ಮಾನವೀಯ ಮೌಲ್ಯ ಸಾರಿದ ಕನಕದಾಸರು: ಶಾಸಕ ಷಡಕ್ಷರಿ

KannadaprabhaNewsNetwork |  
Published : Nov 09, 2025, 01:30 AM IST
ಮಾನವೀಯ ಮೌಲ್ಯಗಳನ್ನು ಸಾರಿದ ಶ್ರೇಷ್ಠ ದಾಸರೇ ಕನಕದಾಸರು : ಕೆ.ಷಡಕ್ಷರಿ | Kannada Prabha

ಸಾರಾಂಶ

ಕನಕದಾಸರು ಯಾವುದೊ ಒಂದು ಸಮಾಜವನ್ನು ಗಣನೆಗೆ ತೆಗೆದುಕೊಂಡು ಸಂದೇಶ ನೀಡದೆ ಎಲ್ಲಾ ಸಮಾಜಗಳು ಒಟ್ಟಾಗಿರಬೇಕೆಂಬ ದೃಷ್ಟಿಯಿಂದ ದಾಸ ಸಾಹಿತ್ಯ ಮೂಲಕ ಸಮಾಜದ ಅಭಿವೃದ್ದಿಗೆ ಶ್ರಮಿಸಿದ್ದರು.

ಕನ್ನಡಪ್ರಭವಾರ್ತೆ ತಿಪಟೂರು

ದಾಸ ಸಾಹಿತ್ಯ ಪರಂಪರೆಯಲ್ಲಿ ಶ್ರೇಷ್ಠರಾದ ಕನಕದಾಸರು, ಜನರಿಗೆ ಮಾನವೀಯ ಮೌಲ್ಯಗಳನ್ನು ಸಾರುವ ಮೂಲಕ ಜಗತ್ತಿಗೆ ದಾರಿ ದೀಪವಾದವರು. ಇಂತಹ ಮಹಾಪುರುಷರ ತತ್ವಾದರ್ಶ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ತಾಲೂಕು ಆಡಳಿತದ ವತಿಯಿಂದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಆಯೋಜಿಸಿದ್ದ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಕನಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರು ಯಾವುದೊ ಒಂದು ಸಮಾಜವನ್ನು ಗಣನೆಗೆ ತೆಗೆದುಕೊಂಡು ಸಂದೇಶ ನೀಡದೆ ಎಲ್ಲಾ ಸಮಾಜಗಳು ಒಟ್ಟಾಗಿರಬೇಕೆಂಬ ದೃಷ್ಟಿಯಿಂದ ದಾಸ ಸಾಹಿತ್ಯ ಮೂಲಕ ಸಮಾಜದ ಅಭಿವೃದ್ದಿಗೆ ಶ್ರಮಿಸಿದ್ದರು. ಜಾತಿಗಳ ನಡುವೆ ಮೇಲುಕೀಳು ಭಾವನೆಯನ್ನು ತೊಡೆದುಹಾಕಲು ಹೋರಾಟ ನಡೆಸಿದ್ದರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿಕೊಳ್ಳಲು ಕನಕದಾಸರಂತಹ ಮಹಾಪುರುಷರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿ ಎಂದರು.

ತಹಸೀಲ್ದಾರ್ ಮೋಹನ್‌ಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಗ್ರೇಡ್-೨ ತಹಸೀಲ್ದಾರ್ ಜಗನ್ನಾಥ್, ಸಮಾಜದ ಮುಖಂಡರಾದ ಚಂದ್ರೇಗೌಡ, ತರಕಾರಿ ಗಂಗಾಧರ್, ಬಜಗೂರು ಮಂಜುನಾಥ್, ಲಿಂಗರಾಜು, ಕಸಾಪ ಗೋವಿಂದರಾಜು ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ