ಎಲ್ಲ ಭಾಷೆಗಳಿಗಿಂತ ಕನ್ನಡ ಶ್ರೀಮಂತ ಭಾಷೆ: ಅಂಜುಮ್‌ ತಬಸುಮ್‌

KannadaprabhaNewsNetwork |  
Published : Jan 19, 2024, 01:47 AM IST
ಚಿತ್ರ 18ಬಿಡಿಆರ್3ಹುಮನಾಬಾದ್‌ ಪಟ್ಟಣದಲ್ಲಿ ಕರ್ನಾಟಕ ಸಂಭ್ರಮ 50ರ ಹಿನ್ನಲೆ ಕನ್ನಡ ಜ್ಯೋತಿ ರಥಯಾತ್ರೆಯನ್ನು ವಿಧಾನ ಪರಿಷತ್‌ ಸದಸ್ಯ ಡಾ. ಚಂದ್ರಶೇಖರ ಪಾಟೀಲ್‌ ಅವರು ಕನ್ನಡ ಜ್ಯೋತಿ ರಥಯಾತ್ರೆಗೆ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಹುಮನಾಬಾದ ತಾಲೂಕು ಆಡಳಿತ, ತಾಪಂ, ಕಸಾಪ, ಕನ್ನಡಪರ ಸಂಘಟನೆಗಳಿಂದ ಗುರುವಾರ ಕರ್ನಾಟಕ ಸಂಭ್ರಮ 50ರ ಹಿನ್ನೆಲೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಜಗತ್ತಿನಲ್ಲಿರುವ ಇತರ ಎಲ್ಲ ಭಾಷೆಗಳಿಗಿಂತ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಇದಕ್ಕೆ ಸರಿಸಾಟಿ ಭಾಷೆ ಮತ್ತೊಂದಿಲ್ಲ. ಪ್ರಪಂಚದ ಎಲ್ಲ ಭಾಷೆಗಳ ಜನರಿಗೆ ಉಣಬಡಿಸುವಷ್ಟು ಅಗಾಧವಾದ ಶಬ್ಧ ಸಂಪತ್ತು ಕನ್ನಡ ಭಾಷೆಯಲ್ಲಿದೆ ಎಂದು ತಹಸೀಲ್ದಾರ್‌ ಅಂಜುಮ್‌ ತಬಸುಮ್‌ ಹೇಳಿದರು.

ಹುಮನಾಬಾದ ತಾಲೂಕು ಆಡಳಿತ, ತಾಪಂ, ಕಸಾಪ, ಕನ್ನಡಪರ ಸಂಘಟನೆಗಳಿಂದ ಗುರುವಾರ ಕರ್ನಾಟಕ ಸಂಭ್ರಮ 50ರ ಹಿನ್ನೆಲೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಅಂಜುಮ್‌ ತಬಸುಮ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ಮುಂಭಾಗ ಆಗಮಿಸಿದ ಕನ್ನಡ ರಥದಲ್ಲಿರುವ ನಾಡದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಪಟ್ಟಣದ ಪ್ರಮುಖ ಮಾರ್ಗಗಳಾದ ಪಂಡಿತ ಶಿವಚಂದ್ರ ನೆಲ್ಲಗಿ ಮಾರ್ಗದಿಂದ ಬಸವೇಶ್ವರ ವೃತ್ತ, ಛತ್ರಪತಿ ಶಿವಾಜಿ ವೃತ್ತ, ಡಾ. ಅಂಬೇಡ್ಕರ್‌ ವೃತ್ತದ ಮೂಲಕ ಸರ್ಕಾರಿ ನೌಕರ ಭವನದ ವರೆಗೆ ಭವ್ಯ ಮೇರವಣಿಗೆ ಜರುಗಿತು. ರಸ್ತೆಯುದ್ದಕ್ಕೂ ಜಾನಪದ ವಾದ್ಯ ಜನಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಬಳಿಕ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಗ್ರೇಡ್‌-2 ತಹಸೀಲ್ದಾರ್‌ ಮಂಜುನಾಥ ಪಂಚಾಳ, ತಾಪಂ ಅಧಿಕಾರಿ ಡಾ. ಗೋವಿಂದ, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ ಹಟಿಯ್ಯಾಳ, ಸಹಾಯಕ ಕೃಷಿ ನಿರ್ದೇಶಕ ಗೌತಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶಿವಪ್ರಕಾಶ ಹಿರೇಮಠ, ಡಾ. ನಾಗನಾಥ ಹುಲಸೂರೆ, ಸಿಪಿಐ ಗುರುಲಿಂಗಪ್ಪಗೌಡ ಪಾಟೀಲ್‌, ಪಿಎಸ್‌ಐ ತಿಮ್ಮಯ್ಯ, ಸಂಚಾರ ಪಿಎಸ್‌ಐ ಬಸವಲಿಂಗ ಗೂಡಿಹಾಳ, ಬಿಇಒ ವೆಂಕಟೇಶ ಗುಡಾಳ, ಜೈ ಕರ್ನಾಟಕ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ನವಿನಕುಮಾರ ಬತಲಿ, ಕನ್ನಡ ಸೇನೆ ಮುಖಂಡರಾದ ಸೋಮನಾಥ ವರವಟ್ಟಿ, ಸುಭಾಷ ಕೆನಾಡೆ, ಕಸಾಪ ಅಧ್ಯಕ್ಷ ಸಿದ್ದಲಿಂಗ ನಿರ್ಣಾ, ಸೇರಿದಂತೆ ಅನೇಕರಿದ್ದರು.

ಇದಕ್ಕೂ ಮುನ್ನ ಎಂಎಲ್ಸಿ ಡಾ. ಚಂದ್ರಶೇಖರ ಪಾಟೀಲ್‌ ಡೊಳ್ಳು ಭಾರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ