ಕನ್ನಡ ಕಲರವ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗೆ ಆಹ್ವಾನ

KannadaprabhaNewsNetwork |  
Published : Jun 18, 2025, 11:49 PM IST
32 | Kannada Prabha

ಸಾರಾಂಶ

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ವತಿಯಿಂದ ಕನ್ನಡ ಕಲರವ -೨ ಕಾರ್ಯಕ್ರಮವನ್ನು ಆ.8ರಂದು ಆಯೋಜಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ಆ.2ರಂದು ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ , ಭಾಷಣ ಸ್ಪರ್ಧೆ, ಹಾಗೂ ಸ್ವ ರಚಿತ ಕವನ ಸ್ಪರ್ಧೆ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ವತಿಯಿಂದ ಕನ್ನಡ ಕಲರವ -೨ ಕಾರ್ಯಕ್ರಮವನ್ನು ಆ.8ರಂದು ಆಯೋಜಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ಆ.2ರಂದು ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ , ಭಾಷಣ ಸ್ಪರ್ಧೆ, ಹಾಗೂ ಸ್ವ ರಚಿತ ಕವನ ಸ್ಪರ್ಧೆ ಆಯೋಜಿಸಲಾಗಿದೆ.ಸ್ಪರ್ಧೆಯು ಹಿರಿಯ ಪ್ರಾಥಮಿಕ , ಪ್ರೌಢ , ಕಾಲೇಜು ವಿಭಾಗದಲ್ಲಿ ನಡೆಯಲಿದ್ದು, ಭಾಗವಹಿಸಲಿಚ್ಚಿಸುವ ವಿದ್ಯಾರ್ಥಿಗಳು ಸೆ.20ರೊಳಗೆ ತಮ್ಮ ತಮ್ಮ ಹೆಸರನ್ನು ಶಾಲಾ ಮುಖ್ಯೋಪಾಧ್ಯಾಯರ ದೃಢೀಕರಣದೊಂದಿಗೆ ಸಲ್ಲಿಸಲು ಕೋರಲಾಗಿದೆ.ಪ್ರಬಂಧ ಸ್ಪರ್ಧೆ ಯ ವಿಷಯ: ನಾ ಕಂಡ ತೆರೆಮರೆಯ ಸ್ವಾತಂತ್ರ್ಯ ಯೋಧ (ಇತಿಹಾಸದ ಪುಟಗಳಲ್ಲಿ ದಾಖಲಾಗದೆ ಉಳಿದಿರುವ ದೇಶಕ್ಕಾಗಿ ಪ್ರಾಣಾರ್ಪಣೆ ಗೈದಿರುವ ಸ್ವಾತಂತ್ರ್ಯ ಯೋಧರ ಬಗ್ಗೆ ಬೆಳಕು ಚೆಲ್ಲುವ ಬರಹ), ಭಾಷಣ ಸ್ಪರ್ಧೆಯಲ್ಲಿ: ಹಿರಿಯ ಪ್ರಾಥಮಿಕ ವಿಭಾಗ: ಅಪರೇಷನ್ ಸಿಂದೂರ, ಪ್ರೌಢ ವಿಭಾಗ: ಜಗತ್ತಿನ ಶ್ರೇಷ್ಠ ರಾಷ್ಟ್ರವಾಗಿ ಮುನ್ನುಗ್ಗುತ್ತಿರುವ ಭಾರತ , ಕಾಲೇಜು ವಿಭಾಗ: ನವ ಭಾರತ ನಿರ್ಮಾಣದಲ್ಲಿ ದೇಶ ಎದುರಿಸುತ್ತಿರುವ ಸವಾಲುಗಳು. ಸ್ವರಚಿತ ಕವನ ವಾಚನ ವಿಷಯ: ನಮ್ಮ ದೇಶಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಆಧರಿಸಿ ಸ್ವ ರಚಿಸಿದ ಕವನ ವಾಚಿಸುವುದು . ಸ್ಪರ್ಧೆ ಆ.2ರಂದು ಅಪರಾಹ್ನ 2ರಿಂದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ನಡೆಯಲಿದೆ. ವಿಜೇತರಿಗೆ ಬಹುಮಾನವನ್ನು ಆ.9ರಂದು ಮಧ್ಯಾಹ್ನ ನಡೆಯಲಿರುವ ಕನ್ನಡ ಕಲರವ -೨ ರ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ : 9743687614, 9591340959 ಸಂಪರ್ಕಿಸುವಂತೆ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷ ಕರುಣಕಾರ ಸುವರ್ಣ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿಯಲ್ಲಿ 6 ಸಾವಿರ ಮಹಿಳೆಯರಿಂದ ಶಿವಬಸವ ಬುತ್ತಿ ಮೆರವಣಿಗೆ
ಪ್ರಾಣಿಪ್ರಿಯರನ್ನು ಆಕರ್ಷಿಸಿದ ಶ್ವಾನ ಪ್ರದರ್ಶನ