ಮೈಷುಗರ್ ಪ್ರೌಢಶಾಲೆ ಖಾಸಗಿ ಗುತ್ತಿಗೆಗೆ ವಿರೋಧ

KannadaprabhaNewsNetwork |  
Published : Jun 18, 2025, 11:49 PM IST
18ಕೆಎಂಎನ್ ಡಿ17 | Kannada Prabha

ಸಾರಾಂಶ

ಮೆಷುಗರ್ ಪ್ರೌಢಶಾಲೆಯನ್ನು 15 ವರ್ಷದ ಅವಧಿಗೆ ಜಿಲ್ಲೆಯ ಪ್ರಭಾವಶಾಲಿ ರಾಜಕಾರಣಿಯೊಬ್ಬರ ವಿದ್ಯಾಸಂಸ್ಥೆಗೆ ಉಚಿತವಾಗಿ ಗುತ್ತಿಗೆ ನೀಡಲು ಮುಂದಾಗುತ್ತಿರುವುದನ್ನು ಖಂಡಿಸಿ ಬುಧವಾರ ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟ ಹಾಗೂ ರೈತ ಸಂಘಟನೆಗಳ ನೇತೃತ್ವದಲ್ಲಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟಿಸಲಾಯಿತು.

ಕನ್ನಡಪ್ರಭ ವಾರ್ತೆ, ಮಂಡ್ಯ

ಮೆಷುಗರ್ ಪ್ರೌಢಶಾಲೆಯನ್ನು 15 ವರ್ಷದ ಅವಧಿಗೆ ಜಿಲ್ಲೆಯ ಪ್ರಭಾವಶಾಲಿ ರಾಜಕಾರಣಿಯೊಬ್ಬರ ವಿದ್ಯಾಸಂಸ್ಥೆಗೆ ಉಚಿತವಾಗಿ ಗುತ್ತಿಗೆ ನೀಡಲು ಮುಂದಾಗುತ್ತಿರುವುದನ್ನು ಖಂಡಿಸಿ ಬುಧವಾರ ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟ ಹಾಗೂ ರೈತ ಸಂಘಟನೆಗಳ ನೇತೃತ್ವದಲ್ಲಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟಿಸಲಾಯಿತು.ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ಮಾತನಾಡಿ, ಮೈಷುಗರ್ ಶಾಲೆ ಸರ್ಕಾರದ ಅನುದಾನಕ್ಕೆ ಒಳಪಟ್ಟಿದ್ದು ಜೊತೆಗೆ ರೈತರು ಕೂಡ ಪ್ರತಿ ಟನ್‌ಗೆ ನಾಲ್ಕು ರು. ನೀಡುತ್ತಿದ್ದಾರೆ. ಜೊತೆಗೆ ಅಲ್ಲಿ ಹಳೆ ವಿದ್ಯಾರ್ಥಿಗಳ ಒಕ್ಕೂಟದಿಂದ ಇತ್ತೀಚೆಗೆ 40 ಲಕ್ಷ ರು. ವೆಚ್ಚದಲ್ಲಿ ಶಾಲೆಯನ್ನು ದುರಸ್ತಿಗೊಳಿಸಿ ಸುಣ್ಣ ಬಣ್ಣ ಬಳಿದು ವ್ಯವಸ್ಥಿತವಾಗಿ ಇಟ್ಟಿದ್ದಾರೆ. ಜೊತೆಗೆ ಭಾರತ್ ಪೆಟ್ರೋಲಿಯಂನವರು 80 ಲಕ್ಷ ರು. ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಿದ್ದು ಈ ರೀತಿ ಸುಸಜ್ಜಿತವಾಗಿದ್ದ ಶಾಲೆಯನ್ನು ಅನವಶ್ಯಕ ಕಾರಣಗಳನ್ನು ನೀಡುತ್ತಾ 15 ವರ್ಷದ ಉಚಿತ ಗುತ್ತಿಗೆಯನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಂದು ಆಗ್ರಹಿಸಿದರು.ಜೊತೆಗೆ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂದಿನ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಅಂದಿನ 40 ವರ್ಷದ ಖಾಸಗೀಕರಣವನ್ನು ವಿರೋಧಿಸಿ ಎತ್ತಿನ ಗಾಡಿ ಮೆರವಣಿಗೆ ಮಾಡಿದ್ದು, ಇಂದು ಅದನ್ನು ಮರೆತು ತಮ್ಮ ಹಿಂದಿನ ಮಾತನ್ನೇ ಧಿಕ್ಕರಿಸಿ 15 ವರ್ಷಗಳ ಅವಽಗೆ ಗುತ್ತಿಗೆ ನೀಡಲು ಹೊರಟಿರುವುದನ್ನು ಖಂಡಿಸಲಾಯಿತು.ಈ ಸಂದರ್ಭದಲ್ಲಿ ರೈತ ಸಂಘದ ಇಂಡುವಾಳು ಚಂದ್ರಶೇಖರ್ ಶಿವಳ್ಳಿ ಚಂದ್ರಶೇಖರ್, ತುಳಸಿ, ವಡ್ಡರಹಳ್ಳಿ ಕೊಪ್ಪಲ್ ಚಂದ್ರಶೇಖರ್, ಮಲ್ಲಿಕಾರ್ಜುನ್, ಪ್ರಶಾಂತ್, ಲಕ್ಕಪ್ಪ, ಶಂಕರ್, ನಗರ ಮಹೇಶ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿಯಲ್ಲಿ 6 ಸಾವಿರ ಮಹಿಳೆಯರಿಂದ ಶಿವಬಸವ ಬುತ್ತಿ ಮೆರವಣಿಗೆ
ಪ್ರಾಣಿಪ್ರಿಯರನ್ನು ಆಕರ್ಷಿಸಿದ ಶ್ವಾನ ಪ್ರದರ್ಶನ