ಕನ್ನಡ ಎನ್ನುವುದು ನುಡಿಯಲ್ಲ, ಮನಸ್ಸು ಬೆಸೆಯುವ ಭಾಷೆ

KannadaprabhaNewsNetwork | Published : Nov 2, 2024 1:41 AM

ಸಾರಾಂಶ

ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದಿರುವ ಕನ್ನಡಿಗರಿಗೆ ಭಾಷಾಭಿಮಾನ ಇಲ್ಲ. ಕನ್ನಡ ಎನ್ನುವುದು ಬರಿ ನುಡಿಯಲ್ಲ, ಅದು ಮನಸ್ಸುಗಳನ್ನು ಬೆಸೆಯುವ ಭಾಷೆ. ಆದ್ದರಿಂದ ಕಲೆ, ಸಾಹಿತ್ಯ, ನೆಲ, ಜಲ ಉಳಿಸುವುದು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ ಪ್ರಭಾರ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ ಆಶಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದಿರುವ ಕನ್ನಡಿಗರಿಗೆ ಭಾಷಾಭಿಮಾನ ಇಲ್ಲ. ಕನ್ನಡ ಎನ್ನುವುದು ಬರಿ ನುಡಿಯಲ್ಲ, ಅದು ಮನಸ್ಸುಗಳನ್ನು ಬೆಸೆಯುವ ಭಾಷೆ. ಆದ್ದರಿಂದ ಕಲೆ, ಸಾಹಿತ್ಯ, ನೆಲ, ಜಲ ಉಳಿಸುವುದು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ ಪ್ರಭಾರ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ ಆಶಯ ವ್ಯಕ್ತಪಡಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಕನ್ನಡ ಭಾಷೆ ಅತ್ಯಂತ ಶ್ರೀಮಂತಿಕೆವುಳ್ಳ ಭಾಷೆಯಾಗಿದೆ. ಜಗತ್ತಿನಲ್ಲಿ ನಮ್ಮ ಕನ್ನಡ ಭಾಷೆ 27ನೇ ಸ್ಥಾನವನ್ನು ಹೊಂದಿದೆ. ಡಾ. ಸರೋಜನಿ ಮಹಷಿ, ಮಹಾಜನ ಆಯೋಗ ವರದಿ ಜಾರಿಗೊಳಿಸಬೇಕಾಗಿದೆ. ಕನ್ನಡ ಭಾಷೆ ಎಲ್ಲ ಕ್ಷೇತ್ರದಲ್ಲಿ ಬೆಳೆಯಬೇಕು. ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಅಲ್ಲಿನ ಮಾತೃಭಾಷೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಕನ್ನಡಿಗರಿಗೆ ಕನ್ನಡ ಭಾಷಾಭಿಮಾನ ಇಲ್ಲವೆಂದು ಕಳವಳವ್ಯಕ್ತಪಡಿಸಿದರು.ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸಚಿವ ವಿ. ಸೋಮಣ್ಣರವರು ರೈಲ್ವೆ ಇಲಾಖೆಯ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯುವ ಪ್ರಸ್ತಾವನೆ ಬಗ್ಗೆ ಮಾತನಾಡಿರುವುದು ಸ್ವಾಗತಾರ್ಹ. ಅದು ಅತೀ ಶೀಘ್ರವಾಗಿ ಜಾರಿಗೆ ಆಗಲಿ ಎಂದು ಹೇಳಿದರು.ಸಮಾರಂಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಸುರೇಶ ದೇಶಪಾಂಡೆಯವರು ನೆಲ, ಜಲ, ಭಾಷೆಗಾಗಿ ಕವಿಗಳು, ಸಾಹಿತಿಗಳು ಚಿಂತಕರು ಮಾಡಿದ ಸೇವೆ ಬಗ್ಗೆ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೆ.ಎಮ. ಬಾರಿ (ಸಮಾಜ ಸೇವೆ), ಪಂಚಾಕ್ಷರಿ ಪುಣ್ಯಶೆಟ್ಟಿ, ಶೋಭಾದೇವಿ ಚೆಕ್ಕಿ, ವೀರಶೆಟ್ಟಿ ಗಾರಂಪಳ್ಳಿ, ನಿಜಲಿಂಗ ರಾಜಗುರು ರಗಟೆ(ಸಾಹಿತ್ಯ), ನರಸಮ್ಮ ಆವಂಟಿ (ಮಹಿಳಸಬಲೀಕರಣ), ಡಾ. ಬಾಲಾಜಿ ಪಾಟೀಲ ಕುಂಚಾವರಂ (ವೈದ್ಯಕಿಯ), ಪ್ರಶಾಂತ ಕಟ್ಟಿ, ರಮೇಶ (ಸಂಗೀತ), ಅಶೋಕ ಹೂವಿನಬಾವಿ (ಶಿಕ್ಷಣ), ಮೌನೇಶ ವಿಶ್ವಕರ್ಮ (ಶಿಲ್ಪಕಲೆ), ರಮೇಶಜಾಧವ್ (ಕ್ರೀಡೆ), ನರಸಪ್ಪ ಕಲಭಾವಿ, ನಂದಪ್ಪ ಕೆರೋಳಿ (ಕೃಷಿ), ಶಿವಾನಂದ ಪಾಟೀಲ,ಗೋಪಾಲ ಗಾರಂಪಳ್ಳಿ (ಸಾಮಾಜಿಕ ಹೋರಾಟ), ಕನ್ನಡಪರ ಸಂಘಟನೆಗಳ ಮುಖಂಡರಾದ ಸಂಜೀವ ಪಾಟೀಲ, ದಯಾನಂದ ಹಿತ್ತಲ್, ಜರಣಪ್ಪ ತಳವಾರ, ಬಸವರಾಜ ವಾಡಿ, ಸುರೇಶ ಬಂದಿ, ವಿಠಲ ಕುಸಾಳೆ, ಶ್ರೀಕಾಂತ ಜಾನಕಿ, ಉಲ್ಲಾಸ ಕೆರೋಳಿ, ಶಿವಪ್ರಕಶ ಕಟ್ಟಿಮನಿ, ಇನ್ನಿತರರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ತಾಪಂ ಅಧಿಕಾರಿ ಶಂಕರ ರಾಠೋಡ, ಡಿವೈಎಸ್ಪಿ ಸಂಗಮನಾಥ ಹಿರೇಮಠ, ಡಾ, ಮಹಮ್ಮದ ಗಫಾರ, ವೆಂಕಟೇಶ ದುಗ್ಗನ, ಎಇಇ ಬಸವರಾಜ ಬೈನೂರ, ಪುರಸಭೆ ಅಧ್ಯಕ್ಷ ಆನಂದ ಟೈಗರ್, ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಸುರೇಶ ಕೊರವಿ, ದೇವೇಂದ್ರಪ್ಪ ಹೋಳ್ಕರ, ಇನ್ನಿತರಿದ್ದರು.

ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಸ್ವಾಗತಿಸಿದರು. ಜಯಪ್ಪ ಚಾಪೆಲ ನಿರೂಪಿಸಿದರು. ವೆಂಕಟೇಶ ದುಗ್ಗನ ವಂದಿಸಿದರು. ವಿವಿಧ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ ಚೌಕನಿಂದ ತಾಲೂಕು ಅಡಳಿತವರೆಗೆ ತಾಯಿ ಭುವನೇಶ್ವರಿ ಭಾವಚಿತ್ರವನ್ನು ವಿವಿಧ ಸಂಗೀತ ವಾದ್ಯಮೇಳದೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.

Share this article