ಕನ್ನಡ, ಬಸವಣ್ಣ ಸಿದ್ಧಲಿಂಗ ಶ್ರೀಗಳ ಕಣ್ಣುಗಳಾಗಿದ್ದವು: ಪ್ರೊ. ಹರ್ಲಾಪುರ

KannadaprabhaNewsNetwork |  
Published : Feb 26, 2024, 01:37 AM IST
ಕಾರ್ಯಕ್ರಮದಲ್ಲಿ ಎಸ್.ಎಸ್.ಹರ್ಲಾಪೂರ ಮಾತನಾಡಿದರು. | Kannada Prabha

ಸಾರಾಂಶ

ತೋಂಟದ ಸಿದ್ಧಲಿಂಗ ಶ್ರೀಗಳ ಜೀವನ ಕನ್ನಡ ಮತ್ತು ಬಸವಣ್ಣನಿಗೆ ಮೀಸಲಾಗಿತ್ತು ಎಂದು ಅಣ್ಣಿಗೇರಿಯ ಸಂಸ್ಕೃತಿ ಚಿಂತಕ, ಪ್ರೊ. ಎಸ್.ಎಸ್. ಹರ್ಲಾಪುರ ಹೇಳಿದರು.

ಗದಗ: ತೋಂಟದ ಸಿದ್ಧಲಿಂಗ ಶ್ರೀಗಳ ಜೀವನ ಕನ್ನಡ ಮತ್ತು ಬಸವಣ್ಣನಿಗೆ ಮೀಸಲಾಗಿತ್ತು ಎಂದು ಅಣ್ಣಿಗೇರಿಯ ಸಂಸ್ಕೃತಿ ಚಿಂತಕ, ಪ್ರೊ. ಎಸ್.ಎಸ್. ಹರ್ಲಾಪುರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜರುಗಿದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಡಾ. ತೋಂಟದ ಸಿದ್ಧಲಿಂಗ ಶ್ರಿಗಳ ಕೊಡುಗೆ ಕುರಿತು ಅವರು ಮಾತನಾಡಿದರು.ತೋಂಟದ ಸಿದ್ಧಲಿಂಗ ಶ್ರೀಗಳು ಗೋಕಾಕ ಚಳವಳಿಗೆ ಸಿಂದಗಿಯಲ್ಲಿ ಮುನ್ನುಡಿ ಬರೆಯುವ ಮೂಲಕ ಕನ್ನಡದ ಅಭಿಯಾನವನ್ನು ಪ್ರಾರಂಭಿಸಿದರು. ಮುಂದೆ ಗದುಗಿನ ಮಠದಲ್ಲಿ ಪುಸ್ತಕ ಪ್ರಕಟಣೆಯನ್ನು ಪ್ರಾರಂಭಿಸಿ ಒಂದು ಶತಮಾನದ ಇತಿಹಾಸವನ್ನು ಕನ್ನಡ ನಾಡಿಗೆ ನೀಡಿದ್ದಾರೆ. ಶಿವಾನುಭವ ವೇದಿಕೆ ಮೂಲಕ ಕನ್ನಡವನ್ನು ಕಟ್ಟುವ ಕಾರ್ಯವನ್ನು ಪೂಜೆಯ ರೂಪದಲ್ಲಿ ನೇರವೇರಿಸಿದ್ದಾರೆ ಎಂದು ಕೊಂಡಾಡಿದರು.

ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ೬೦೦ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಮಠವನ್ನು ಜ್ಞಾನ ದಾಸೋಹದ ಕೇಂದ್ರವನ್ನಾಗಿಸಿದರು. ಲೇಖಕರನ್ನು, ಸಂಶೋಧಕರನ್ನು ಪ್ರೋತ್ಸಾಹಿಸಿದರು. ಈ ಕಾರ್ಯದಿಂದಲೇ ಅವರನ್ನು ಪುಸ್ತಕ ಸ್ವಾಮೀಜಿ, ಕನ್ನಡದ ಜಗದ್ಗುರು ಎಂದು ವ್ಯಾಖ್ಯಾನಿಸಿದರೆಂದು ತಿಳಿಸಿದರು.

ಹಿರಿಯ ಪತ್ರಕರ್ತ ಮಂಜುನಾಥ ಅಬ್ಬಿಗೇರಿ ಮಾತನಾಡಿ, ಪತ್ರಿಕೆ ನಡೆಸುವದು ಸುಲಭದ ಕೆಲಸವಲ್ಲ. ಪತ್ರಿಕೆಯನ್ನು ಪ್ರಾರಂಭಿಸುವುದಕ್ಕೆ ಮುಖ್ಯಪ್ರೇರಣೆ ತೋಂಟದ ಸಿದ್ಧಲಿಂಗ ಶ್ರೀಗಳಾಗಿದ್ದರು. ಸರಕಾರ ಈ ಭಾಗವನ್ನು ಕಿತ್ತೂರ ಕರ್ನಾಟಕ ಎಂದು ಘೋಷಿಸುವ ಮೊದಲೆ ೧೩ ವರ್ಷಗಳ ಹಿಂದೆ ಪತ್ರಿಕೆ ಪ್ರಾರಂಭಿಸಲಾಯಿತು. ಸರಕಾರ ಮತ್ತು ಜನರ ಮಧ್ಯೆಕೊಂಡಿಯಾಗಿ ಪತ್ರಿಕೆ ಕಾರ್ಯ ಮಾಡುತ್ತಿದೆ. ಜನ ಸಾಮಾನ್ಯರ ಸಮಸ್ಯೆಗಳನ್ನು ಪತ್ರಿಕೆಗಳ ಮೂಲಕ ಜನಪತ್ರಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿದರು. ಎಸ್.ಎಸ್. ಕಳಸಾಪುರಶೆಟ್ರು, ಪ್ರೊ. ಚಂದ್ರಶೇಖರ ವಸ್ತ್ರದ, ಪ್ರೊ.ಕೆ.ಎಚ್. ಬೇಲೂರ, ಡಾ. ಅನಂತ ಶಿವಪುರ, ಡಾ. ವಾಣಿ ಅನಂತ ಶಿವಪುರ, ಪ್ರೊ.ವಿ. ಎಸ್. ದಲಾಲಿ, ಸಿ.ಕೆ.ಎಚ್.ಶಾಸ್ತ್ರಿ(ಕಡಣಿ), ಎಸ್.ಎಫ್. ಬೆನಕಣ್ಣವರ, ಅ.ದ.ಕಟ್ಟೀಮನಿ, ಟಿಕನದಾರ, ಈರನಗೌಡ ಮಣಕವಾಡ, ಎಸ್.ಎಫ್. ಭಜಂತ್ರಿ. ಕೆ.ಎಸ್. ಗುಗ್ಗರಿ, ಸತೀಶ ಹುನಕುಂಟಿ, ಯಲ್ಲಮ್ಮ ತೋಟದ, ಅಜಿತ ಘೋರ್ಪಡೆ, ಆರ್.ಡಿ. ಕಪ್ಪಲಿ, ನಾರಾಯಣಪುರ, ಬಿ.ಎಸ್. ಹಿಂಡಿ, ರತ್ನಕ್ಕ ಪಾಟೀಲ, ನೀಲಮ್ಮ ಅಂಗಡಿ, ಮಂಜುಳಾ ವೆಂಕಟೇಶಯ್ಯ, ರಕ್ಷಿತಾ ಎಸ್. ಗಿಡ್ನಂದಿ, ವಿದ್ಯಾ ಪಾಟೀಲ, ಡಾ. ರಶ್ಮಿ ಅಂಗಡಿ, ಡಾ. ಈರಣ್ಣ ಕೊರಚಗಾಂವ, ಶಿವಕುಮಾರ ಬೇವಿನಮರದ, ಪ್ರಸನ್ನಕುಮಾರ ಇನಾಮದಾರ, ಜೆ.ಆರ್. ಕುಲಕರ್ಣಿ ಸೇರಿದಂತೆ ಇತರರು ಇದ್ದರು.

ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಗೌರವ ಕಾರ್ಯದರ್ಶಿ ಶಿವಾನಂದ ಗಿಡ್ನಂದಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ