ಜಾತಿ, ಧರ್ಮ ವರ್ಗಗಳಿಗೆ ಅಂಟಿಕೊಳ್ಳದೆ ದಾರ್ಶನಿಕರ ಜಾತ್ಯತೀತ ಸಂದೇಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ಹಿತಕ್ಕೆ ಗಟ್ಟಿಯಾಗಿ ನಿಲ್ಲೋಣ ಎಂದು ಶಾಸಕ, ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಮಾನೆ ತಿಳಿಸಿದರು.
ಹಾನಗಲ್ಲ: ಜಾತಿ, ಧರ್ಮ ವರ್ಗಗಳಿಗೆ ಅಂಟಿಕೊಳ್ಳದೆ ದಾರ್ಶನಿಕರ ಜಾತ್ಯತೀತ ಸಂದೇಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ಹಿತಕ್ಕೆ ಗಟ್ಟಿಯಾಗಿ ನಿಲ್ಲೋಣ ಎಂದು ಶಾಸಕ, ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಮಾನೆ ತಿಳಿಸಿದರು.
ಶುಕ್ರವಾರ ಕನಕದಾಸರ ಜಯಂತ್ಯುತ್ಸವ ಪ್ರಯುಕ್ತ ಇಲ್ಲಿನ ಮಹಾತ್ಮಾಗಾಂಧಿ ವೃತ್ತದ ಬಳಿಯ ಸಂತ ಶ್ರೇಷ್ಠ ಕನಕದಾಸರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಧಕರ ಎಲ್ಲ ಸಂದೇಶಗಳು ಜೀವ ಪರ, ಆದರ್ಶದ ಮಾರ್ಗದರ್ಶನಗಳಾಗಿವೆ. ಮಾನವ ಕುಲ ತಾನೊಂದೆ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕು. ಅದಕ್ಕಾಗಿ ನಮ್ಮ ತುಡಿತ ಬೇಕು. ಎಳವಟ್ಟಿಯಲ್ಲಿ ಒಂದು ಎಕರೆ ಜಾಗೆಯಲ್ಲಿ ಕುರುಬ ಸಮಾಜದ ಸಮುದಾಯ ಭವನ ಹಾಗೂ ವಿವಿಧ ಚಟುವಟಿಕೆಗಳು ಆರಂಭವಾಗಲಿವೆ. ಇದಕ್ಕಾಗಿ ೫೦ ಲಕ್ಷ ರು. ನೀಡಲಾಗಿದೆ. ಅಲ್ಲದೆ ಹಾನಗಲ್ಲ ಪಟ್ಟಣದಲ್ಲಿ ಕುರುಬ ಸಮಾಜಕ್ಕಾಗಿಯೇ ಒಂದು ಒಳ್ಳೆಯ ಕಚೇರಿ ನಿರ್ಮಾಣಕ್ಕೆ ಪುರಸಭೆಯ ಸಿಎ ಸೈಟ್ ನೀಡಲಾಗುವುದು. ಅಲ್ಲದೆ ಅದಕ್ಕಾಗಿ ಶೇ. ೫೦ರಷ್ಟು ಅನುದಾನವನ್ನು ನೀಡಲು ನಾನು ಬದ್ಧ ಎಂದು ಅವರು ತಿಳಿಸಿದರು.
ಹೈಕೋರ್ಟ್ ನ್ಯಾಯವಾದಿ ಸಂದೀಪ ಪಾಟೀಲ ಮುಖ್ಯ ಅತಿಥಿಯಾಗಿ ಮಾತನಾಡಿ, ಖಡ್ಗ ಬಿಟ್ಟು ತಂಬೂರಿ ಹಿಡಿದು ಕೀರ್ತನೆಗಳ ಮೂಲಕ ಇಡೀ ಮಾನವ ಕುಲಕ್ಕೆ ಮಾನವೀಯ ಸಂದೇಶಗಳನ್ನು ನೀಡಿದ ಸಂತ ಶ್ರೇಷ್ಠ ಕನಕದಾಸರು ಮಾನವ ಧರ್ಮದ ಸಂದೇಶಗಳನ್ನು ಸಾರಿ ಹೇಳಿದವರು. ರಾಗಿ, ಅಕ್ಕಿಯ ಕಥೆಯಲ್ಲಿ ಮನುಷ್ಯ ಜಾತಿಯಿಂದ ಶ್ರೇಷ್ಠ, ಕನಿಷ್ಠ ಎನ್ನಲಾಗದು. ಗುಣಸ್ವಭಾವಗಳು ವ್ಯಕ್ತಿಯ ವ್ಯಕ್ತಿತ್ವ ಹೇಳುತ್ತವೆ ಎಂಬುದನ್ನು ಸಾರಿವೆ. ಜಾತಿ ಮತಗಳು ಎಂದೂ ವ್ಯಕ್ತಿಯನ್ನು ದೊಡ್ಡವನನ್ನಾಗಿಸುವುದಿಲ್ಲ. ಕನಕದಾಸರು ಇಡೀ ಮನುಷ್ಯ ಕುಲಕ್ಕೆ ಪ್ರೇರಣಾದಾಯಕವಾದ ಕೀರ್ತನೆಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಎಂದರು.
ನಂತರ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಂತ ಕವಿ ಕನಕದಾಸರ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಶಾಸಕ ಶ್ರೀನಿವಾಸ ಮಾನೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ತಹಸೀಲ್ದಾರ್ ವಿಠಲ್ ಚೌಗಲಾ ಕನಕದಾಸರ ಕವಿವಾಣಿಗೆ ಸೋಲದವರೇ ಇಲ್ಲ. ಮನುಷ್ಯನ ಮನಸ್ಸು ಬುದ್ಧಿಗೆ ಶಕ್ತಿ ತುಂಬುವ ಅವರ ಕೀರ್ತನೆಗಳು ಎಲ್ಲ ಕಾಲಕ್ಕೂ ಸಲ್ಲುವ ಶೇಷ್ಠ ಮೌಲ್ಯಗಳು ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಆಧಿಕಾರಿ ಜಗದೀಶ ಕಮ್ಮಾರ, ದಾನಪ್ಪ ಗಂಟೇರ, ಮಾರುತಿ ಶಿಡ್ಲಾಪೂರ, ಮಾಲತೇಶ ಬ್ಯಾಗವಾದಿ, ಅನಿಲ ಗೋಣೆಣ್ಣನವರ, ಹನುಮಂತಪ್ಪ ಯಳ್ಳೂರ, ಸಿದ್ದು ಗೌರಣ್ಣನವರ ಈ ಸಂದರ್ಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಹನುಮಮತಪ್ಪ ಮರಗಡಿ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಮಹೇಶ ಪವಾಡಿ, ಪ್ರಕಾಶ ತಳ್ಳಳ್ಳಿ, ನೀಲಕಂಠ ಹಾವಳೇರ, ಬಿ.ಬಿ. ಕರೆಗೌಡರ, ನಿಂಗಪ್ಪ ಗಾಜಿಯವರ, ಕುಮಾರ ಗೋಣಿಮಠ, ನಾಗರಾಜ ಜಾನಗುಂಡಿ, ಹೆಗ್ಗಪ್ಪ ಕಾಮನಹಳ್ಳಿ, ಗೀತಾ ಪೂಜಾರ, ಮಮತಾ ಆರೆಗೊಪ್ಪ, ರವಿಬಾಬು ಪೂಜಾರ, ಭೋಜರಾಜ ಕರೂದಿ, ವಿನಾಯಕ ಕುರುಬರ, ವಿಜಯಕುಮಾರ ದೊಡ್ಡಮನಿ, ವಿನಾಯಕ ಹೆಗಡೆ, ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ.ಜಗದೀಶ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಆರ್.ವಿ. ಚಿನ್ನೀಕಟ್ಟಿ, ರಾಮು ಬಯಲಸೀಮೆ, ವೀರಭದ್ರಯ್ಯ, ಡಾ.ಗಿರೀಶ ರೆಡ್ಡೇರ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.