿತನಾಮದಲ್ಲಿ ನೂರಾರು ಕೀರ್ತನೆ, ಸುಳಾದಿ, ಉಗಾಭೋಗ ಮತ್ತು ಮಂಡಿಗೆಗಳನ್ನು ರಚಿಸಿದ್ದಾರೆ. ವ್ಯಾಸರಾಯರ ಶಿಷ್ಯರಾಗಿ ಜನಪದ ಸೊಗಡಿನ ಭಕ್ತಿ ಸಾಹಿತ್ಯವನ್ನು ಬೆಳೆಸಿದ ಕನಕರಿಗೆ ಶ್ರೀಕೃಷ್ಣದೇವರಾಯ ತಮ್ಮ ಆಸ್ಥಾನಕ್ಕೆ ಕರೆಸಿ ವಿಶೇಷ ಅಭಿನಂದನೆ ಸಲ್ಲಿಸಿದ್ದರು. ಇವರ ಕೃತಿಗಳ ಮೇಲೆ ನೂರಾರು ಮಹಾಪ್ರಬಂಧಗಳು ರಚಿತವಾಗಿವೆ ಎಂದು ಸ್ಮರಿಸಿದರು.

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕ ಎಂ.ಡಿ. ಕೀರ್ತಿಕುಮಾರ್ ಮಾತನಾಡಿ, 15-16ನೇ ಶತಮಾನದ ಭಕ್ತಿ ಪಂಥದ ಪ್ರಮುಖ ಹರಿದಾಸರಾದ ಕನಕದಾಸರ ಜಯಂತಿಯನ್ನು ಸರ್ಕಾರ ಪ್ರತಿವರ್ಷ ಆಚರಿಸುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಸಮುದಾಯಗಳನ್ನು ಸಮನಾಗಿ ಕಂಡು ಉತ್ತಮ ಆಡಳಿತ ನೀಡಿದ್ದು, ತಾಲೂಕಿನಲ್ಲಿ ಕನಕ ಭವನ ನಿರ್ಮಾಣಕ್ಕೆ 2 ಕೋಟಿ ರು. ಅನುದಾನ ನೀಡುವ ಮೂಲಕ ಸಮುದಾಯದ ಅಭ್ಯುದಯಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ಜಿಪಂ ಮಾಜಿ ಸದಸ್ಯ ಹಾಗೂ ಕುರುಬ ಸಮುದಾಯದ ಮುಖಂಡ ಸೊಕ್ಕೆ ನಾಗರಾಜ್ ಮಾತನಾಡಿ, 1509ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಬಚ್ಚಮ್ಮ ಮತ್ತು ಬೀರಪ್ಪನಾಯಕ ದಂಪತಿಯ ಮಗನಾಗಿ ಜನಿಸಿದ ತಿಮ್ಮಪ್ಪನಾಯಕ (ಕನಕದಾಸರು), ಯೋಧನಾಗಿದ್ದು ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡ ಬಳಿಕ ದೇವರ ಲೀಲೆಯಿಂದ ಬದುಕುಳಿದು ಹರಿದಾಸರಾಗಿ ದೇವರ ಸೇವೆಯಲ್ಲಿ ತೊಡಗಿಕೊಂಡರು ಎಂದು ಅವರ ಜೀವನ ಹಾದಿಯನ್ನು ಮೆಲುಕು ಹಾಕಿದರು.

​ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ. ಗುರುಬಸವರಾಜ್, ಕುರುಬ ಸಮುದಾಯದ ತಾಲೂಕು ಅಧ್ಯಕ್ಷ ಓಮಣ್ಣ, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು ಮಾತನಾಡಿದರು. ತಾಪಂ ಇಒ ಕೆಂಚಪ್ಪ, ಮುಖಂಡರಾದ ಬಿ. ಮಹೇಶ್ವರಪ್ಪ, ಶಿವನಗೌಡ, ಷಂಷೀರ್ ಅಹಮದ್, ಕಲಂದರ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಚಾರಿ ಕುರಿಗಾಹಿಗಳಿದ್ದಲ್ಲೇ ಪಡಿತರ ವಿತರಣೆಗೆ ಕ್ರಮ- ಸಿಎಂ ಡಿಕೆಶಿ ಭರವಸೆ
ಜಗತ್ತಿಗೆ ಮಾದರಿ ಸಂವಿಧಾನ ಕೊಟ್ಟಿದ್ದು ಅಂಬೇಡ್ಕರ್‌: ಕೆ.ಎಂ.ಸುರೇಶ