ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ಲಿಂಗೈಕ್ಯ ಡಾ.ಶಿವಬಸವ ಮಹಾಸ್ವಾಮಿಗಳ 135ನೇ ಜಯಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಂತ ಲಿಪಿಯನ್ನು ಹೊಂದಿರುವ, ಸ್ವಂತ ವ್ಯಾಕರಣ ಹೊಂದಿರುವ, ಸ್ವಂತ ಅಂಕಿ ಅಂಕಿಗಳನ್ನು ಹೊಂದಿರುವ ಭಾಷೆ ಎಂದರೆ ಅದು ಕನ್ನಡ ಭಾಷೆ. ಬರೆದಂತೆ ಉಚ್ಚಾರಣೆ ಮಾಡುವ ಭಾಷೆ ಇದಾಗಿದೆ. ಈ ಭಾಷೆಯಲ್ಲಿ ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕಲಿಂಗ ಎಂದು ಗುರುತಿಸಬಹುದಾಗಿದೆ ಎಂದರು.ಜಗತ್ತಿನ ಏಳು ಚಿರಂಜೀವಿಗಳಲ್ಲಿ ಇಬ್ಬರು ಕನ್ನಡದವರು. ಅದು ನಮಗೆ ಹೆಮ್ಮೆಯ ವಿಚಾರ. ಈ ಪೈಕಿ ಒಬ್ಬ ಹನುಮಂತ ಮತ್ತೊಬ್ಬ ಇದೇ ಜಿಲ್ಲೆಯ ಪರಶುರಾಮ. ಅವರು ನಮ್ಮ ಮಾತೃಭಾಷೆ ಕನ್ನಡ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಅನಿಸುತ್ತದೆ ಎಂದ ಅವರು, ಜಗತ್ತಿನ ಎಲ್ಲ ದೇಶಗಳಲ್ಲಿ ಕಂಪ್ಯೂಟರ್ ಜಗತ್ತನ್ನು ಕನ್ನಡಿಗರೇ ಅಳುತ್ತಿದ್ದಾರೆ. ಬಹುಸಂಖ್ಯಾತ ಕನ್ನಡಿಗರು ಇಂದು ತಾಂತ್ರಿಕ ಜಗತ್ತನ್ನೇ ಆಳುತ್ತಿದ್ದಾರೆ ಎಂದು ತಿಳಿಸಿದರು.
ಅರಭಾವಿ- ಕಡೋಲಿಯ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಶ್ರೀ ಗುರುಬಸವಲಿಂಗ ಸ್ವಾಮೀಜಿಯವರಿಂದ ಷಟಸ್ಥಲ ಧ್ವಜಾರೋಹಣ ನೆರವೇರುವುದರೊಂದಿಗೆ ನಾಲ್ಕು ದಿನಗಳ ಮಹೋತ್ಸವ ಆರಂಭಗೊಂಡಿತು. ಕಟಕೋಳ ಚೌಕಿಮಠದ ನಾಗಭೂಷಣ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶೇಗುಣಸಿ ವಿರಕ್ತಮಠದ ಡಾ.ಮಹಾಂತ ಪ್ರಭು ಸ್ವಾಮೀಜಿ ಸಮ್ಮುಖದಲ್ಲಿದ್ದರು. ಜಮಖಂಡಿ ಓಲೆಮಠದ ಉತ್ತರಾಧಿಕಾರಿ ಆನಂದ ದೇವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವ ವರ್ಷದಲ್ಲಿರುವ ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳಿಗೆ ಅಮೃತ ಗೌರವ ಅಭಿನಂದನೆ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಮೈಸೂರಿನ ಎಚ್.ಬಿ. ನಾಗೇಂದ್ರ ಪ್ರಸಾದ್ ಆಗಮಿಸಿದ್ದರು.