ಕೀರ್ತನೆಗಳಿಂದ ಲೋಕದ ಡೊಂಕು ತಿದ್ದಿದ ಕನಕರು: ಶಾಸಕ ಭೀಮಸೇನ ಚಿಮ್ಮನಕಟ್ಟಿ

KannadaprabhaNewsNetwork |  
Published : Nov 19, 2024, 12:52 AM IST
ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಮತ್ತು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕೀರ್ತನೆ ರಚಿಸುವ ಮೂಲಕ ಅಂದಿನ ಕಾಲದಲ್ಲಿದ್ದ ಅಂಕುಡೊಂಕು ತಿದ್ದುವ ಕಾರ್ಯ ಮಾಡಿದ ಭಕ್ತ ಕನಕದಾಸರ ಆದರ್ಶ ಮೌಲ್ಯಗಳು ಅನುಕರಣೀಯ

ಕನ್ನಡಪ್ರಭ ವಾರ್ತೆ ಬಾದಾಮಿ

ಭಕ್ತ ಕನಕದಾಸರು ಈ ನಾಡು ಕಂಡ ಶ್ರೇಷ್ಠ ದಾರ್ಶನಿಕರು, ಕೀರ್ತನೆಗಳ ಹರಿಕಾರರಾಗಿದ್ದರು. ಕೀರ್ತನೆ ರಚಿಸುವ ಮೂಲಕ ಅಂದಿನ ಕಾಲದಲ್ಲಿದ್ದ ಅಂಕುಡೊಂಕು ತಿದ್ದುವ ಕಾರ್ಯ ಮಾಡಿದ ಭಕ್ತ ಕನಕದಾಸರ ಆದರ್ಶ ಮೌಲ್ಯಗಳು ಅನುಕರಣೀಯ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಸೋಮವಾರ ತಾಲೂಕು ಆಡಳಿತ, ತಾಪಂ ಸಹಯೋಗದಲ್ಲಿ ನಗರದ ಪಿಕಾರ್ಡ್‌ ಬ್ಯಾಂಕ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಭಕ್ತ ಕನಕದಾಸರ 537ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನಕದಾಸರು ರಾಮಧಾನಚರಿತೆ ಗ್ರಂಥದಲ್ಲಿ ಅಕ್ಕಿಯನ್ನು ಶ್ರೀಮಂತರಿಗೆ, ರಾಗಿಯನ್ನು ಬಡವರಿಗೆ ಹೋಲಿಸುತ್ತಾರೆ. ಹಗೆಯಲ್ಲಿ ಎರಡು ಇಡತಾರೆ ಅಕ್ಕಿ ಹುಳ ಹತ್ತಿರುತ್ತದೆ. ರಾಗಿ ಹುಳ ಹತ್ತಿರುವುದಿಲ್ಲ ಎಂದು ಉದಾಹರಣೆ ಸಮೇತ ವಿವರಿಸಿದರು. ಸಮಾಜದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುತ್ತದೆ. ಸೂಕ್ತವಾದ ಜಾಗ ಗುರುತಿಸಿ ದೊಡ್ಡ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿರಿ ಎಂದು ಮನವಿ ಮಾಡಿದರು.

ಕೆರೂರ ಶ್ರೀ ಕಾಳಿದಾಸ ಪದವಿ ಕಾಲೇಜಿನ ಪ್ರಾಚಾರ್ಯ ಎನ್.ಎಂ.ಹೊಟ್ಟಿ ಕನಕದಾಸರ ಕುರಿತು ಉಪನ್ಯಾಸ ನೀಡಿದರು. ಶಿರೂರಿನ ಕನಕಬ್ರಹ್ಮವಿದ್ಯಾಶ್ರಮದ ಚಿನ್ಮಯಾನಂದ ಶ್ರೀಗಳು ಆಶೀರ್ವಚನ ನೀಡಿದರು. ವೇದಿಕೆ ಮೇಲೆ ಅವಳಿ ಜಿಲ್ಲೆಯ ಹಾಲು ಒಕ್ಕೂಟದ ಅಧ್ಯಕ್ಷ ಈರಣ್ಣ ಕರಿಗೌಡರ, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ಯುವಮುಖಂಡ ಮಹೇಶ ಹೊಸಗೌಡ್ರ, ಶಿವಾನಂದ ಕುಳಗೇರಿ, ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟೀಮನಿ, ಸದಸ್ಯರಾದ ಮಂಜುನಾಥ ಹೊಸಮನಿ, ಫಾರೂಖ ದೊಡಮನಿ, ಶಂಕರ ಕನಕಗಿರಿ, ಯಮುನಾ ಹೊಸಗೌಡರ, ಗೌರಮ್ಮ ಬೇಲೂರಪ್ಪನ್ನವರ, ರಾಮವ್ವ ಮಾದರ, ರಮಜಾನ ರಾಜೂರ, ಫಾರೂಖ ದೊಡಮನಿ, ಮಹಾಂತೇಶ ಹಟ್ಟಿ, ಹಿರಿಯರಾದ ಅಶೋಕ ಕೋಟನಕರ, ಶಿವಾನಂದ ಕೊನೇರಿ ಸೇರಿ ತಾಲೂಕು ಮಮಟ್ಟದ ಅಧಿಕಾರಿಗಳು ಇದ್ದರು. ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ತಹಶೀಲದಾರ ಮಧುರಾಜ್ ಪ್ರಾಸ್ತಾವಿಕ ಮಾತನಾಡಿದರು. ಸದಾಶಿವ ಮರಡಿ ನಿರೂಪಿಸಿ, ಉಜ್ವಲ ಬಸರಿ ವಂದಿಸಿದರು.

ಕನಕದಾಸರ ಭಾವಚಿತ್ರದ ಅದ್ಧೂರಿ ಮೆರವಣಿಗೆ:

ಕನಕದಾಸ ಜಯಂತಿ ಅಂಗವಾಗಿ ನಗರದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಚಾಲನೆ ನೀಡಿದರು. ಕುಂಭ ಹೊತ್ತ ಮಹಿಳೆಯರು, ಆಕರ್ಷಕ ಡೊಳ್ಳು ಕುಣಿತದೊಂದಿಗೆ ರಾಮದುರ್ಗ ರಸ್ತೆ ಮಾರ್ಗವಾಗಿ ಪಿಕಾರ್ಡ್‌ ಬ್ಯಾಂಕ್ ಆವರಣಕ್ಕೆ ಬಂದು ತಲುಪಿತು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟೀಮನಿ, ಸದಸ್ಯ ಮಂಜುನಾಥ ಹೊಸಮನಿ, ಹನಮಂತ ಅಪ್ಪನ್ನವರ, ಫಾರೂಖ ದೊಡಮನಿ, ಶಂಕರ ಕನಕಗಿರಿ, ರಾಮವ್ವ ಮಾದರ, ಯಮುನಾ ಹೊಸಗೌಡ್ರ, ರಮಜಾನ ರಾಜೂರ, ಯುವಮುಖಂಡ ಮಹೇಶ ಹೊಸಗೌಡ್ರ, ತಹಸೀಲ್ದಾರ್‌ ಮಧುರಾಜ್, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ ಸೇರಿ ಅಧಿಕಾರಿಗಳು ಇದ್ದರು. ಮೆರವಣಿಗೆ ವೇಳೆ ಮುಖ್ಯರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯುಂಟಾಯಿತು.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ