ದೇಶದ ಏಕತೆ ಕಾಪಾಡುವಲ್ಲಿ ಕನಕದಾಸರ ಸಂದೇಶ ಪೂರಕ: ತಹಸೀಲ್ದಾರ್ ಶ್ರೀಧರ್ ಕಂಕನವಾಡಿKanakadasa''s message for maintaining the unity of the country Supplement: Tehsildar Sridhar Kankanawadi

KannadaprabhaNewsNetwork |  
Published : Nov 12, 2025, 01:45 AM IST
11ಎಚ್ಎಸ್ಎನ್14 : ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ  ಕನಕದಾಸರ ಜಯಂತಿಯನ್ನು  ಆಚರಿಸಲಾಯಿತು. | Kannada Prabha

ಸಾರಾಂಶ

ಕೇವಲ ಒಂದೊಂದು ಜಾತಿಗೆ ಒಂದೊಂದು ದಿನವನ್ನಾಗಿ ಇಟ್ಟು ಆಚರಿಸಿದರೆ ಇಡೀ ಜಾತಿಗಳನ್ನು ಒಡೆದಂತಾಗುತ್ತದೆ. ಎಲ್ಲರೂ ಸಹ ಒಂದೇ ಎಂಬ ಭಾವನೆಯಿಂದ ಒಟ್ಟಾಗಿ ಆಚರಿಸಬೇಕು. ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣ ಕುರುಬ ಸಮಾಜದ ಅಭಿವೃದ್ಧಿಗೆ ಬಂದಿರುವ ಅನುದಾನಗಳು ಬಳಕೆಯಾಗದೇ ವಾಪಾಸ್ಸು ಸರ್ಕಾರಕ್ಕೆ ಹೋಗುತ್ತಿದೆ.

ಕನ್ನಡಪ್ರಭ ವಾರ್ತೆ, ಬೇಲೂರು

ದಾಸಶ್ರೇಷ್ಠ ಕನಕದಾಸರ ಜೀವನ ಚರಿತ್ರೆ ಹಾಗೂ ಅವರ ತತ್ವಗಳನ್ನು ನಮ್ಮ ಯುವ ಪೀಳಿಗೆಯವರು ಅಳವಡಿಸಿಕೊಂಡರೆ ರಾಷ್ಟ್ರದ ಏಕತೆ, ಸೌಹಾರ್ದತೆ ಮತ್ತು ಶಾಂತಿ ಕಾಪಾಡಬಹುದು ಎಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕನಕದಾಸರ ಜಯಂತಿಯಲ್ಲಿ ಮಾತನಾಡಿ, ದಾಸಶ್ರೇಷ್ಠ ಕನಕದಾಸರು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಭಕ್ತಿಯ ಮೂಲಕ ಮಾನವತೆಯ ಸಂದೇಶವನ್ನು ನೀಡಿದ ಮಹಾನ್ ಸಂತರಾಗಿದ್ದರು. ಅವರು ಜನಾಂಗ, ಧರ್ಮ, ಭಾಷೆ ಎನ್ನದೇ ಎಲ್ಲರನ್ನೂ ಸಮಾನವಾಗಿ ನೋಡಬೇಕೆಂದು ಬೋಧಿಸಿದ್ದರು. ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಮಾತನಾಡಿ, ಸಮಾಜದಲ್ಲಿ ಬೆಳೆಯುತ್ತಿರುವ ಅಸಮಾನತೆ, ಅಸಹಿಷ್ಣುತೆ ಹಾಗೂ ವಿಭಜನೆಯ ಮನೋಭಾವಗಳಿಗೆ ಕನಕದಾಸರ ಉಪದೇಶಗಳು ಅತ್ಯಂತ ಪ್ರಸ್ತುತ. ಅವರ ಕೀರ್ತನೆಗಳು ಮಾನವ ಮೌಲ್ಯಗಳನ್ನು ಎತ್ತಿಹಿಡಿಯುವ ಶಾಶ್ವತ ಸಂದೇಶಗಳನ್ನು ಒಳಗೊಂಡಿವೆ. ಅವುಗಳನ್ನು ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಕುರುಬ ಸಂಘದ ಮುಖಂಡ ಬಿ.ಎಲ್. ಧರ್ಮೇಗೌಡ ಮಾತನಾಡಿ, ಕುರುಬ ಸಮಾಜ ಕೇವಲ ಒಂದು ಜಾತಿಗೆ ಮೀಸಲಾಗುತ್ತಿರುವುದು ವಿಪರ್ಯಾಸ. ಯಾವುದೇ ಮಹಾನ್ ಪುರುಷರ ಜಯಂತಿಗಳು ಆಚರಿಸುವಾಗ ಎಲ್ಲಾ ಜಾತಿ ಜನಾಂಗದವರನ್ನು ಒಗ್ಗೂಡಿಸಿ ಕಾರ್ಯಕ್ರಮ ಮಾಡಿದಾಗ ಮಾತ್ರ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸುತ್ತಿದ್ದು ಎಲ್ಲರೂ ಒಗ್ಗೂಡಿಸಿಕೊಂಡು ಜಯಂತಿಯನ್ನು ಆಚರಿಸಬೇಕು .ಕೇವಲ ಒಂದೊಂದು ಜಾತಿಗೆ ಒಂದೊಂದು ದಿನವನ್ನಾಗಿ ಇಟ್ಟು ಆಚರಿಸಿದರೆ ಇಡೀ ಜಾತಿಗಳನ್ನು ಒಡೆದಂತಾಗುತ್ತದೆ. ಎಲ್ಲರೂ ಸಹ ಒಂದೇ ಎಂಬ ಭಾವನೆಯಿಂದ ಒಟ್ಟಾಗಿ ಆಚರಿಸಬೇಕು. ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣ ಕುರುಬ ಸಮಾಜದ ಅಭಿವೃದ್ಧಿಗೆ ಬಂದಿರುವ ಅನುದಾನಗಳು ಬಳಕೆಯಾಗದೇ ವಾಪಾಸ್ಸು ಸರ್ಕಾರಕ್ಕೆ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕುರುಬ ಸಂಘದ ಅಧ್ಯಕ್ಷೆ ಹೇಮಾವತಿ ಮಂಜುನಾಥ್, ಕುರುಬ ಸಂಘದ ಜಿಲ್ಲಾ ನಿರ್ದೇಶಕ ಬಿ.ಎಂ. ಸಂತೋಷ್, ಪುರಸಭೆ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್, ಕೆಡಿಪಿ ಸದಸ್ಯೆ ಸೌಮ್ಯ ಆನಂದ್, ಮಂಜುನಾಥ್, ಗಿರೀಶ್, ಮಾನ ಮಂಜೇಗೌಡ, ರಾಜು, ಹರೀಶ್, ಆರ್ ಎಫ್ ಒ ಯತೀಶ್, ಶಿವಮರಿಯಪ್ಪ, ಮುತ್ತಪ್ಪ, ಪುರಸಭೆ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ ಇತರರು ಇದ್ದರು.

PREV

Recommended Stories

ಪರಪ್ಪನ ಅಗ್ರಹಾರ ಜೈಲಿಗೆ ಅಂಶು ಕುಮಾರ್‌ ಅಧೀಕ್ಷಕ
ಬಟ್ಟೆ ವ್ಯಾಪಾರ ಸೋಗಲ್ಲಿ 1 ಕೋಟಿಯ ಬುಲೆಟ್‌ ಬೈಕ್‌ ಕದ್ದ