ಕನ್ನಡಪ್ರಭ ವಾರ್ತೆ, ತರೀಕೆರೆ
ಕನ್ನಡ ಭಾಷೆಗೆ ಸುದೀರ್ಘ ಎರಡೂವರೆ ಸಾವಿರ ವರ್ಷದ ಪರಂಪರೆ ಇದೆ ಎಂದು ಮೈಸೂರು ಹಿರಿಯ ಸಾಹಿತಿ ಎ.ವಿ.ಸೂರ್ಯನಾರಾಯಣ ಸ್ವಾಮಿ ಹೇಳಿದ್ದಾರೆ.ಪಟ್ಟಣದ ಅಂಚೆ ಪ್ರತಿಷ್ಠಾನ ತರೀಕೆರೆಯಿಂದ ಅಂಚೆ ಪ್ರತಿಷ್ಠಾನದ ಸಭಾಂಗಣದಲ್ಲಿ ಶ್ರೀ ದತ್ತ ಜಯಂತಿ, ಶ್ರೀ ದತ್ತ ಹೋಮ ಮತ್ತು ಭಜನೆ ಮೂರನೇ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಭಾಷೆಯಲ್ಲಿ ಶಾಂತ ನುಡಿ, ಗ್ರಾಂಥ ನುಡಿ, ಕಾಂತ ನುಡಿ, ಅಯಸ್ಕಾಂತ ನುಡಿ ಇದೆ, ಶಾಂತ ನುಡಿಪ್ರಶಾಂತ ನುಡಿಗಳನ್ನು ಅಧ್ಯಯನ ಮಾಡುವುದೇ ವಿಶೇಷ ಆನಂದವನ್ನುಂಟು ಮಾಡುತ್ತದೆ. ಕನ್ನಡ ಭಾಷೆ ಆನಂದ ನೀಡುತ್ತದೆ ಎಂದು ಹೇಳಿದರು.
ಅನೇಕ ಹಿರಿಯರು ಮತ್ತು ಮಹನೀಯರ ಆಶೀರ್ವಾದದಿಂದ ಅಂಚೆ ಪ್ಪತಿಷ್ಠಾನದ ಸಭಾಂಗಣದಲ್ಲಿ ಬಹಳ ಅಪರೂಪ ದ ವಾತಾವರಣದಲ್ಲಿ ಶ್ರೀ ದತ್ತ ಜಯಂತಿ, ಶ್ರೀ ದತ್ತ ಹೋಮ, 3ನೇ ವರ್ಷದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಚೆನ್ನಾಗಿ ನಡೆಯುತ್ತಿದೆ. ನಿಜವಾಗಿ ಇಂತಹ ಕ್ಷಣವನ್ನು ಭಗವಂತ ಕರುಣಿಸುತ್ತಾನೆ, ದೇಶಪ್ರೇಮ ವಿಶ್ವಪ್ರೇಮ ಎನ್ನುವುದು ಬಹಳ ದೊಡ್ಡದು, ಈ ಸಮಾರಂಭ ಬಹಳ ಅಭಿಮಾನ ಉಂಟು ಮಾಡುವಂತಹ ಕಾರ್ಯಕ್ರಮ. ಪ್ರತಿಭಾ ಪುರಸ್ಕಾರ, ಹಿರಿಯರಿಗೆ ಸನ್ಮಾನ ಸಮಾರಂಭ ನಡೆದಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದು ಹೇಳಿದರು.ಸೊರಬ ಪುರಸಭೆ ಮಾಜಿ ಅಧ್ಯಕ್ಷ, ಶಿವಮೊಗ್ಗ ಕ್ರಾಂಮ್ಸ್ ಅಧ್ಯಕ್ಷ ಎಚ್.ಎಸ್.ಮಂಜಪ್ಪ ಮಾತನಾಡಿ ಉನ್ನತ ವ್ಯಕ್ತಿತ್ವ ಹೊಂದಿರುವ ಮಹನೀಯರನ್ನು ಸನ್ಮಾನಿಸುವ ಅವಕಾಶ ದೊರೆತಿದ್ದು ನನ್ನ ಸೌಭಾಗ್ಯ, ಸನ್ಮಾನಿತರ ಪರಿಚಯ ಕೇಳಿ ತುಂಬಾ ಸಂತೋಷವಾಯಿತು. ನನ್ನ ಮತ್ತು ತರೀಕೆರೆ ಮಾಜಿ ಪುರಸಭಾಧ್ಯಕ್ಷ ಎನ್.ಮಂಜುನಾಥ್ ಅವರ ಬಾಂಧವ್ಯ ಬಹಳ ದೊಡ್ಡದು, ಪ್ರತಿಷ್ಠಾನದಿಂದ ಶ್ರೀ ದತ್ತ ಜಯಂತಿ, ಮೂರನೇ ವರ್ಷದ ವಾರ್ಷಿಕೋತ್ಸವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆದಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಕನ್ನಡ ಉಪನ್ಯಾಸಕ ಡಾ.ಹಾ.ಮಾ.ನಾಗಾರ್ಜುನ ಮಾತನಾಡಿ ಪ್ರತಿಭೆ ಎನ್ನುವುದು ಹೊಸದನ್ನು ಸೃಷ್ಠಿಸುತ್ತದೆ ಮತ್ತು ಹೊಸತನವನ್ನು ತಂದುಕೊಡುತ್ತದೆ. ಪ್ರತಿಭೆಯನ್ನು ಗುರುತಿಸಿ ಗೌರವಿಸುವುದು ಒಂದು ಪುಣ್ಯ ಕಾರ್ಯ ಎಂದು ಹೇಳಿದರು.ಬೆಳಗಾಂ, ಆನಂದಾಶ್ರಮ ಬೇವಿನಕೊಪ್ಪ ಬೈಲಹೊಂಗಲದ ಪರಮಪೂಜ್ಯ ಸ್ವಾಮಿ ಶ್ರೀ ವಿಜಯಾನಂದರು ಅಂಚೆ ಪ್ರತಿಷ್ಠಾನದ ವೇದಿಕೆಗೆ ಆಗಮಿಸಿ ಪ್ರತಿಷ್ಠಾನದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಸತ್ಕಾರ್ಯಗಳು ನಿರಂತರವಾಗಿ ಜರುಗುತ್ತಿರಲಿ ಎಂದು ಶುಭ ಕೋರಿದರು.
ಪುರಸಭೆ ನಿವೃತ್ತ ನೌಕರ ಡಿ.ಶಂಕರ ನಾರಾಯಣ ಮತ್ತು ನಾಗರತ್ನಮ್ಮ, ವರ್ತಕರು ಸಾಹಿತ್ಯಾಸಕ್ತರಾದ ಶಾಂತ ಕುಮಾರ್ ಶ್ರೇಷ್ಠಿ, ಎನ್.ಕೆ.ಸುಬ್ರಹ್ಮಣ್ಯ ಮತ್ತು ಏನ್.ಎಸ್,.ಭಾಗ್ಯಲಕ್ಷ್ಮಿ, ಶತಾಯುಷಿ ಸೈಯಿದಾ ಬೀಬಿ, ಅಜ್ಜಂಪುರ ಹಿರಿಯ ಪತ್ರಕರ್ತ ಜಿ.ಬಿ.ಮಲ್ಲಿಕಾರ್ಜುನಸ್ವಾಮಿ ಅವರನ್ನು ಸನ್ಮಾನಿಸಲಾಯಿತು.ಅಂಚೆ ಪ್ರತಿಷ್ಠಾನದ ಮತ್ತು ಮೈಸೂರು ಆಯುರ್ವೇದ ವೈದ್ಯ ಡಾ.ರಾಧಿಕ ಅವರ ಕ್ಲಿನಿಕ್ ನ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ನೆರವೇರಿಸಲಾಯಿತು. ಅಂಚೆ ಪ್ರತಿಷ್ಠಾನದ ಖಚಾಂಚಿ ಎಚ್.ವಿ.ಸತ್ಯನಾರಾಯಣ, ಸಹ ಕಾರ್ಯದರ್ಶಿ ಟಿ.ಪಿ. ರಾಘವೇಂದ್ರ, ನಿರ್ದೇಶಕ ಟಿ.ಜಿ.ಅಶೋಕ ಕುಮಾರ್, ಅಧ್ಯಕ್ಷ ಎ.ವಿ.ನಾಗಭೂಷಣ್, ನಿರ್ದೇಶಕ ಅಜ್ಜಂಪುರ ರೇವಣ್ಣ ಪ್ರತಿಷ್ಠಾನದ ನಿರ್ದೇಶಕರು, ಪದಾದಿಕಾರಿಗಳು ಭಾಗವಹಿಸಿದ್ದರು.28ಕೆಟಿಆರ್.ಕೆ1ಃ
ತರೀಕೆರೆಯಲ್ಲಿ ಅಂಚೆ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮೈಸೂರು ಸಾಹಿತಿ ಎ.ವಿ. ಸೂರ್ಯನಾರಾಯಣಸ್ವಾಮಿ, ಸೊರಬ ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜಪ್ಪ, ಪ್ರತಿಷ್ಠಾನದ ಅಧ್ಯಕ್ಷ ಎ.ವಿ.ನಾಗಭೂಷಣ್ , ಖಚಾಂಚಿ ಎಚ್.ವಿ.ಸತ್ಯನಾರಾಯಣ್, ಅಜ್ಜಂಪುರ ರೇವಣ್ಣ ಇದ್ದರು.