ದಾಸಸಾಹಿತ್ಯ ಕ್ಷೇತ್ರಕ್ಕೆ ಕನಕದಾಸರ ಕೊಡುಗೆ ಅನನ್ಯ: ಡಾ.ನಿಂಗಣ್ಣ

KannadaprabhaNewsNetwork |  
Published : Nov 19, 2024, 12:48 AM IST
ಜೇವರ್ಗಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕನಕದಾಸರ 537ನೇ ಜಯಂತಿ ನಿಮಿತ್ತ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕನಕದಾರರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಜೇವರ್ಗಿ ತಾಲೂಕು ಆಡಳಿತದ ವತಿಯಿಂದ ನಡೆದ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದಲ್ಲಿ ಡಾ.ನಿಂಗಣ್ಣ ಅಭಿಮತ ವ್ಯಕ್ತಪಡಿಸಿದರು. ಸಹಜ ಬದುಕು ಬಾಳಿದ ದಾಸ ಶ್ರೇಷ್ಠ ಕನಕದಾಸರು ಜಾತಿ ಮತ ಮತ್ತು ಸಮಾಜದ ಪಿಡುಗುಗಳ ಬಗ್ಗೆ ಜನ ಸಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತಾ ಸಮಾಜ ಹಾಗೂ ದಾಸಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ನೀಡಿದ್ದು ಅವಿಸ್ಮರಣೀಯವಾಗಿದೆ.

ಕನ್ನಡಪ್ರಭ ವಾರ್ತೆ ಜೇವರ್ಗಿ

ಕನಕದಾಸರು ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆ ನೀಡಿದ್ದಾರೆ. ಕನಕದಾಸರು ಕನ್ನಡ ಮನಸ್ಸಿನ ವೈಚಾರಿಕ ಪರಂಪರೆಯ ಮಹತ್ವದ ಕೊಂಡಿ ಎಂಬುದರಲ್ಲಿ ಅನುಮಾನವಿಲ್ಲ ಎಂದು ಉಪನ್ಯಾಸಕ ಹಾಗೂ ಪ್ರಾಂಶುಪಾಲ ಡಾ.ಚಿ.ಸಿ. ನಿಂಗಣ್ಣ ಹೇಳಿದರು. ಲಲ

ಪಟ್ಟಣದ ಟೌನ್‌ಹಾಲ್‌ನಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ಆಯೋಜಿಸಿದ್ದ ಕನಕದಾಸರ 537ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ದಾಸ ಪರಂಪರೆಯ 50ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಒಬ್ಬರು. ಸಹಜ ಬದುಕು ಬಾಳಿದ ದಾಸ ಶ್ರೇಷ್ಠ ಕನಕದಾಸರು ಜಾತಿ ಮತ ಮತ್ತು ಸಮಾಜದ ಪಿಡುಗುಗಳ ಬಗ್ಗೆ ಜನ ಸಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತಾ ಸಮಾಜ ಹಾಗೂ ದಾಸಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ನೀಡಿದ್ದು ಅವಿಸ್ಮರಣೀಯವಾಗಿದೆ. ಅಖಿಲ ಭಾರತಮಟ್ಟದ ವೈಚಾರಿಕ ದಾರ್ಶನಿಕ ಪರಂಪರೆಯಲ್ಲಿ ಇವರ ಸ್ಥಾನವನ್ನು ನಾವಿನ್ನೂ ಸರಿಯಾಗಿ ಗುರುತಿಸಬೇಕಾಗಿದೆ ಎಂದರು.

ಕಾರ‍್ಯಕ್ರಮಕ್ಕೂ ಮುನ್ನ ಪಟ್ಟಣದ ಮಿನಿವಿಧಾನಸೌಧ ದಿಂದ ಟೌನ್‌ಹಾಲ್‌ವರೆಗೆ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆಗೆ ತಹಸೀಲ್ದಾರ್‌ ಮಲ್ಲಣ್ಣ ಯಲಗೋಡ ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಚಾಲನೆ ನೀಡಿದರು.

ಕಾರ‍್ಯಕ್ರಮದಲ್ಲಿ ಕುರುಬ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸಾಯಬಣ್ಣ ದೊಡಮನಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹಳ್ಳೆಪ್ಪಚಾರ್ಯ ಜೋಷಿ, ಮುಖಂಡರಾದ ಬೈಲಪ್ಪ ನೆಲೋಗಿ, ನಿಂಗಣ್ಣ ಭಂಡಾರಿ, ತಿಪ್ಪಣ್ಣ ಗುಂಡಗುರ್ತಿ, ಚಂದ್ರಶೇಖರ ನೇರಡಗಿ, ರಾಜಶೇಖರ ಮುತ್ತಕೋಡ, ನಿಂಗಣ್ಣ ರದ್ದೇವಾಡಗಿ, ಅಶೋಕ ಕಾಸರಭೋಸಗಾ, ಮರಪ್ಪ ಸರಡಗಿ, ಸಿದ್ದು ಮಾವನೂರ, ಮರೆಪ್ಪ ಹಸನಾಪುರ, ಸಂತೋಷ ಮಲ್ಲಾಬಾದ, ರವಿಚಂದ್ರ ಗುತ್ತೇದಾರ, ಸಂತೋಷ ಗುಡೂರ, ಇಬ್ರಾಹಿಂ ಪಟೇಲ್, ನಾಗರಾಜ ಹಾಲಗೂರ, ವಿವಿಧ ಇಲಾಖೆಯ ಅಧಿಕಾರಿಗಳಾದ ರೇವಣಸಿದ್ದಪ್ಪ ಗೌಡರ್, ಡಾ.ಶೋಭಾ ಸಜ್ಜನ, ಶಂಭುಲಿಂಗ ದೇಸಾಯಿ, ರಾಜೇಸಾಹೇಬ ನದಾಫ್ ಸೇರಿದಂತೆ ಕುರುಬ ಸಮಾಜದ ಮುಖಂಡರು ಕನಕದಾಸರ ಅಭಿಮಾನಿಗಳು ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ