ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪಟ್ಟಣದ ವೆಂಕಟೇಶ ಆಸ್ಪತ್ರೆಯಲ್ಲಿ ನಾರಾಯಣ ಹೆಲ್ತ್ ಸಹಯೋಗದಲ್ಲಿ ಭಾನುವಾರ ನಡೆದ ವೈದ್ಯಕೀಯ ಯಂತ್ರಗಳ ಉದ್ಘಾಟನೆ ಮತ್ತು ಡಾ.ವಿ.ಪಿ. ಕನಕರಡ್ಡಿ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯರು ಎಷ್ಟೋ ರೋಗಿಗಳಿಗೆ ಮರಳಿ ಜೀವದಾನ ಮಾಡಿದ್ದಾರೆ. ವಿಶ್ರಾಂತಿ ಬದಿಗೊತ್ತಿ ನಿರಂತರ ಚಿಕಿತ್ಸೆ ನೀಡಿ ರೋಗಿಗಳ ಚೇತರಿಸಿಕೊಳ್ಳುವಂತೆ ಮಾಡಿದ್ದಾರೆ. ದೂರದ ಊರಿಗೆ ಹೋಗುವ ಅವಶ್ಯಕತೆ ಇಲ್ಲದಂತೆ ಕನಕರಡ್ಡಿ ಆಸ್ಪತ್ರೆಯೂ ಕೂಡ ಉತ್ತಮ ಸೇವೆ ನೀಡುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಬಡವರ ಸೇವೆಯಲ್ಲಿಯೇ ಈ ಕುಟುಂಬ ಇಂದಿಗೂ ಮುನ್ನಡೆಯುತ್ತಿದೆ. ಒಳ್ಳೆಯ ಧ್ಯೇಯೋದ್ದೇಶ ಇಟ್ಟುಕೊಂಡು ವೈದ್ಯಕೀಯ ಸೇವೆಯ ಜೊತೆಗೆ ಆಸ್ಪತ್ರೆಯಲ್ಲಿ ನರ್ಸಿಂಗ್ ಕಾಲೇಜ್ ಆರಂಭಿಸಿರುವುದು ಉತ್ತಮ ಕೆಲಸ ಎಂದರು.
ವೆಂಕಟೇಶ ಆಸ್ಪತ್ರೆಯ ಚೇರಮನ್ ಡಾ. ಅಜೀತ ಕನಕರಡ್ಡಿ ಪ್ರಸ್ತಾವಿಕ ಮಾತನಾಡಿ, ನಮ್ಮ ತಂದೆ ಬಡವರ ಡಾಕ್ಟ್ರು ಎಂದೇ ಪ್ರಸಿದ್ಧಿ ಪಡೆದವರು. ಇಲ್ಲಿನ ಜನರಿಗೆ ಒಳ್ಳೆಯ ಚಿಕಿತ್ಸೆ ಸೌಲಭ್ಯ ಸಿಗಬೇಕೆಂಬುದು ಅವರ ಗುರಿಯಾಗಿತ್ತು. ಅವರ ಮಾರ್ಗದರ್ಶನದಂತೆ ಇಂದು ಅತ್ಯಾಧುನಿಕ ಸೌಲಭ್ಯ ಹೊಂದಿ 100 ಹಾಸಿಗೆಗಳ ಹೈಟೆಕ್ ಆಸ್ಪತ್ರೆಯಾಗಿ ಬೆಳೆದು ನಿಂತಿದೆ. ಇದಕ್ಕೆ ಜನರ ಪ್ರೋತ್ಸಾಹ, ಆಶೀರ್ವಾದ, ನಂಬಿಕೆಯೇ ಕಾರಣವೆಂದರು.
ಶಾಸಕ ಸಿದ್ದು ಸವದಿ, ಮುಖಂಡರಾದ ಸಿದ್ದು ಕೊಣ್ಣೂರ, ಯಲ್ಲನಗೌಡ ಪಾಟೀಲ, ದೇವಳ ದೇಸಾಯಿ, ಮಹಾಲಿಂಗಪ್ಪ ಕೋಳಿಗುಡ್ಡ, ಭೀಮಶಿ ಹೊಸೂರು, ಪ್ರಕಾಶ ಹೊಸೂರ, ಮಲ್ಲಪ್ಪ ಸಿಂಗಾಡಿ, ರವಿ ಜವಳಗಿ ಉಪಸ್ಥಿತರಿದ್ದರು. ಗೀತಾ ಕೋಲಕಾರ ಪ್ರಾರ್ಥಿಸಿ, ಪತ್ರಕರ್ತ ಜಯರಾಮ ಶೆಟ್ಟಿ, ವಿನಯಾ ಜಿಗಜಿಣಗಿ ಮತ್ತು ಸುಮಲತಾ ಕೊಲ್ಲೂರ ನಿರೂಪಿಸಿ, ವೆಂಕಟೇಶ ಕನಕರಡ್ಡಿ ವಂದಿಸಿದರು.