ಸಾಮೂಹಿಕ ವಿವಾಹದಿಂದ ಬಡವರ್ಗದವರಿಗೆ ಅನುಕೂಲ: ಕಳಕಪ್ಪ ಕಂಬಳಿ

KannadaprabhaNewsNetwork |  
Published : Nov 19, 2024, 12:48 AM IST
18ಕೆಪಿಎಲ್5:ಕುಕನೂರಿನಲ್ಲಿ ಜರುಗಿದ ಕನಕದಾಸರ ಜಯಂತ್ಯೋತ್ಸವ ಹಾಗು ಹಾಲು ಮತ ಸಮಾಜದ ಸಾಮೂಹಿಕ ವಿವಾಹ ಹಾಗು ಸನ್ಮಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕನಕದಾಸರ ಜಯಂತಿ ಆಚರಣೆ ಜತೆಗೆ ಸಾಮೂಹಿಕ ವಿವಾಹ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ.

ತಾಪಂ ಮಾಜಿ ಉಪಾಧ್ಯಕ್ಷ ಹೇಳಿಕೆ | ಕುಕನೂರಿನಲ್ಲಿ ಕನಕದಾಸರ ಜಯಂತಿ, ಸಾಮೂಹಿಕ ವಿವಾಹ

ಕನ್ನಡಪ್ರಭ ವಾರ್ತೆ ಕುಕನೂರು

ಕನಕದಾಸರ ಜಯಂತಿ ಆಚರಣೆ ಜತೆಗೆ ಸಾಮೂಹಿಕ ವಿವಾಹ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.

ಪಟ್ಟಣದಲ್ಲಿ ಜರುಗಿದ ಕನಕದಾಸರ ಜಯಂತಿ, ಹಾಲುಮತ ಸಮಾಜದ ಸಾಮೂಹಿಕ ವಿವಾಹ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮೂಹಿಕ ವಿವಾಹದಿಂದ ಬಡವರ್ಗದವರಿಗೆ ಅನುಕೂಲ ಆಗುತ್ತದೆ. ಕನಕದಾಸರ ಜಯಂತಿಯಲ್ಲಿ ಸಾಮೂಹಿಕ ವಿವಾಹ ಕಾರ್ಯ ಹಮ್ಮಿಕೊಂಡಿರುವುದು ನಿಜಕ್ಕೂ ಮಾದರಿ. ಇದರಿಂದ ಸಾಮಾಜಿಕ ಅಭಿವೃದ್ಧಿ ಕಾರ್ಯ ಆಗುತ್ತವೆ. ಜಯಂತಿಗಳು ಬರೀ ಆಚರಣೆಗೆ ಸೀಮಿತವಾಗಿರದೆ ಈ ರೀತಿ ಸಾಮಾಜಿಕ ಹಿತ ದೃಷ್ಟಿಕೋನದಿಂದ ಜರುಗುವುದು ಜಯಂತಿ ಆಚರಣೆಗೆ ಮೆರಗು ನೀಡುತ್ತವೆ ಎಂದರು.

ಮುಖಂಡ ಸಿದ್ದಯ್ಯ ಕಳ್ಳಿಮಠ ಮಾತನಾಡಿ, ಕನಕದಾಸರು ತೋರಿಸಿಕೊಟ್ಟ ಭಕ್ತಿ ಮಾರ್ಗದಿಂದ ಸಾಗಬೇಕು. ಅಂದಾಗ ಬದುಕು ಸಾರ್ಥಕ ಎಂದು ಹೇಳಿದರು. ಅವರ ತತ್ವ, ಸಿದ್ಧಾಂತ, ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.

ಐದು ಜೋಡಿ ಸಾಮೂಹಿಕ ವಿವಾಹ ಜರುಗಿತು. ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ಮಂಜುನಾಥ ಕಡೆಮನಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಮೆಹಬೂಬ ಬಾದಷಾಹ ಉಪನ್ಯಾಸ ನೀಡಿದರು. ತಹಸೀಲ್ದಾರ್‌ ಎಚ್. ಪ್ರಾಣೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಮೂಹಿಕ ವಿವಾಹ ಕಾರ್ಯಕ್ಕೆ ಪ್ರತಿ ವರ್ಷ ತಾಳಿಗಳನ್ನು ದೇಣಿಗೆಯಾಗಿ ನೀಡುತ್ತಿರುವ ಕಳಕಪ್ಪ ಕಂಬಳಿ ಅವರ ಕಾರ್ಯವನ್ನು ಶ್ಲಾಘಿಸಲಾಯಿತು.

ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ, ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ್, ಪ್ರಮುಖರಾದ ಶೇಖಪ್ಪ ಕಂಬಳಿ, ಸಕ್ರಪ್ಪ ಚೌಡ್ಕಿ, ಶ್ರೀನಿವಾಸ ನಿಂಗಾಪುರ, ಖಾಸಿಂಸಾಬ್ ತಳಕಲ್, ರೆಹೆಮಾನಸಾಬ್ ಮಕ್ಕಪ್ಪನವರ್, ತಾಪಂ ಮಾಜಿ ಅಧ್ಯಕ್ಷ ಜಗನ್ನಾಥಗೌಡ, ಮಲ್ಲಪ್ಪ ಚಳ್ಳಮರದ, ಕಳಕಪ್ಪ ಕುಂಬಾರ, ಬಸವರಾಜ ಅಡವಿ, ಲಕ್ಷ್ಮಣ ಬೆದವಟ್ಟಿ, ಎಸ್.ಎಸ್. ಕೊಪ್ಪದ, ಮಾರುತಿ ಲಕಮಾಪುರ, ರಾಮಣ್ಣ ಭಜಂತ್ರಿ, ಪಪಂ ಸದಸ್ಯರಾದ ರಾಮಣ್ಣ ಬಂಕದಮನಿ, ಗಗನ ನೋಟಗಾರ, ಸಿರಾಜ್ ಕರಮುಡಿ, ನೂರುದ್ದೀನ್ ಗುಡಿಹಿಂದಲ್, ಬಾಲರಾಜ ಗಾಳಿ, ಮಲ್ಲಿಕಾರ್ಜುನ ಚೌದ್ರಿ ಇತರರಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''