ಕನ್ನಡಪ್ರಭ ವಾರ್ತೆ ಸೊರಬ
ಪಟ್ಟಣದ ಕನ್ನಡ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ೧೦ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.
ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸದುದ್ದಕ್ಕೂ ಕನ್ನಡ ಕಾಲದಿಂದ ಕಾಲಕ್ಕೆ ಅನೇಕ ಸವಾಲುಗಳನ್ನು ಎದುರಿಸುತ್ತಾ ಬಂದಿದೆ. ಅಂದು ಸಂಸ್ಕೃತ ಭಾಷೆಯ ಕಾಲಕ್ಕೂ ಬೆದರದ ಕನ್ನಡ ಸಂಸ್ಕೃತದ ಪದಗಳನ್ನೇ ತನ್ನಲ್ಲಿ ಜೀರ್ಣಿಸಿಕೊಂಡು ಉಳಿದು ಬೆಳೆದಿದೆ. ಪ್ರಸ್ತುತ ದಿನಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಂತಹ ಬಲಿಷ್ಟ ಭಾಷೆಗಳು ಕನ್ನಡದ ಮೇಲೆ ಸವಾರಿ ಮಾಡುತ್ತಿವೆ. ಆದರೆ ನಾವು ಬುದ್ದಿವಂತರಾದರೆ ಯಾವ ಭಾಷೆಗಳನ್ನೂ ವಿರೋಧಿಸದೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ದಿಟ್ಟ ಗುಣ ಬೆಳೆಸಿಕೊಳ್ಳಬೇಕು ಎಂದ ಅವರು, ಕನ್ನಡ ಭಾಷೆ, ನೆಲ, ಜಲದ ಪ್ರಶ್ನೆ ಎದುರಾದಾಗ ಎಲ್ಲರೂ ಪ್ರತಿರೋಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಸಮ್ಮೇಳನಾಧ್ಯಕ್ಷ ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ತಮ್ಮ ಸರ್ವಾಧ್ಯಕ್ಷೀಯ ಭಾಷಣದಲ್ಲಿ, ತಾಲೂಕಿನಲ್ಲಿ ಅತಿ ಹೆಚ್ಚು ಕೆರೆಗಳಿದ್ದು, ಅವುಗಳ ಸಂವರ್ಧನೆ ಮಾಡುವ ಜೊತೆಗೆ ಸಚಿವ ಸಂಪುಟದಲ್ಲಿ ಸೊರಬವನ್ನು ಕೆರೆಗಳ ನಾಡು ಎಂದು ಘೋಷಿಸಲು ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದರು.
ಇದಕ್ಕೂ ಮೊದಲು ನಾಡು ನುಡಿ ಸಂಸ್ಕೃತಿಯ ಹಿರಿಮೆ ಸಾರುವ ೧೦ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಪುಷ್ಪಾಲಂಕಾರದಿಂದ ಕಂಗೊಳಿಸುವ ರಥದಲ್ಲಿ ಸಮ್ಮೇಳನಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಅವರನ್ನು ಕೂರಿಸಿ ಆರಾಧ್ಯ ದೈವ ಶ್ರೀರಂಗನಾಥ ದೇವಸ್ಥಾನದಿಂದ ಸಾಹಿತ್ಯ ಸಮ್ಮೇಳನದ ವೇದಿಕೆವರೆಗೆ ಕರೆತರಲಾಯಿತು. ಸುತ್ತ ನೆರೆದಿದ್ದ ಕನ್ನಡಾಭಿಮಾನಿಗಳಲ್ಲಿ ನಾಡು ನುಡಿಯ ಝೇಂಕಾರ ಮೊಳಗಿತು. ಈ ವೇಳೆ ಸಮ್ಮೇಳನಾಧ್ಯಕ್ಷರ ರಥದ ಮುಂದೆ ನೂರಾರು ಕಲಾತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಿದವು.
ತಾಲೂಕು ಕಸಾಪ ಮಾಜಿ ಅಧ್ಯಕ್ಷರುಗಳಾದ ಮಧುರಾಯ್ ಜಿ. ಶೇಟ್, ಶಿವಾನಂದ ಪಾಣಿ, ಎಸ್. ಕೃಷ್ಣಾನಂದ, ಹಾಲೇಶ ನವುಲೆ, ಕುಮಾರಸ್ವಾಮಿ, ಸಾಹಿತ್ಯ ಪರಿಷತ್ತಿನ ಬಸವನಗೌಡ ಮಲ್ಲಾಪುರ, ಮೋಹನ್ ಸುರಭಿ, ಎನ್. ಗಣಪತಿ, ಭಾರ್ಗವ್ ನಾಡಿಗ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜೈಶೀಲಗೌಡ, ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಡಾ.ಎಂ.ಕೆ.ಭಟ್, ಗುರುಮೂರ್ತಿ, ಸಾಹಿತಿ ಉಮೇಶ್ ಭದ್ರಾಪುರ, ಮಹೇಶ್ ಖಾರ್ವಿ ಇನ್ನಿತರರಿದ್ದರು. ತಾಲೂಕು ಕಸಾಪ ಅಧ್ಯಕ್ಷ ಷಣ್ಮುಖಾಚಾರ್ ಸ್ವಾಗತಿಸಿ, ಪ್ರಜ್ವಲ್ ಚಂದ್ರಗುತ್ತಿ ವಂದಿಸಿ, ಪ್ರಧಾನ ಕಾರ್ಯದರ್ಶಿ ರೇವಣಪ್ಪ ಬಿದರಗೇರಿ ನಿರೂಪಿಸಿದರು.