ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕನ್ನಡ ಸಾಂಸ್ಕೃತಿಕ ಲೋಕದ ಮಹೋನ್ನತ ವ್ಯಕ್ತಿಗಳಲ್ಲಿ ಒಬ್ಬರಾದ ಕನಕದಾಸರು, ತಮ್ಮ ಕೃತಿಗಳ ಮೂಲಕ ಕಟ್ಟಿಕೊಟ್ಟ ಜ್ಞಾನ ಎಲ್ಲ ಕಾಲಕ್ಕೂ ಪ್ರಸ್ತೂತ ಅವರೊಬ್ಬ ದಾರ್ಶನಿಕರಾದರೆ ಮೇದಾರ ಕೇತಯ್ಯ ಕಾಯಕ ಜೀವಿಯಾಗಿದ್ದರು ಎಂದು ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.ನಗರದ ಶಿವಾನಂದ ಜೀನ್ ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಭಕ್ತ ಕನಕದಾಸರು ಹಾಗೂ ಮೇದಾರ ಕೇತಯ್ಯನವರ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.
ಭಾರತದ ಭಕ್ತಿ ಸಾಹಿತ್ಯ ಪರಂಪರೆಯಲ್ಲಿ ಕನಕದಾಸರದು ಪ್ರಮುಖ ಸ್ಥಾನ, ಪುರಂದರ ದಾಸರಂತೆ ಕನಕದಾಸರೂ ಮಹಾಜ್ಞಾನಿಗಳು. ಅವರು ಬರೀ ಕವಿಯಷ್ಟೇ ಆಗಿರಲಿಲ್ಲ. ಸಮಾಜ ಸುಧಾರಕ. ದಾರ್ಶನಿಕ ಹಾಗೂ ಮಾನವತೆಯ ಸಾಕಾರವಾಗಿದ್ದರು. ಅವರ ಕೃತಿಗಳು ಭಕ್ತಿಯ ಪರಮೋನ್ನತ ಸ್ಥಿತಿ ತೋರಿಸುವುದರ ಜೊತೆಗೆ ಅದರ ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳು ಮತ್ತು ದೈವಭಕ್ತಿಯ ಸಾರ್ಥಕತೆಯ ಸಂದೇಶ ಸಾರಿದ್ದವು. ಮೇದಾರ ಕೇತಯ್ಯ ಶರಣರು ಬಸವಯುಗದ ದೃವತಾರೆಯಾಗಿದ್ದರು. ಕಾಯಕವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಕಾಯಕ ಜೀವಿಯಾಗಿದ್ದರು. ಇಂತಹ ಮಹಾಪುರುಷರನ್ನು ಕಾಲಕಾಲಕ್ಕೆ ಸ್ಮರಣೆ ಮಾಡಿಕೊಳ್ಳುವ ಅವರ ಜ್ಞಾನವನ್ನು ಮುಂದಿನ ಪಿಳಿಗೆಗೆ ಪ್ರಸರಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರಸಭೆ ಅದ್ಯಕ್ಷ ಸವಿತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಭಾ ರಾವೆ, ಜಿಲ್ಲಾ ಉಪಾಧ್ಯಕ್ಷೆ ಭಾಗೀರತಿ ಪಾಟೀಲ, ಲಕ್ಷ್ಮೀ ನಾರಾಯಣ ಕಾಸಟ, ಡಾ.ಎಂ.ಎಸ್. ದಡ್ಡೆನ್ನವರ, ಗುಂಡುರಾವ ಶಿಂದೆ, ಶಿವಾನಂದ ಟವಳಿ, ಸವರಾಜ ಯಂಕಂಚಿ, ವೀರಣ್ಣ ಹಳೆಗೌಡರ, ಮೇದಾರ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜೈನಾಪುರ. ಅಯ್ಯಪ್ಪ ಮೇದಾರ, ಚನ್ನಬಸು ಬುಡ್ಡರ, ಮಹಾದೇವ ಬುಡ್ಡರ, ಬೀಮಪ್ಪ ಬುಡ್ಡರ, ದ್ಯಾವಪ್ಪ ರಾಕುಂಪಿ, ಸರಸ್ವತಿ ಕುರಬರ, ಶಾಂತಾ ಹನಮಕ್ಕನವರ, ಜ್ಯೋತಿ ಭಜಂತ್ರಿ, ಶಶಿಕಲಾ ಮಜ್ಜಗಿ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ ಸೇರಿದಂತೆ ಅನೇಕರು ಭಾಗವಹಿಸಿದ್ದರು.