ಜಗತ್ತಿನಲ್ಲಿಯೇ ಕನ್ನಡಭಾಷೆ ಶ್ರೇಷ್ಠ:ಗಂಗನಗೌಡರ

KannadaprabhaNewsNetwork |  
Published : Nov 02, 2026, 04:15 AM IST
ಕನ್ನಡಪ | Kannada Prabha

ಸಾರಾಂಶ

ನಾಲತವಾಡ: ಕನ್ನಡ ಭಾಷೆ ಜಗತ್ತಿನಲ್ಲಿಯೇ ಶ್ರೇಷ್ಠ ಹಾಗೂ ಶ್ರೀಮಂತ ಭಾಷೆ ಎಂದು ಮಲ್ಲು ಗಂಗನಗೌಡರ ಹೇಳಿದರು. ಸ್ಥಳೀಯ ಜೆ.ಎಸ್.ದೇಶಮುಖ ಕನ್ನಡಪರ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ವೃತ್ತಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕನ್ನಡ ಭಾಷೆ ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ವೈವಿಧ್ಯಮಯ ಭಾಷಾ ಸೊಗಡನ್ನು ಹೊಂದಿದೆ. ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದ್ದು, ಕನ್ನಡಿಗರ ಹೆಮ್ಮೆಯ ಸಂಗತಿ.

ನಾಲತವಾಡ: ಕನ್ನಡ ಭಾಷೆ ಜಗತ್ತಿನಲ್ಲಿಯೇ ಶ್ರೇಷ್ಠ ಹಾಗೂ ಶ್ರೀಮಂತ ಭಾಷೆ ಎಂದು ಮಲ್ಲು ಗಂಗನಗೌಡರ ಹೇಳಿದರು.

ಸ್ಥಳೀಯ ಜೆ.ಎಸ್.ದೇಶಮುಖ ಕನ್ನಡಪರ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ವೃತ್ತಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕನ್ನಡ ಭಾಷೆ ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ವೈವಿಧ್ಯಮಯ ಭಾಷಾ ಸೊಗಡನ್ನು ಹೊಂದಿದೆ. ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದ್ದು, ಕನ್ನಡಿಗರ ಹೆಮ್ಮೆಯ ಸಂಗತಿ. ಇಂದಿನ ಆಧುನಿಕ ಯುಗದಲ್ಲಿ ಅನ್ಯ ಭಾಷೆಗಳ ಪ್ರಭಾವ ಹೆಚ್ಚಾಗುತ್ತಿದ್ದರೂ ಕನ್ನಡ ಭಾಷೆಯ ಬಳಕೆ ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದರು.ಮಾಜಿ ಸೈನಿಕ ಬಿ.ಜಿ.ಬಿರಾದಾರ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ, ಯುವ ಉದ್ಯಮಿ ಮಹಾಂತೇಶ ಗಂಗನಗೌಡರ, ಸಿಆರ್‌ಪಿ ಬಸವರಾಜ ಮಾದರ ಮಾತನಾಡಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಸಮಾಜ ಸೇವೆಗಾಗಿ ಬಾಪುಸಾಹೇಬ ದೇಶಮುಖ, ಮಾಧ್ಯಮ ರತ್ನ ಪ್ರಶಸ್ತಿ ಪಡೆದ ಯೂನುಸ್ ಮೂಲಿಮನಿ, ಮೈಸೂರು ದಸರಾ ಉತ್ಸವದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ವೀರೇಶ ಬಂಗಾರಗುಂಡು ಹಾಗೂ ಮಾಜಿ ಸೈನಿಕ ರಮೇಶ ಪಾಟೀಲರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಮುತ್ತು ಗೊರಬಾಳ, ಸುರೇಶ ಹಿರೇಮಠ, ಶಂಕ್ರಣ್ಣ ಟಕ್ಕಳಕಿ, ನಿಂಗಣ್ಣ ಅಗ್ನಿ, ಸಂಗಣ್ಣ ಕುಳಗೇರಿ, ಪರಶುರಾಮ ಜೋಗಿ, ರಫೀಕ ತೆಗ್ಗಿನಮನಿ, ವೀರೇಶ ಕಂದಗಲ್, ರಾಜು ಚಿನಿವಾಲರ, ಅಂಬ್ರೇಶ ಹಟ್ಟಿ, ಪಾಪಣ್ಣ ಗಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರದಲ್ಲೂ 620 ಅಪರೂಪದ ಭತ್ತದ ತಳಿ ಸಂರಕ್ಷಣೆ!
ವಲಸಿಗರಿಂದ ದೈನಂದಿನ ಜೀವನಕ್ಕೂ ಪೆಟ್ಟು!