ಧರ್ಮ, ಜಾತಿ ಮೀರಿದ ಭಾಷೆ ಕನ್ನಡ: ಡಾ.ಸಿ.ಶಿವಲಿಂಗಪ್ಪ

KannadaprabhaNewsNetwork |  
Published : Dec 10, 2025, 03:00 AM IST
ಹಿರಿಯೂರಿನ ನೆಹರೂ ಮೈದಾನದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಡಾ.ಸಿ.ಶಿವಲಿಂಗಪ್ಪ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ವಿಶ್ವದ ವಿವಿಧ ಭಾಷೆಗಳಲ್ಲಿ ಸುಂದರ ಸುಲಲಿತ ಹಾಗೂ ದೇಶ, ಭಾಷೆ, ಧರ್ಮ, ಜಾತಿ ಮೀರಿ ಮನಸ್ಸುಗಳನ್ನ ಬೆಸೆಯುವ ಭಾಷೆ ಕನ್ನಡವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಜಾನಪದ ತಜ್ಞ ಡಾ.ಸಿ.ಶಿವಲಿಂಗಪ್ಪ ಅಭಿಪ್ರಾಯಪಟ್ಟರು.

ಹಿರಿಯೂರು: ವಿಶ್ವದ ವಿವಿಧ ಭಾಷೆಗಳಲ್ಲಿ ಸುಂದರ ಸುಲಲಿತ ಹಾಗೂ ದೇಶ, ಭಾಷೆ, ಧರ್ಮ, ಜಾತಿ ಮೀರಿ ಮನಸ್ಸುಗಳನ್ನ ಬೆಸೆಯುವ ಭಾಷೆ ಕನ್ನಡವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಜಾನಪದ ತಜ್ಞ ಡಾ.ಸಿ.ಶಿವಲಿಂಗಪ್ಪ ಅಭಿಪ್ರಾಯಪಟ್ಟರು.

ನಗರದ ನೆಹರೂ ಮೈದಾನದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ, ಕಳವಿಭಾಗಿ ಶ್ರೀ ರಂಗನಾಥ ಸ್ವಾಮಿ ಸಾಂಸ್ಕೃತಿಕ ಕಲಾಸಂಘ ಸಕ್ಕರ ಹಾಗೂ ವಾಣಿವಿಲಾಸ ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ನಾಡು ನುಡಿ ನೆಲ, ಜಲ, ಸಂಪತ್ತು ರಕ್ಷಣೆಗೆ ವಿಶ್ವದ ಎಲ್ಲ ಕನ್ನಡಿಗರು ಹೋರಾಟ ಮಾಡಬೇಕಿದೆ. ಕನ್ನಡದ ಅಸ್ಮಿತೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಿ ಬೂಕರ್ ಪ್ರಶಸ್ತಿ ತಂದ ಬಾನು ಮುಸ್ತಾಕ್ ಅವರನ್ನು ನಾವೆಲ್ಲಾ ನೆನೆಯಬೇಕಿದೆ ಎಂದರು.

ಎನ್ಎಸ್ಎಸ್ ಘಟಕದ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ ಜನಸಾಮಾನ್ಯರ ಭಾಷೆಯಾಗಿದೆ. ಕರ್ನಾಟಕ ಸರ್ಕಾರ 1969ರಲ್ಲಿ ಆಡಳಿತ ಭಾಷೆಯನ್ನಾಗಿ ಘೋಷಣೆ ಮಾಡಿದ್ದು, ಕನ್ನಡ ಭಾಷಾ ಅಭಿವೃದ್ಧಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ, ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ಹಲವಾರು ಕನ್ನಡಪರ ಸಂಘಟನೆಗಳನ್ನು ಸ್ಥಾಪಿಸಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಮಾತನಾಡಿ, ಕನ್ನಡ ಮಾಧ್ಯಮ ಓದಿದ ಮಕ್ಕಳಿಗೆ ಉದ್ಯೋಗ ನೀಡಬೇಕು. ಕನ್ನಡ ನಾಡಿನಲ್ಲಿ ವಿವಿಧ ಭಾಷೆ, ವಿವಿಧ ಧರ್ಮ, ವಿವಿಧ ಬುಡಕಟ್ಟಿನ ಜನರಿದ್ದರೂ ಸೌಹಾರ್ದತೆ, ಸಹಬಾಳ್ವೆ ಸಮಗ್ರತೆ ಹಾಗೂ ಐಕ್ಯತೆಗೆ ಹೆಸರಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ವಹಿಸಿದ್ದರು.

ಇದೇ ವೇಳೆ ಚುಂಚಶ್ರೀ ಪ್ರಶಸ್ತಿ ಪುರಸ್ಕೃತ ಹರಿಯಬ್ಬೆ ಜಿ.ಡಿ.ತಿಮ್ಮಯ್ಯ, ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಆರ್.ಟಿ.ಪರಮೇಶ್ವರಪ್ಪ, ತಾಲೂಕು ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವಿ.ಸಿದ್ದಪ್ಪ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಬಿ.ಲಿಂಗಪ್ಪ, ಹಿರಿಯ ರಂಗಭೂಮಿ ಕಲಾವಿದ ಬ್ಯಾಡರಹಳ್ಳಿ ಪಿ.ತಿಮ್ಮಯ್ಯ, ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಂ.ಸಿದ್ದಗಂಗಮ್ಮ, ಡಿ.ಪ್ರಹ್ಲಾದ್, ಸರಸ್ವತಿ, ಆಶಾ ಮಾರುತೇಶ್ ಕೂನಿಕೆರೆ ಅವರನ್ನು ಸನ್ಮಾನಿಸಿಸಲಾಯಿತು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ರಮೇಶ್, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಹೇಶ್ವರ ರೆಡ್ಡಿ, ಶಿಕ್ಷಣಾಧಿಕಾರಿ ಸಂಘದ ತಾಲೂಕು ಅಧ್ಯಕ್ಷೆ ಭಾಗ್ಯಮ್ಮ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ರಾಮಚಂದ್ರಪ್ಪ, ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಚಿಕ್ಕಣ್ಣ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಎಚ್.ಲೋಕಮ್ಮ, ಹರ್ತಿ ಕೋಟೆ ಮಹಾಸ್ವಾಮಿ, ಜೆ.ನಿಜಲಿಂಗಪ್ಪ, ಜಿ.ಹನುಮಂತರೆಡ್ಡಿ, ಎಂ.ರಮೇಶ ನಾಯ್ಕ್, ಪಿ.ತಿಪ್ಪೇಸ್ವಾಮಿ, ಶಿವಮೂರ್ತಿ, ಎಸ್.ಶಿವಲಿಂಗಪ್ಪ, ಮುಖ್ಯ ಶಿಕ್ಷಕಿ ಸೌಮ್ಯ ಉಮೇಶ್, ವಸಂತ, ಗಂಗಮ್ಮ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಚ್‌.ಸಿ.ಮಹದೇವಪ್ಪರನ್ನು ಸಚಿವ ಸ್ಥಾನದಿಂದ ಕೈಬಿಡಿ: ಬಿ.ಆರ್.ಭಾಸ್ಕರ ಪ್ರಸಾದ್
ವೀರಶೈವ ಲಿಂಗಾಯತರ ಅಭಿವೃದ್ಧಿಗೆ ಸಂಘಟನೆ ಅಗತ್ಯ: ಅಣಬೇರು ರಾಜಣ್ಣ