ಕನಕದಾಸರ ಚಿಂತನೆ ಸಾರ್ವಕಾಲಿಕ ಶ್ರೇಷ್ಠ

KannadaprabhaNewsNetwork |  
Published : Dec 03, 2025, 02:15 AM IST
೦೨ ವೈಎಲ್‌ಬಿ ೦೨ಯಲಬುರ್ಗಾ ತಾಲೂಕಿನ ಮಲಕಸಮುದ್ರದಲ್ಲಿ ಭಕ್ತ ಕನಕದಾಸರ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಸಮಾನತೆಯ ತತ್ವ ಸಾರಿರುವುದು ಕಾಣಬಹುದು. ಕನಕದಾಸರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ

ಯಲಬುರ್ಗಾ: ಭಕ್ತ ಕನಕದಾಸರ ಚಿಂತನೆ ಸಾರ್ವಕಾಲಿಕ ಶ್ರೇಷ್ಠವಾಗಿದೆ. ಅವರ ತತ್ವ ಆದರ್ಶ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನ್ಯಾಯವಾದಿ ಸಾವಿತ್ರಿ ಗೊಲ್ಲರ್ ಹೇಳಿದರು.

ತಾಲೂಕಿನ ಮಲಕಸಮುದ್ರ ಗ್ರಾಮದಲ್ಲಿ ನಡೆದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಸಮಾನತೆಯ ತತ್ವ ಸಾರಿರುವುದು ಕಾಣಬಹುದು. ಕನಕದಾಸರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಅವರ ವಿಚಾರ, ಮೌಲ್ಯ ಅಳವಡಿಸಿಕೊಂಡಲ್ಲಿ ಪ್ರತಿಯೊಬ್ಬ ಮನುಷ್ಯ ಒಳ್ಳೆಯ ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ. ಎಲ್ಲ ಸಮುದಾಯಗಳ ಜನತೆ ಶಾಂತಿ ಮತ್ತು ಸಹಬಾಳ್ವೆಯಿಂದ ಬಾಳಲು ಪ್ರೇರಣೆಯಾಗಲಿದೆ ಎಂದರು.

ಹಿರಿಯ ಮುಖಂಡ ಕರಿಯಪ್ಪ ಗುರಿಕಾರ ಮಾತನಾಡಿದರು. ಕಾರ್ಯಕ್ರಮಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಯಿತು.

ಈ ಸಂದರ್ಭ ಗ್ರಾಪಂ ಸದಸ್ಯ ಬಸವರಾಜ ಬಿಸೆರೊಟ್ಟಿ, ಸಣ್ಣೀರಪ್ಪ ದಸ್ತಾನಿ, ಅಷ್ರಫ್‌ಅಲಿ ಬಳಿಗಾರ, ಉಮೇಶ ವಡ್ಡರ, ಕಾಂತಪ್ಪ ಬಿನ್ನಾಳ, ಶರಣಪ್ಪ ಗೊಲ್ಲರ, ಬಾಲಪ್ಪ ಮಾರನಾಳ, ಈರಣ್ಣ ದಸ್ತಾನಿ, ಮುದುಕಪ್ಪ ಗೊಲ್ಲರ, ರಾಮಣ್ಣ ಛಲವಾದಿ ಸೇರಿದಂತೆ ಗ್ರಾಮದ ಪ್ರಮುಖರು, ಮುಖಂಡರು ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ