ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮೇಲ್ವರ್ಗಕ್ಕೆ ಬಿಸಿತುಪ್ಪ
16ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಎಲ್ಲೇ ಮೀರಿತ್ತು, ಮೇಲು ಕೀಳು,ಅಂಧಾಕಾರ ಮೂಡನಂಬಿಕೆ ಅಜ್ಞಾನ ತಾಂಡವ ಅಡುತ್ತಿತ್ತು. ಅಂದಿನ ಕಾಲಘಟ್ಟದಲ್ಲಿ ಕನಕದಾಸರ ಜನನ ಅಗಿ ಈ ವ್ಯವಸ್ಥೆಗೆ ಸೆಡ್ಡು ಹೊಡೆದು ಮೇಲ್ವರ್ಗದವರ ಪಾಲಿಗೆ ಬಿಸಿತುಪ್ಪವಾದರು. ಕನಕದಾಸರು ಸಮಾಜದಲ್ಲಿರುವ ಜಾತಿ ವ್ಯವಸ್ಥೆ ಬಗ್ಗೆ ಧ್ವನಿ ಎತ್ತಿ ತಮ್ಮ ಕೀರ್ತನೆಗಳ ಮೂಲಕ ಸಮಾಜ ಸುಧಾರಣೆಗೆ ಮುಂದಾದ ಮಹಾನ್ ದಾಸ ಶ್ರೇಷ್ಠ ಅಂದರೆ ತಪ್ಪಗಲಾರದು. ಕುಲ ಕುಲ ಎಂದು ಹೊಡೆದಾಡದಿರಿ ಎಂಬ ವಾಕ್ಯ ಅಜಾರಾಮವಾದುದ್ದು ಇದನ್ನು ನಾವು ಆರ್ಥೈಸಿದರೆ ಜಾತಿ ವ್ಯವಸ್ಥೇ ಹೋಗಲಾಡಿಸಬಹುದು ಎಂದರು.ಭಕ್ತಿಯ ಜೊತೆಗೆ ವೈಚಾರಿಕ ಹಿನ್ನೆಲೆಯಲ್ಲಿ ನಾವು ಕನಕರನ್ನು ಅರಿತರೆ ಮಾತ್ರ ಕನಕದಾಸರು ಒಬ್ಬ ಬಂಡಾಯಗಾರರು ಎನ್ನುವುದು ನಮಗೆ ಅರ್ಥ ಆಗುತ್ತದೆ.ಕನಕರನ್ನು ಪೂಜಿಸುವ ಜೊತೆಗೆ ಅವರೊಳಗಿನ ಪ್ರತಿಭಟನಾ ಶಕ್ತಿಯನ್ನು ನಾವು ಗ್ರಹಿಸಬೇಕಿದೆ.ಕನಕರೆಂದರೆ ಭಕ್ತಿ, ಭಾವ, ತನ್ಮಯತೆ ಮಾತ್ರವೇ ಎಂದುಕೊಂಡರೆ ಸಾಲದು. ಅವರ ಹೋರಾಟ, ವೈಚಾರಿಕ ಚಿಂತನೆ, ಚಳವಳಿಗಳ ಬಗ್ಗೆ ಹೆಚ್ಚೆಚ್ವು ತಿಳಿಯಬೇಕು. ಹೆಚ್ಚೆಚ್ಚು ಮಾತಾಡಬೇಕು. ಭಕ್ತಿಮಾರ್ಗಕ್ಕೆ ಸೀಮಿತರಲ್ಲ
ಕನಕರ ಹೋರಾಟದ ಪರಂಪರೆಯನ್ನೇ ನಾಶಮಾಡುವ ಹುನ್ನಾರದ ಭಾಗವಾಗಿ ಅವರನ್ನು ಕೇವಲ ಭಕ್ತಿಗೆ ಸೀಮಿತಗೊಳಿಸುತ್ತಿದ್ದಾರೆ. ಇದು ನಮ್ಮ ಇವತ್ತಿನ ಮತ್ತು ಮುಂದಿನ ಪೀಳಿಗೆಯಲ್ಲಿ ಹೋರಾಟವನ್ನು ಮರೆಸುವ ತಂತ್ರವೇ ಆಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಇದೇ ವೇಳೆ ಸಂಸದ ಡಾ.ಕೆ.ಸುಧಾಕರ್ ಮತ್ತು ಸಮಾಜದ ಮುಖಂಡರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎ.ಗಜೇಂದ್ರ,ನಗರಸಭೆ ಸದಸ್ಯರಾದ ಭಾರತಿ,ಸುಭ್ರಮಣ್ಯಾಚಾರಿ, ಮಂಜುನಾಥಾಚಾರಿ, ಕುರುಬ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಆನಂದ್, ಮುಖಂಡರಾದ ಸಂತೋಷ್,ಅರುಣ್,ಅಮರಾವತಿ ಸಮುದಾಯದ ಮುಖಂಡರಾದ ಬಿ.ಮುನಿಯಪ್ಪ.ಡಾ.ರಾಮು,ಶ್ರೀನಿವಾಸ್, ರಾಮಚಂದ್ರ ಮತ್ತಿತರರು ಇದ್ದರು.