ಕನ್ನಡ ಕೇವಲ ಭಾಷೆಯಲ್ಲ ಅದು ನಮ್ಮ ಬದುಕು

KannadaprabhaNewsNetwork |  
Published : Nov 18, 2026, 02:00 AM IST
ಮಧುಗಿರಿ ಕಸಬಾ ಬಸವನಹಳ್ಳಿಯಲ್ಲಿ  ಕನ್ನಡ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ವಿಧಆನ ಸೌಧದ ಜಂಟಿ ನಿರ್ದೇಶಕ ಶಶಿಧರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.  | Kannada Prabha

ಸಾರಾಂಶ

ಕನ್ನಡ ಕೇವಲ ಭಾಷೆಯಲ್ಲ ಅದು ನಮ್ಮ ಬದುಕು. ಬದುಕು ಸಮೃದ್ಧವಾಗಿದ್ದರೆ ಭಾಷೆ ಸಮೃದ್ಧವಾಗಿ ಬೆಳೆಯುತ್ತದೆ ಎಂದು ಐಟಿಬಿಟಿ ಇಲಾಖೆಯ ಜಂಟಿ ನಿರ್ದೇಶಕ ಜೆ .ಇ.ಶಶಿಧರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಕನ್ನಡ ಕೇವಲ ಭಾಷೆಯಲ್ಲ ಅದು ನಮ್ಮ ಬದುಕು. ಬದುಕು ಸಮೃದ್ಧವಾಗಿದ್ದರೆ ಭಾಷೆ ಸಮೃದ್ಧವಾಗಿ ಬೆಳೆಯುತ್ತದೆ ಎಂದು ಐಟಿಬಿಟಿ ಇಲಾಖೆಯ ಜಂಟಿ ನಿರ್ದೇಶಕ ಜೆ .ಇ.ಶಶಿಧರ್ ತಿಳಿಸಿದರು.

ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಕನ್ನಡ ಜಾಗೃತಿ ವೇದಿಕೆ ಮತ್ತು ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಪಾಠಶಾಲೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭ್ಯವಾಗಿದೆ. ಕನ್ನಡವೆಂದರೆ ಶಕ್ತಿ ,ಸಂಸ್ಕೃತಿ ತಲೆಮಾರಿನಿಂದ ತಲೆ ಮಾರಿಗೆ ಸಾಗಿಸುವ ಜವಾಬ್ದಾರಿ ಎಲ್ಲರ ಹೊಣೆಗಾರಿಕೆ ಆಗಿದೆ ಎಂದರು.

ಹಿರಿಯ ಸಾಹಿತಿ ಪ್ರೊ.ಮಲನ ಮೂರ್ತಿ ಮಾತನಾಡಿ ,ಕನ್ನಡ ಕನ್ನಡಿಗರ ಅಸ್ಮಿತೆ, ಅಂತ:ಕರಣ, ಅರಿವು, ಭಾಷೆಯನ್ನು ಬಳಸಿ, ಉಳಿಸಿ ,ಬೆಳೆಸಿರಿ. ಸಂಸ್ಕೃತಿ, ಸೋದರತ್ವ, ಉದಾರತೆ ಕನ್ನಡಿಗರ ಹೃದಯ ಸಂಪನ್ನತೆ ಹೊಂದಿದೆ ಎಂದರು .

ನಿವೃತ್ತ ಪ್ರಾಂಶುಪಾಲ ಪ್ರೊ. ಡಿ.ಎಸ್. ಮುನೀಂದ್ರ ಕುಮಾರ್ ಮಾತನಾಡಿ, ಕನ್ನಡದಲ್ಲಿ ಶಿಕ್ಷಣ, ಆಡಳಿತದಲ್ಲಿ ಕನ್ನಡ ಬಳಕೆಯಾಗಬೇಕು.ಬಾಷೆ ಮಕ್ಕಳ ಮನೋ ವಿಕಾಸಕ್ಕೆ ದಾರಿಯಾಗುತ್ತದೆ. ಶ್ರೀಸಾಮಾನ್ಯನಿಗೆ ಎಲ್ಲಾ ವಿಚಾರಗಳು ಮುಟ್ಟುತ್ತವೆ ಎಂದರು.

ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ ಮಾತನಾಡಿ, ಮಾತೃಭಾಷೆಯನ್ನು ಪ್ರೀತಿಸಿ -ಆರಾಧಿಸಿ ,ಅಂತೆಯೇ ಇತರ ಭಾಷೆಗಳನ್ನು ಗೌರವಿಸಿ ಎಂದರು. ಕರ್ನಾಟಕ ರಾಜ್ಯ ಜಾನಪದ ಸಂಗೀತ ಯಕ್ಷಗಾನ ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ ಡಾ. ಕೆ. ಸಣ್ಣ ಹೊನ್ನಯ್ಯ ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ಕೇವಲ ಅಕ್ಷರಗಳಲ್ಲ, ಅಲ್ಲಿ ಗ್ರಾಮೀಣ ಸೊಗಡು ,ಸತ್ವ, ಸೌಂದರ್ಯವಿದೆ. ನಡೆ-ನುಡಿ ನೋಟದಲ್ಲಿ ಅದು ಹೊರ ಹೊಮ್ಮಬೇಕೆಂದರು.

ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ರಾಘವೇಂದ್ರ ಮಾತನಾಡಿ ,ನಮ್ಮ ಸಂಘಟನೆ ಎಂದಿಗೂ ನವೆಂಬರ್ ಕನ್ನಡಿಗರಾಗಿರದೆ, ನಾಡಿನ ನೆಲ ಜಲ ಭಾಷೆಗೆ ಧಕ್ಕೆ ಬಂದಾಗ ಉಗ್ರ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ. ಕನ್ನಡ ಭಾಷೆಗೆ ಆದ್ಯತೆಯ ಕೊರತೆಯಿಂದಾಗಿ ಅಭಿವೃದ್ಧಿ ಸಾಧ್ಯವಿಲ್ಲದಂತಾಗಿದೆ.ಕನ್ನಡಿಗರಿಗೆ ಅನ್ನ ಸಿಗುವಂತಾಗಬೇಕು ಕನ್ನಡ ಭಾಷೆ ಉಳಿದರೆ ಈ ನೆಲದ ಸಂಸ್ಕೃತಿ ಉಳಿಯುತ್ತದೆ ಎಂದರು.

ಇದೆ ವೇಳೆ ಪಟ್ಟಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪುತಳಿಗೆ ಮಾಲಾರ್ಪಣೆ ಮಾಡಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಕನ್ನಡ ಗೀತೆಗಳನ್ನು ಹಾಕಿಕೊಂಡು ಮೆರವಣಿಗೆ ಮೂಲಕ ಬಸವನಹಳ್ಳಿ ತಲುಪಿದರು.

ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ 2026 ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೆಂಕಟರಮಣಪ್ಪ ,ಡಾ. ನರಸೇಗೌಡ ,ಜಿ ನಾರಾಯಣರಾಜು ಹಾಗೂ ರಮೇಶ್ ಎಸ್ ವಿ ರವರನ್ನು ಸನ್ಮಾನಿಸಲಾಯಿತು .

ಕನ್ನಡ ಸಾಹಿತ್ಯ ಪರಿಷತ್ ರಂಗಶಾಮಣ್ಣ, ಕನ್ನಡ ಜಾಗೃತಿ ವೇದಿಕೆಯ ಪದಾಧಿಕಾರಿಗಳಾದ ಶಿವಲಿಂಗಪ್ಪ, ಪ್ರಸಾದ್, ರೋ ಹಿತ್, ಬೈರೇಶ್, ಮಹೇಶ್, ತಿಮ್ಮರಾಜು, ರಾಜಣ್ಣ, ರಂಗನಾಥ್, ಗಾಯಿತ್ರಿ ,ರೂಪ ಹಾಗೂ ಪತ್ರಕರ್ತ ನಂದಿಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲಾಶ್ರೀ ಉತ್ತಮ ವೇದಿಕೆ: ಜಿಪಂ ಸಿಇಒ
ತೋಂಟದ ಸಿದ್ಧಲಿಂಗ ಶ್ರೀಗೆ ಮಕ್ಕಳ ಬಗ್ಗೆ ಅಪಾರ ಕಾಳಜಿ ಇತ್ತು: ಈಶಣ್ಣ ಬೆಟಗೇರಿ