ಸಮಸಮಾಜಕ್ಕೆ 12ನೇ ಶತಕದಲ್ಲಿಯೇ ಶ್ರಮಿಸಿದ ಕನಕದಾಸರು

KannadaprabhaNewsNetwork |  
Published : Nov 28, 2026, 01:45 AM IST
01 ದೇವನಹಳ್ಳಿ ಸುದ್ದಿ 02 | Kannada Prabha

ಸಾರಾಂಶ

ಸಮಾಜ ಸುಧಾರಕ ಕನಕದಾಸರು ೧೫ನೇ ಶತಮಾನದಲ್ಲಿ ಸಮಾನತೆ, ಭ್ರಾತೃತ್ವ ಸೌಹಾರ್ದತೆಯನ್ನು ಸಮಾಜಕ್ಕೆ ಸಾರಿದರು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಸಮಾಜ ಸುಧಾರಕ ಕನಕದಾಸರು ೧೫ನೇ ಶತಮಾನದಲ್ಲಿ ಸಮಾನತೆ, ಭ್ರಾತೃತ್ವ ಸೌಹಾರ್ದತೆಯನ್ನು ಸಮಾಜಕ್ಕೆ ಸಾರಿದರು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ಧ್ಯಾನ, ಭಕ್ತಿಯಿಂದ ದೇವರನ್ನು ಪ್ರತ್ಯಕ್ಷವಾಗಿ ಕಂಡ ಮಹಾನ್ ಸಂತ ಕನಕದಾಸರು. ಅವರ ಕೀರ್ತನೆಗಳು, ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜ ಸುಧಾರಣೆಗೆ ಅವರ ಕೊಡುಗೆ ಅಪಾರ. ಕನಕದಾಸರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗೋಣ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಆವರಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಜಾಗ ಗುರುತಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಪ್ರತಿಮೆಗೆ ಅನುದಾನ ಬಿಡುಗಡೆ ಮಾಡಲಾಗುವುದು. ಯಾವೆಲ್ಲ ಸಮುದಾಯದವರು ಸಂಘದ ಮೂಲಕ ಸಮುದಾಯ ಭವನ ನಿರ್ಮಾಣಕ್ಕೆ ಮನವಿ ಸಲ್ಲಿಸುತ್ತಾರೋ ಅಂತಹ ಸಂಘಗಳಿಗೆ ಬಯಪಾ ಪ್ರಾಧಿಕಾರದಿಂದ ನಿವೇಶನ ಮಂಜೂರು ಮಾಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಆ ಭವನಗಳಿಗೆ ತಗಲುವ ಅನುದಾನ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದರು.

ನಿವೃತ್ತ ಶಿಕ್ಷಕ ರಾಮಯ್ಯ ಉಪನ್ಯಾಸ ನೀಡಿ, ಕನಕದಾಸರ ಜೀವನ ಚರಿತ್ರೆ, ಕನಕದಾಸರ ಕೀರ್ತನೆಗಳು, ಕನಕದಾಸರು ಜಾತಿ, ಮತ, ಮೇಲು-ಕೀಳು ಎಂಬ ಭೇದವನ್ನು ತಿರಸ್ಕರಿಸಿದರು. ದೇವರ ಮುಂದೆ ಎಲ್ಲರೂ ಒಂದೇ ಎಂಬ ಸತ್ಯವನ್ನು ಸಾರಿದರು ಎಂಬ ಕನಕದಾಸರ ಸಂದೇಶಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ರಂಗನಾಥ್, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ದೇವನಹಳ್ಳಿ ತಹಸೀಲ್ದಾರ್ ಅನಿಲ್, ಇಒ ಮುನಿರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕಲ್ಪನಾ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಹೇಶ್, ತಾಲೂಕು ಅಧ್ಯಕ್ಷ ಕೋದಂಡರಾಮಯ್ಯ, ನಿಕಟಪೂರ್ವ ತಾ. ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಉಪಾಧ್ಯಕ್ಷರಾದ ರವಿಕುಮಾರ್, ಪಿಳ್ಳಪ್ಪ, ಯುವ ಘಟಕದ ತಾಲೂಕು ಅಧ್ಯಕ್ಷ ಉಮೇಶ್ ,ತಾಲೂಕು ಮಹಿಳಾ ಘಟಕದ ಅದ್ಯಕ್ಷೆ ಮಾಧವಿ ಕಾಂತರಾಜ್, ಗೌರವಾಧ್ಯಕ್ಷ ಪಿ.ರವಿಕುಮಾರ್, ಕಾರ್ಯಾಧ್ಯಕ್ಷ ಎನ್.ರಮೇಶ್, ಸಹಕಾರ್ಯದರ್ಶಿ ಜಿ.ಸಿ ಮುನಿರಾಜು, ಸಂಘಟನಾ ಕಾರ್ಯದರ್ಶಿ ರಾಮಾಂಜಿನಪ್ಪ, ಸಲಹೆಗಾರ ಬಿ.ಎಂಬೀರಪ್ಪ, ಕೆ.ವಿ.ಪ್ರಕಾಶ, ಮಾಜಿ ಅಧ್ಯಕ್ಷರಾದ ಮುನಿನಂಜಪ್ಪ ಸಿ.ಮುನಿರಾಜು ಪಾಪಣ್ಣ, ನಾರಾಯಣಪ್ಪ, ಉಗನವಾಡಿ ಮಂಜುನಾಥ್ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕದಾಸರು ಸಮಾನತೆಯ ಹರಿಕಾರ: ತಂಗಡಗಿ
ಬಿಜಿಎಸ್‌ ಸಂಸ್ಥೆ ಆಲದ ಮರ ಇದ್ದಂತೆ: ಡಿಕೆ