ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಮಾದಾಪುರ ಮೊರಾರ್ಜಿ ವಸತಿ ಶಾಲೆಯಲ್ಲಿ ಆದರ್ಶ ಸುಗಮ ಸಂಗೀತಾ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಕಲಾಸಂಘ ಸಹಯೋಗದಲ್ಲಿ ನಡೆದ ನಾಡಗೀತೆ, ಸುಗಮ ಸಂಗೀತ ಶತಮಾನೋತ್ಸವ ಸಂಭ್ರಮದಲ್ಲಿ ಮಕ್ಕಳೊಂದಿಗೆ ನಾಡಗೀತೆ, ಸುಗಮ ಸಂಗೀತ ಗೀತೆಗಳನ್ನು ಹಾಡುತ್ತ ಮಾತನಾಡಿದರು.
ಹಳ್ಳಿಗಾಡಿನ ಮಕ್ಕಳಲ್ಲಿ ಪ್ರತಿಭೆ, ಕಲಿಯುವ ಕಸುವು ಇದೆ. ಇದನ್ನು ಎಕ್ಕಿ ತೆಗೆಯುವ ಕೆಲಸ ಮೊದಲು ಆಗಬೇಕಿದೆ. ನಾಡಗೀತೆ, ಸುಗಮ ಸಂಗೀತಕ್ಕೆ ನೂರು ವರ್ಷ ತುಂಬಿದೆ. ಈ ಸವಿನೆನಪಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಗಟ್ಟಿಗೊಳಿಸಲು ವಿನೂತನ ಅಭಿಯಾನ ಆರಂಭಿಸಲಾಗಿದೆ ಎಂದರು.ಮಕ್ಕಳಲ್ಲಿ ಕನ್ನಡತನ, ಭಾಷೆ ವಿಸ್ತಾರತೆ ಅರಿತರೆ ಮಾತ್ರ ಕನ್ನಡ ಶಾಲೆ, ಸರ್ಕಾರಿ ಶಾಲೆ ಉಳಿಯಲಿದೆ. ನಾಡಗೀತೆ, ಕನ್ನಡ ಗೀತೆಗಳನ್ನು ರಾಗ, ಸ್ಪಷ್ಟ ಉಚ್ಛಾರಣೆಯೊಂದಿಗೆ ಮಕ್ಕಳು ಹಾಡಲು ರಾಜ್ಯಾದ್ಯಂತ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದರು.
ಈ ವೇಳೆ ಸಂಚಾಲಕ ಎಂ.ಎನ್. ಸುಬ್ರಹ್ಮಣ್ಯ, ವಕೀಲ ಎಂ.ಆರ್.ರಾಜೇಶ್, ಪರಿಸರ ಪ್ರೇಮಿ ಊಗಿನಹಳ್ಳಿ ವೆಂಕಟೇಶ್, ಕಲಾವಿದಅಭಿಷೇಕ್, ಪ್ರಾಂಶುಪಾಲೆ ಶಾಂತಿ, ಮುಖ್ಯ ಶಿಕ್ಷಕರಾದ ದೇವರಾಜು, ಜ್ಯೋತಿ, ಶಿಕ್ಷಕರಾದ ಪ್ರಕಾಶ್, ರಾಘವೇಂದ್ರ, ಜಗದೀಶ್, ಮಂಗಳಾ, ಲೀಲಾವತಿ, ಸೌಮ್ಯ, ವೀಣಾ, ಜಯಲಕ್ಷ್ಮೀ, ಪಲ್ಲವಿ, ಭೂಮಿಕಾ ಇದ್ದರು.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಸೋಮನಹಳ್ಳಿ ಹೊರವಲಯದ ಕಾಫಿ ಡೇ ಆವರಣದಲ್ಲಿ ದಿ.ಎಸ್.ಎಂ.ಕೃಷ್ಣರ ಸಮಾಧಿಗೆ ಸಂಸ್ಥೆ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಹಾಗೂ ಶಿಕ್ಷಕ ವೃಂದದವರು ಸಮಾಧಿಗೆ ಪುಷ್ಪಾರ್ಚನೆ ಮಾಡಿ ವಿಶೇಷ ಪೂಜೆಯೊಂದಿಗೆ ನಮನ ಸಲ್ಲಿಸಿದರು.
ಈ ವೇಳೆ ಚನ್ನೇಗೌಡ ವಿದ್ಯಾಸಂಸ್ಥೆ ಯು.ಎಸ್.ರವಿ, ಕೆ.ಎನ್.ವರದರಾಜು, ಕೃಷ್ಣ. ಎಂ.ಟಿ.ಚಂದ್ರಶೇಖರ್, ಎಚ್.ಬಿ.ಮಹೇಶ್, ಡಾ.ಎಸ್.ಪಿ.ಕಿರಣ್, ಜಿ.ಸುರೇಂದ್ರ, ಸತ್ಯ ಪ್ರೇಮ, ಚೇತನ ಮತ್ತಿತರರು ಭಾಗವಹಿಸಿದ್ದರು.