ಕನ್ನಡವೇ ನಮ್ಮ ಸಂಸ್ಕೃತಿ- ಭಾಷೆ ಉಳಿಸಿ, ಬೆಳೆಸಿ: ಡಾ.ರಮೇಶ್

KannadaprabhaNewsNetwork |  
Published : Nov 09, 2024, 01:07 AM IST
೦೮ಬಿಹೆಚ್‌ಆರ್ ೧: ಬಾಳೆಹೊನ್ನೂರು ಸಮೀಪದ ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಮೇಶ್ ಉದ್ಘಾಟಿಸಿದರು. ರೇಖಾ ಅಶೋಕ್, ನಾಗರಾಜ, ಕಾವ್ಯ ಇದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಕನ್ನಡ ನಮ್ಮ ಹೆಮ್ಮೆಯಾಗಿದ್ದು, ಕನ್ನಡ ಬಳಸುವ ಮೂಲಕ ಉಳಿಸಬೇಕು. ಕನ್ನಡವೇ ನಮ್ಮ ಸಂಸ್ಕೃತಿ ಅದನ್ನು ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶ್ ಹೇಳಿದರು.

ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕನ್ನಡ ನಮ್ಮ ಹೆಮ್ಮೆಯಾಗಿದ್ದು, ಕನ್ನಡ ಬಳಸುವ ಮೂಲಕ ಉಳಿಸಬೇಕು. ಕನ್ನಡವೇ ನಮ್ಮ ಸಂಸ್ಕೃತಿ ಅದನ್ನು ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶ್ ಹೇಳಿದರು. ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ರಿಟೀಷರ ಆಳ್ವಿಕೆ ಸಮಯದಲ್ಲಿ ಹರಿದು ಹಂಚಿ ಹೋಗಿದ್ದ ನಮ್ಮ ರಾಜ್ಯ ಅನೇಕ ಮಹನೀಯರ ಹೋರಾಟದ ಫಲವಾಗಿ ಏಕೀಕೃತವಾಗಿ ಮೈಸೂರು ರಾಜ್ಯದ ಉದಯವಾಯಿತು. ಬಳಿಕ ಕರ್ನಾಟಕ ಎಂದು ಮರು ನಾಮಕರಣವಾಯಿತು. ಇಂತಹ ನಮ್ಮ ನಾಡಿನ ಗತವೈಭವ ಸ್ಮರಿಸಿ, ರಾಜ್ಯದ ಏಳ್ಗೆಗಾಗಿ ಕನ್ನಡಿಗರಾದ ನಾವು ಹಗಲಿರುಳು ದುಡಿಯಬೇಕು.

ನವೋದಯ ವಿದ್ಯಾಲಯದಲ್ಲಿ ನಡೆಯುವ ರಾಜ್ಯೋತ್ಸವ ಸಮಾರೋಪ ಸಮಾರಂಭದಲ್ಲಿ ತೊಗಲು ಗೊಂಬೆ ಆಟ ಪ್ರದರ್ಶನದ ಸಿದ್ಧತೆ ಮಾಡಲಾಗುವುದು ಎಂಬ ಭರವಸೆ ನೀಡಿದರು.ಪ್ರಾಚಾರ್ಯೆ ರೇಖಾ ಅಶೋಕ್ ಮಾತನಾಡಿ, ವಿದ್ಯಾಲಯದಲ್ಲಿರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸುವ ಮೂಲಕ, ಉತ್ತಮ ಕನ್ನಡಾಭಿ ಮಾನ ಬೆಳೆಸಿಕೊಂಡು ನಾಡಿನ ಉತ್ತಮ ನಾಗರಿಕರಾಗಿ ಹೊರಹೊಮ್ಮುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು.ವಿದ್ಯಾರ್ಥಿಗಳಾದ ಚಂದನ್ ಮತ್ತು ಮಾನಸ ರಾಜ್ಯೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾಲಯದ ಸಂಗೀತ ವೃಂದದವರು ಪ್ರಸ್ತುತ ಪಡಿಸಿದ ಸಮೂಹಗೀತೆ ಎಲ್ಲರ ಮನಸೂರೆಗೊಂಡಿತು. ವಿದ್ಯಾಲಯದ ವಿವಿಧ ಜವಾಬ್ದಾರಿ ನಿಭಾಯಿಸಲು ಆಯ್ಕೆಯಾದ ವಿವಿಧ ವಿದ್ಯಾರ್ಥಿ ನಾಯಕರಿಗೆ ಪದಕ ವಿತರಣೆ ಮತ್ತು ಪ್ರತಿಜ್ಞಾ ವಿಧಿಯನ್ನು ಇದೇ ಸಂದರ್ಭದಲ್ಲಿ ಬೋಧಿಸಲಾಯಿತು. ಶಿಕ್ಷಕರಾದ ಎ.ಪಿ.ನಾಗರಾಜ, ಕಾವ್ಯ ಮತ್ತಿತರರು ಹಾಜರಿದ್ದರು.

೦೮ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಮೇಶ್ ಉದ್ಘಾಟಿಸಿದರು. ರೇಖಾ ಅಶೋಕ್, ನಾಗರಾಜ, ಕಾವ್ಯ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...