ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತ್ಯ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ನಡೆದ ಕನ್ನಡ ಬೇಗುದಿಗಳು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಳಕೆ ಮಾಡಿದ್ದು ಮಾತ್ರ ಉಳಿಯುತ್ತದೆ. ಬಳಕೆ ಮಾಡದಿದ್ದರೆ ಉಳಿಯುವುದಿಲ್ಲ. ಅದೇ ರೀತಿ ಕನ್ನಡವನ್ನು ಎಲ್ಲೆಲ್ಲಿ ಬಳಕೆ ಮಾಡಲು ಅವಕಾಶವಿದೆ ಎಂಬುದನ್ನು ತಿಳಿದು ಬಳಸಬೇಕು. ಕನ್ನಡ ಬಳಕೆಗೆ ಅವಕಾಶ ಇರುವುದು ಕರ್ನಾಟಕದಲ್ಲಿ. ಇದನ್ನು ಅರಿತು ಕನ್ನಡ ಬಳಸಬೇಕಿದೆ ಎಂದರು.
ಪುಸ್ತಕದಲ್ಲಿರುವ ಮಾಹಿತಿ ಶಿಕ್ಷಣವಲ್ಲ. ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯುವ ಜ್ಞಾನ ಬೇಕಿದೆ. ಜ್ಞಾನ, ವಿಜ್ಞಾನ ಹೋಗಿ ತಂತ್ರಜ್ಞಾನ ಬಂದಿದೆ. ಇದು ಹೋಗಿ ಈಗ ಕೃತಕ ಬುದ್ಧಿಮತ್ತೆ ಬಂದಿದೆ. ಇವೆಲ್ಲವೂ ಮಾನವ ಕುಲ ಉದ್ಧಾರಕ್ಕೆ ಇರೋದು. ಹೀಗಾಗಿ, ಈಗ ಜಾಗತಿಕ ಗ್ರಾಮದ ಕಲ್ಪನೆಯಲ್ಲಿದ್ದೇವೆ ಎಂದರು.ವಿಶ್ರಾಂತ ಪ್ರಾಂಶುಪಾಲ ಡಾ. ಎಚ್.ಟಿ. ಕೃಷ್ಣಮೂರ್ತಿ "ಒಕ್ಕೂಟ ಸರ್ಕಾರದಲ್ಲಿ ಕನ್ನಡ ಸ್ಥಾನಮಾನ " ವಿಷಯ ಕುರಿತು ಮಾತನಾಡಿ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಬಲಿಷ್ಠವಾದರೆ ಒಕ್ಕೂಟ ಬಲಿಷ್ಠವಾಗಲಿದೆ. ಸಂಕುಚಿತವಾದ ರಾಷ್ಟ್ರೀಯತೆಯ ಭಾವನೆಯ ಭ್ರಮೆಯಲ್ಲಿದ್ದೇವೆ. ಭ್ರಮಾಲೋಕದಿಂದ ಹೊರಬಂದು ವಾಸ್ತವವಾಗಿ ಯೋಚಿಸಬೇಕಿದೆ ಎಂದರು.
ಶಿಕ್ಷಣದಲ್ಲಿ ಕನ್ನಡ ಕುರಿತು ಮಾತನಾಡಿದ ಪ್ರಾಧ್ಯಾಪಕಿ ಡಾ. ಪಿ.ಭಾರತೀದೇವಿ, ಕನ್ನಡ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರ ಜತೆಗೆ ಇತರೆ ಸಮುದಾಯದವರ ಮಾತೃಭಾಷೆ ಬಗ್ಗೆಯೂ ಚಿಂತಿಸಬೇಕಿದೆ ಎಂದರು.
ವ್ಯವಹಾರದಲ್ಲಿ ಕನ್ನಡ ಕುರಿತು ಮಾತನಾಡಿದ ಕನ್ನಡ ಪರಹೋರಾಟಗಾರ ಗೋ.ರಮೇಶ್ ಗೌಡ, ದೈನಂದಿನ ವ್ಯವಹಾರದಲ್ಲಿ ಗಣಕ ಯಂತ್ರದ ಬಳಕೆ ಹೆಚ್ಚಾದಂತೆ ಕನ್ನಡ ಬಳಕೆ ಕ್ಷೀಣಿಸುತ್ತಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ದೈನಂದಿನ ವ್ಯವಹಾರಗಳು ಕನ್ನಡ ಬಳಕೆ ಹೆಚ್ಚಾಗಬೇಕಿದೆ ಎಂದರು.
ವೇದಿಕೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಎಸ್.ಪಿ. ಪದ್ಮಪ್ರಸಾದ್ ಇದ್ದರು.
-2ಎಸ್‌ಎಂಜಿಕೆಪಿ03: