ಕನ್ನಡಪ್ರಭ ವಾರ್ತೆ ಮಾಲೂರು
ಅಸಮಾನತೆ ವಿರುದ್ಧ ಹೋರಾಟ
ಕನಕದಾಸರು ತಮ್ಮ ದಾಸಪದಗಳು ಹಾಗೂ ವಚನಗಳಿಂದ ಸಮಾಜದ ಒಳಿತಿಗಾಗಿ ಸಮಾಜದಲ್ಲಿನ ಮೇಲು-ಕೀಳು ಎಂಬ ಭೇದ ಭಾವವನ್ನು ಹೋಗಲಾಡಿಸಲು ಶ್ರಮಿಸಿದರು ಕನಕದಾಸರು ಒಂದು ವರ್ಗಕ್ಕೆ ಸೀಮಿತವಲ್ಲ ಎಲ್ಲಾ ವರ್ಗದ ಜನತೆ ಸೇರಿ ಅರ್ಥಪೂರ್ಣವಾಗಿ ಕನಕ ಜಯಂತಿಯನ್ನು ಆಚರಣೆಮಾಡುವಂತಾಗಬೇಕು ಎಂದ ಶಾಸಕರು ಕನಕದಾಸರು ಬಸವೇಶ್ವರರು ವಾಲ್ಮೀಕಿ ಮಹರ್ಷಿಗಳು ದೈವ ಸ್ವರೂಪಿಗಳು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು. ‘ಗ್ಯಾರಂಟಿ’ ಭರವಸೆ ಈಡೇರಿಕೆಕುರುಬ ಸಮಾಜಕ್ಕೆ ಸೇರಿದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಗಳಾಗಿ ದಿವಂಗತ ದೇವರಾಜ ಅರಸು ಅವರ ಅವಧಿಯ ಆಡಳಿತವನ್ನು ನೀಡುತ್ತಿದ್ದಾರೆ ಅವರು ಅನುಷ್ಠಾನಗೊಳಿಸಿದ ಯೋಜನೆಗಳು ಬಡವರು ಹಿಂದುಳಿದ ವರ್ಗದವರಿಗೆ ವರದಾನವಾಗಿದೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದಾರೆ ಅವರು ಕಾಂಗ್ರೆಸ್ ಪಕ್ಷದಲ್ಲಿ ಮಾಸ್ ಲೀಡರ್ ಆಗಿ ಬೆಳೆದಿದ್ದಾರೆ. ತಾಲೂಕಿನ ಅಭಿವೃದ್ಧಿಗೆ ೨೫೦೦ ಕೋಟಿ ರೂಗಳಷ್ಟು ಅನುದಾನವನ್ನು ನೀಡಿದ್ದಾರೆ ಎಂದು ಸಾಸಕರು ಹೇಳಿದರು.ನಗರಸಭೆಯ ಅಧ್ಯಕ್ಷ ವಿಜಯಲಕ್ಷ್ಮಿ , ತಾಪಂ ಇಒ.ಕೃಷ್ಣಪ್ಪ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಚ್‌ಎಂ. ವಿಜಯನರಸಿಂಹ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ತಾಲೂಕು ಕುರುಬ ಸಂಘದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ರಾಜ ಕುರುಬ ಸಂಘದ ಕಾರ್ಯದರ್ಶಿ ಎಂ.ವಿ ಸೋಮಶೇಖರ್, ಅಧ್ಯಕ್ಷರುಗಳಾದ ಎಂ.ಕೃಷ್ಣಪ್ಪ ಎಸ್. ಜಿ ರಾಮಮೂರ್ತಿ ನಗರಸಭೆ ಸದಸ್ಯರಾದ ಇಮ್ಮಿಯಾಜ್ ಖಾನ್, ಕೋಮಲ ಹಿರಿಯ ಮುಖಂಡರಾದ ಎಂ. ವಿ ಹನುಮಂತಯ್ಯ, ವೀರಭದ್ರಪ್ಪ ಕಾರ್ಯಾಧ್ಯಕ್ಷರ ಜನನಎಂ ಎಸ್ ಶ್ರೀನಿವಾಸ , ದಿನೇರಿ ಹಾರೋಹಳ್ಳಿ ಸೊಸೈಟಿ ಮಾಜಿ ಅಧ್ಯಕ್ಷ ಅಧ್ಯಕ್ಷ ಟಿ ಈ ದೇವರಾಜ್ ಮುಖಂಡರುಗಳಾದ ಆನೆಪುರ ದೇವರಾಜ್, ಎಂ.ಸಿ ರವಿ. ವಿಜಯೇಂದ್ರ ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ ಗಂಗಾರವಿ ರಮೇಶ್ ಮಂಜುನಾಥ್ ಇನ್ನಿತರರು ಹಾಜರಿದ್ದರು.