ಪುಷ್ಪಯಾಗದೊಂದಿಗೆ ಕನಕಾಚಲಪತಿ ಜಾತ್ರೆ ಸಂಪನ್ನ

KannadaprabhaNewsNetwork |  
Published : Mar 26, 2025, 01:37 AM IST
ಪೋಟೋಪುಷ್ಪಯಾಗದ ಮೂಲಕ ಕನಕಾಚಲಪತಿ ಜಾತ್ರೆ ಸಂಪನ್ನಗೊಂಡಿತು.  | Kannada Prabha

ಸಾರಾಂಶ

ಕನಕಾಚಲಪತಿ ದೇವಸ್ಥಾನದಿಂದ ಆರಂಭಗೊಂಡ ಉತ್ಸವ ಮೆರವಣಿಗೆ ರಾಜಬೀದಿಯ ಮೂಲಕ ತೇರಿನ ಹನುಮಪ್ಪ ದೇವಸ್ಥಾನದ ವರೆಗ ಸಾಗಿ ವಿಶೇಷ ಪೂಜೆಯೊಂದಿಗೆ ದೇವಸ್ಥಾನಕ್ಕೆ ಮರಳಿತು. ಭಕ್ತರು ಉತ್ಸವವನ್ನು ಹೊತ್ತು ಸಂಭ್ರಮಿಸಿದರು.

ಕನಕಗಿರಿ:

ಕನಕಾಚಲಪತಿ ಜಾತ್ರಾ ಕಾರ್ಯಕ್ರಮಗಳು ೧೩ನೇ ದಿನವಾದ ಸೋಮವಾರ ಪುಷ್ಪಯಾಗದೊಂದಿಗೆ ಸಂಪನ್ನಗೊಂಡವು.ಪುಷ್ಪಯಾಗದ ಹಿನ್ನೆಲೆಯಲ್ಲಿ ಕನಕಾಚಲ, ಶ್ರೀದೇವಿ, ಭೂದೇವಿಯರಿಯರಿಗೆ ನಾನಾ ಪುಷ್ಪಗಳ ಅಲಂಕಾರ ಗೈದು ವಿಶೇಷ ಪೂಜೆ, ಮಂಗಳಾರತಿ ಕಾರ್ಯಕ್ರಮಗಳು ಮೈಸೂರಿನ ಯಾಜ್ಞಿಕರಿಂದ ಶ್ರದ್ಧಾ ಭಕ್ತಿಯಿಂದ ನಡೆದವು.

ಇದಕ್ಕೂ ಮೊದಲು ಕನಕಾಚಲಪತಿ ದೇವಸ್ಥಾನದಿಂದ ಆರಂಭಗೊಂಡ ಉತ್ಸವ ಮೆರವಣಿಗೆ ರಾಜಬೀದಿಯ ಮೂಲಕ ತೇರಿನ ಹನುಮಪ್ಪ ದೇವಸ್ಥಾನದ ವರೆಗ ಸಾಗಿ ವಿಶೇಷ ಪೂಜೆಯೊಂದಿಗೆ ದೇವಸ್ಥಾನಕ್ಕೆ ಮರಳಿತು. ಭಕ್ತರು ಉತ್ಸವವನ್ನು ಹೊತ್ತು ಸಂಭ್ರಮಿಸಿದರು.

ಜಾತ್ರೆಯಲ್ಲಿ ಸೇವೆ ಸಲ್ಲಿಸಿದ ರಥ, ಉತ್ಸವ ಕಟ್ಟುವ ಕೆಲಸಗಾರರಿಗೆ, ಚಿತ್ರಗಾರರಿಗೆ, ಬ್ಯಾಂಡ್ ಬಾರಿಸುವವರಿಗೆ, ಕಮ್ಮಾರರಿಗೆ ಹಾಗೂ ದಿವಟಗಿ, ಛತ್ರಿ ಹಿಡಿಯುವ ಭಕ್ತರಿಗೆ ದೇವಸ್ಥಾನ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.

ಈ ವೇಳೆ ದೇವಸ್ಥಾನ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ. ಕನಕಪ್ಪ, ಪ್ರಮುಖರಾದ ಮಧುಸೂದನ ಅರ್ಚಕ, ಕನಕರೆಡ್ಡಿ ಮಹಲಿನಮನಿ, ಶರಣಬಸವರೆಡ್ಡಿ ಹುಲಿಹೈದರ, ಗುಂಡಪ್ಪ ಚಿತ್ರಗಾರ, ರಾಮಾಂಜನೇಯರೆಡ್ಡಿ ಚಿತ್ರಿಕಿ, ರಂಗಪ್ಪ ನಾಯಕ, ಅಯ್ಯನಗೌಡರೆಡ್ಡಿ, ಹನುಮೇಶ ಡಿಶ್, ಮುದುಕರೆಡ್ಡಿ, ಬಸವರಾಜ ಬಳಿಗಾರ, ಹುಚ್ಚಾರೆಡ್ಡಿ ಹುಲಿಹೈದರ, ವಿನಯ ಮರಾಠಿ, ರಾಜಶೇಖರರೆಡ್ಡಿ ಓಣಿಮನಿ ಸೇರಿದಂತೆ ದೇವಸ್ಥಾನ ಸಿಬಂದಿಯವರು, ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ