ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯೋತ್ಸವ ಸನ್ಮಾನ

KannadaprabhaNewsNetwork |  
Published : Nov 02, 2026, 04:00 AM IST
ರಾಜ್ಯೋತ್ಸವ ಅಂಗವಾಗಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಾಧ್ಯಮ ಕ್ಷೇತ್ರದಲ್ಲಿ ದಿ ಹಿಂದೂ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ಹೃಷಿಕೇಶ ಬಹಾದ್ದೂರ ದೇಸಾಯಿ, ಕನ್ನಡಪ್ರಭ ಪತ್ರಿಕೆಯ ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ, ಪ್ರಜಾವಾಣಿಯ ವರದಿಗಾರ ಇಮಾಮ್ ಹುಸೇನ್ ಗುಡನವರ, ಲೋಕದರ್ಶನದ ಛಾಯಾಗ್ರಾಹಕ ವಿಶ್ವನಾಥ ದೇಸಾಯಿ, ಆರ್. ಕನ್ನಡದ ಜಿಲ್ಲಾ ವರದಿಗಾರ ಮೈಲಾರಿ ಪಾಟೀಲ, ಚಿಕ್ಕೋಡಿ ನ್ಯೂಸ್ 18ರ ವರದಿಗಾರ ಲೋಹಿತ್ ಶಿರೋಳ, ಸುವರ್ಣ ನ್ಯೂಸ್ ಕ್ಯಾಮರಾಮನ್ ಅಡಿವೆಪ್ಪ ಪಾಟೀಲ, ಟಿವಿ 9 ಕ್ಯಾಮರಾಮನ್ ಸದಾಶಿವ ಜಾಧವ, ಲೋಕದರ್ಶನ ಸಂಪಾದಕ ಶರಚ್ಚಂದ್ರ ದೇಸಾಯಿ, ಕನ್ನಡಮ್ಮ ಸಂಪಾದಕ ರಾಜಕುಮಾರ ಟೋಪಣ್ಣವರ, ವಿಜಯವಾಣಿ ಅಥಣಿ ವರದಿಗಾರ ರಾಜು ಗಾಳಿ, ಕನ್ನಡಪ್ರಭ ಯಮಕನಮರಡಿ ವರದಿಗಾರ ಎ.ಎಂ. ಕರ್ನಾಚಿ ಹಾಗೂ ಪತ್ರಿಕಾ ವಿತರಕ ಭೀಮಪ್ಪ ಕೋಟೆಕರ ಅವರನ್ನು ಸನ್ಮಾನಿಸಲಾಯಿತು.

ಸಾಹಿತ್ಯ ಕ್ಷೇತ್ರದಲ್ಲಿ ಮಹಾರಾಜ ಸಿದ್ದು ಹಳ್ಳೂರ, ಆನಂದ ಪುರಾಣಿಕ, ಬಸವರಾಜ ಕುಪ್ಪಸಗೌಡರ, ಎ.ಎ.ಸನದಿ, ಮೈತ್ರೇಯಿಣಿ ಗದಿಗೆಪ್ಪಗೌಡರ ಹಾಗೂ ಅಪ್ಪಾಸಾಬ ಅಲಿಬಾದಿ ಅವರನ್ನು ಗೌರವಿಸಲಾಯಿತು. ಜಾನಪದ ಕ್ಷೇತ್ರದಲ್ಲಿ ಇಸ್ಮಾಯಿಲ್ ಪೀರಜಾದೆ ಮತ್ತು ಪಂಚಾಕ್ಷರಿ ಗಡ್ಡಿ, ಸಮಾಜ ಸೇವೆಯಲ್ಲಿ ವಿರೇಶ ಬಸಯ್ಯ ಹಿರೇಮಠ, ಪದ್ಮಪ್ರಸಾದ ಹೂಲಿ, ಸುಧೀರ ಸಂಬಾಜಿ, ಸವಿತಾ ಹೆಬ್ಬಾರ, ದುರ್ಗೇಶ ಮೈತ್ರಿ, ಆರ್.ಬಿ. ಬನಶಂಕರಿ ಹಾಗೂ ಸುರೇಶ ಖಿರಾಯಿ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಡಾ.ಎಚ್.ಐ.ತಿಮ್ಮಾಪುರ, ಕೃಷಿ ಕ್ಷೇತ್ರದಲ್ಲಿ ಬಾಳಪ್ಪ ಬೆಳಕೂಡ, ವಿಜ್ಞಾನ ಕ್ಷೇತ್ರದಲ್ಲಿ ಮಂಜುನಾಥ ಚೌರಡ್ಡಿ, ವೈದ್ಯಕೀಯ ಕ್ಷೇತ್ರದಲ್ಲಿ ನಂದೇಶ್ವರ ಪಾಟೀಲ, ಡಾ.ಶಿವಶಂಕರಪ್ರಸಾದ ದೇವಲಾಪುರ ಹಾಗೂ ಡಾ.ಬಸವರಾಜ ಮೊತಿಮಠ ಅವರನ್ನು ಗೌರವಿಸಲಾಯಿತು. ಕಲಾವಿದರ ಕ್ಷೇತ್ರದಲ್ಲಿ ಆನಂದ ಮುರಕಿಭಾವಿ, ಶಿಕ್ಷಣ ಕ್ಷೇತ್ರದಲ್ಲಿ ಈರಣ್ಣ ಕಡಕೋಳ, ಕ್ರೀಡಾ ಕ್ಷೇತ್ರದಲ್ಲಿ ಉಮೇಶ ಕಲಘಟಗಿ ಹಾಗೂ ಶೌರ್ಯ ಕ್ಷೇತ್ರದಲ್ಲಿ ಹೊಳೆಪ್ಪ ಬಸವಣ್ಣೆ ನೇಸರಗಿ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪರ ಹೋರಾಟಗಾರರಿಗೂ ಗೌರವ:

ಕನ್ನಡಪರ ಹೋರಾಟಗಾರರಾದ ಮಹಾದೇವ ತಿಗಡಿ, ವಿಷ್ಣು ನಾಜರೆ, ಶೀಲಾ ದೇಶಪಾಂಡೆ, ಶಿವಾನಂದ ತಂಬಾಕಿ, ಶಾಂತಾ ಹನಬರ, ಅರುಣ ಪಾಟೀಲ, ಸಮೀರ ಕಣಬರ್ಗಿ, ಅಶೋಕ ದಾಂಡಗ್ಯಾಗೋಳ, ಬಾಬು ಮಡಾಕರ, ಬಲರಾಮ ಮಾಸೇನಟ್ಟಿ, ನಾಗೇಶ ಮಾರೀ, ರಮೇಶ ತಳವಾರ, ಆಯೇಷಾ ಸನದಿ, ರೇಷ್ಮಾ ಕಿತ್ತೂರ, ಮಲ್ಲಿಕಾರ್ಜುನ ತಳವಾರ, ವಿಜಯ ಪವಾರ, ಮಲಿಕಜಾನ ನದಾಫ, ಗಣೇಶ ದೊಡ್ಡಮನಿ, ಮಲ್ಲಪ್ಪ ಸೊಂಟಕ್ಕಿ, ಹನುಮಂತ ಬುಚಡಿ, ತ್ವಹೀರಖಾನ್ ಪಠಾಣ, ರಾಜು ಟೋಪಗಿ, ಶ್ರೀಪಾಲ ಪದ್ಮಣ್ಣವರ, ಸುರೇಶ ಅನಗೋಳ, ಸುಧೀರ ನಿರ್ವಾಣಿ, ಶಿವರಡ್ಡಿ ಹುಚ್ಚರಡ್ಡಿ, ಚಂದ್ರಶೇಖರ ಕಲ್ಯಾಣಿ, ಈರಯ್ಯ ಕಿಲ್ಲೇದಾರ, ಯಶೋಧಾ ಬಿರಡಿ ಹಾಗೂ ರಾಮಾ ವಣ್ಣೂರ (ಮರಣೋತ್ತರ) ಅವರನ್ನು ಸನ್ಮಾನಿಸಲಾಯಿತು.

ಎಚ್‌ಐವಿ ನಿಯಂತ್ರಣದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ:

ಎಚ್‌ಐವಿ ನಿಯಂತ್ರಣ ಕಾರ್ಯಕ್ರಮದಡಿ ಶೇ.95ರ ಗುರಿ ಸಾಧಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ಬೆಳಗಾವಿ ಜಿಲ್ಲೆಯನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಗಡಾದ ಹಾಗೂ ಜಿಲ್ಲಾ ಎಚ್‌ಐವಿ,ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಾಂದನಿ ದೇವಡಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣ್ಯರು ಸನ್ಮಾನಿಸಿ ಗೌರವಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌ ಯಾರಿಗೆ ತಿರುಗುಬಾಣ ಅಂತ ಇಂದು ಹೇಳ್ತೀನಿ: ಎಚ್ಡಿಕೆ
ಇದು ಕೇವಲ ಟ್ರೈಲರ್, ಪಿಕ್ಚರ್ ಅಭಿ ಬಾಕಿ ಹೈ: ಪ್ರಿಯಾಂಕ್‌