ಕೀರ್ತನೆ ಮೂಲಕ ಸಮಾಜ ತಿದ್ದಲು ಯತ್ನಿಸಿದ ಕನಕರು

KannadaprabhaNewsNetwork |  
Published : Nov 10, 2025, 01:00 AM IST
ದಾಸ ಶ್ರೇಷ್ಠ ಸಂತ ಕನಕದಾಸ ಜಯಂತಿ ಆಚರಣೆ | Kannada Prabha

ಸಾರಾಂಶ

ಸರಳ ಕೀರ್ತನೆಗಳ ಮೂಲಕ ಸಮಾಜಕ್ಕೆ ಮನ್ವಂತರದ ಹಾದಿ ತೋರಿದವರಲ್ಲಿ ಕನಕದಾಸರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕನಕದಾಸ ಎಂಬುದು ಹೆಸರು ಮಾತ್ರವಲ್ಲ; ಬೆಳಕು, ದಿವ್ಯತ್ವ ಹಾಗೂ ಜೀವತ್ವವೂ ಆಗಿದೆ ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ಅವರಂತೆ ಕನಕದಾಸರೂ ನೆಲದ ವಿಸ್ಮಯವಾಗಿದ್ದು ಶಕ್ತಿಯಾಗಿ ಬೆಳೆದಿದ್ದಾರೆ. ನಾಡಿಗೆ, ಜ್ಞಾನದ ಬೆಳಕನ್ನು ಪಸರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಬುದ್ಧ, ಬಸವ, ಅಂಬೇಡ್ಕರ್ ಅವರಂತೆ ಸಮಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ಮಹನೀಯರ ಪೈಕಿ ದಾಸಶ್ರೇಷ್ಠ ಕನದಾಸರು ಒಬ್ಬರು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.ನಗರದಲ್ಲಿ ತಾಲೂಕು ಆಡಳಿತ, ತಾಲೂಕು ಕುರುಬರ ಸಂಘ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಸೇನೆ, ಕನಕ ಸರ್ಕಾರಿ ಮತ್ತು ಸರ್ಕಾರೇತರ ನೌಕರರ ಸಂಘ ಜಂಟಿಯಾಗಿ ಕನಕದಾಸ ವೃತ್ತದಲ್ಲಿ ಏರ್ಪಡಿಸಿದ್ದ ಕನಕ ಜಯಂತಿ ಮತ್ತು ಕನಕದಾಸ ವೃತ್ತದ ನಾಮಪಲಕ ಅನಾವರಣ ಸಮಾರಂಭದಲ್ಲಿ ಮಾತನಾಡಿದರು.ಕೀರ್ತನೆಗಳ ಮೂಲಕ ಬೋಧನೆ

ಸರಳ ಕೀರ್ತನೆಗಳ ಮೂಲಕ ಸಮಾಜಕ್ಕೆ ಮನ್ವಂತರದ ಹಾದಿ ತೋರಿದವರಲ್ಲಿ ಕನಕದಾಸರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕನಕದಾಸ ಎಂಬುದು ಹೆಸರು ಮಾತ್ರವಲ್ಲ; ಬೆಳಕು, ದಿವ್ಯತ್ವ ಹಾಗೂ ಜೀವತ್ವವೂ ಆಗಿದೆ ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ಅವರಂತೆ ಕನಕದಾಸರೂ ನೆಲದ ವಿಸ್ಮಯವಾಗಿದ್ದು ಶಕ್ತಿಯಾಗಿ ಬೆಳೆದಿದ್ದಾರೆ. ನಾಡಿಗೆ, ಜ್ಞಾನದ ಬೆಳಕನ್ನು ಪಸರಿಸಿದ್ದಾರೆ ಎಂದು ತಿಳಿಸಿದರು.ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಮೇಲು-ಕೀಳು ಎಂಬ ತಾರತಮ್ಯ ಹೋಗಲಾಡಿಸಲು ಅವಿರತವಾಗಿ ದುಡಿದ ಕನಕದಾಸರು ಕರ್ನಾಟಕ ಮಾತ್ರವಲ್ಲದೆ ದೇಶದುದ್ದಗಲಕ್ಕೂ ಸಂಚರಿಸಿ ಜನರಲ್ಲಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದುಹಾಕಲು ಶ್ರಮಿಸಿದರು. ಕೆಳಸ್ತರದಲ್ಲಿದ್ದ ಸಮಾಜವನ್ನು ಮೇಲ್ಪಂಕ್ತಿಗೆ ತಂದು ನಿಲ್ಲಿಸಿದರು ಎಂದರು.ಶಿಕ್ಷಣ ಸಂಸ್ಥೆ ತೆರೆಯಲು ಜಮೀನುಸಮುದಾಯದ ವಿನಂತಿಯಂತೆ ಕುರುಬ ಸಮುದಾಯವು ಶೈಕ್ಷಣಿಕ ಸಂಸ್ಥೆಯನ್ನು ಪ್ರಾರಂಭಿಸಲು ಮೂರು ಎಕರೆ ಸರ್ಕಾರದಿಂದ ಜಮೀನು ಮಂಜೂರು ಮಾಡಿಸುತ್ತೇನೆ. ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ವೇದಿಕೆಯಲ್ಲಿದ್ದ ತಹಸೀಲ್ದಾರ್ರಿಗೆ ಸೂಚನೆ ನೀಡಿದರು.ತಹಸೀಲ್ದಾರ್ ಕೆ.ಎಂ.ಅರವಿಂದ್ ಮಾತನಾಡಿ 15-16ನೇ ಶತಮಾನದ ದಾಸಶ್ರೇಷ್ಠರಲ್ಲಿ ಕನಕದಾಸರು ಪ್ರಮುಖರು. ತಿಮ್ಮಪ್ಪನಾಯಕನಿಂದ ಕನಕದಾಸಗಿ ಶ್ರೇಷ್ಠ ಚಿಂತನೆಗಳನ್ನು ಸಾರುವ ಸರಳ ಕೀರ್ತನೆಗಳನ್ನು ರಚಿಸಿ ನಾಡಿನುದ್ದಕ್ಕೂ ಪಸಿರಿಸಿದ ಕನಕದಾಸರು ಸಮಾಜವನ್ನು ತಿದ್ದಿ ಸಮಾನತೆ ತಂದರು. 316 ಕೀರ್ತನೆಗಳನ್ನು ರಚಿಸಿ ಜಾತೀಯ ಸಂಕೋಲೆಗಳಿಗೆ ಸಿಲುಕಿದ್ದ ಜನರಿಗೆ ಸಮಾನತೆಯ ಸಂದೇಶ ಸಾರಿದರು ಎಂದು ಹೇಳಿದರು.

ಪ್ರತಿಭಾವಂತರಿಗೆ ಬಹುಮಾನ

10ನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ, ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ರಾಮಲಿಂಗೇಶ್ವರ ದೇವಾಲಯದಿಂದ ಕನಕದಾಸ ವೃತ್ತದವರೆಗೆ ಮೆರವಣಿಗೆ ನಡೆಯಿತು

ನಿವೃತ್ತ ಪ್ರಾಂಶುಪಾಲ ಡಾ.ಕೆ.ಪಿ.ನಾರಾಯಣಪ್ಪ, ಪ್ರೊ.ನರಸಿಂಹಮೂರ್ತಿ, ಮಾರುತಿ ಮಾತನಾಡಿದರು. ವೇದಿಕೆಯಲ್ಲಿ ತಾ.ಪಂ. ಇಒ ಜಿ.ಕೆ.ಹೊನ್ನಯ್ಯ, ಬಿಇಒ ಗಂಗರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ಚನ್ನಪ್ಪ ಗೌಡ ರಾಯ್ಕರ್, ವೈದ್ಯಾಧಿಕಾರಿ ಡಾ.ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಅಂಜಿನಪ್ಪ, ದಾನಿ ಲಕ್ಷಿö್ಮಸಾಗರ್, ಮುಖಂಡ ಕಾಂತರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಆರ್.ಮಂಜುನಾಥ್, ಕನಕ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಎಂ.ಎನ್.ಕೃಷ್ಣಪ್ಪ, ಸಂಗೊಳ್ಳಿರಾಯಣ್ಣ ಸೇನೆಯ ಅಧ್ಯಕ್ಷ ಎನ್.ನಾಗರಾಜ ಉಪಾಧ್ಯಕ್ಷ ಮಹದೇವ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ