ಕನ್ನಡಪ್ರಭ ವಾರ್ತೆ ಭಾರತೀನಗರ
ಗ್ರಾಮದ ಆಂಜನೇಯಸ್ವಾಮಿ ದೇಗುಲದ ಬಳಿ ಈಗಿನ ಬಸಪ್ಪನಿಗೆ ಹೂವು, ಹೊಂಬಾಳೆ ಪೂಜೆ ನೆರವೇರಿಸಿ ವೀರಭದ್ರನ ಕುಣಿತ, ಪೂರ್ಣ ಕುಂಭಗಳು, ವಿವಿಧ ರೀತಿಯ ಚರ್ಮವಾದ್ಯಗಳ ಸಮೇತವಾಗಿ ಗ್ರಾಮದ ರಥ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ತರುವಾಯ ಕಾಲಭೈರವೇಸ್ವಾಮಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿದ ಬಸವ ಶಿವೈಕ್ಯ ಬಸಪ್ಪನ ವಿಗ್ರಹ ಪ್ರತಿಷ್ಠಾಪಿಸಿದ್ದ ಸ್ಥಳಕ್ಕೆ ಆಗಮಿಸಿತು. ಬಸಪ್ಪನ ಸಮ್ಮುಖದಲ್ಲಿ ಮಂಜುನಾಥ ಶರ್ಮ, ನವೀನ್ ಕುಮಾಶರ್ಮ, ವೆಂಕಟಾದ್ರಿಶರ್ಮ ನೇತೃತ್ವದಲ್ಲಿ ವಿಧಿ ವಿಧಾನಗಳೊಂದಿಗೆ ಪಂಚಾಮೃತಾಂಭಿಷೇಕ, ತೀರ್ಥಾಭಿಷೇಕ, ರುದ್ರಾಭಿಷೇಕ,ಪುಷ್ಪಾಭಿಷೇಕ, ಅಂತಿಮವಾಗಿ ಕನಕಾಭಿಷೇಕ ನಡೆಸಲಾಯಿತು.ಎಲ್ಲಾ ರೀತಿಯ ಪೂಜಾ ಕೈಂಕರ್ಯಗಳನ್ನು ಸಹಸ್ರಾರು ಭಕ್ತಾದಿಗಳು ಕಣ್ತುಂಬಿಕೊಂಡರು. ಪೂಜೆ ನಂತರ ಭಕ್ತರೂ ಕೂಡ ತಮ್ಮ ಬಳಿ ಇರುವ ಕನಕಗಳಿಂದಿ ಅಭಿಷೇಕ ಮಾಡಿದರು. ಅಮಾವಾಸ್ಯೆ ದಿನವಾದ್ದರಿಂದ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಕಾಲಭೈರವೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದರು. ಎಲ್ಲಾ ಭಕ್ತಾದಿಗಳಿಗೂ ಪ್ರಸಾದ, ಅನ್ನಸಂತರ್ಪಣೆ ನಡೆಯಿತು.
ಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ – 124.80 ಅಡಿ
ನೀರಿನ ಸಂಗ್ರಹ – 49.452 ಟಿಎಂಸಿ