ಕನ್ನಡಪ್ರಭ ವಾರ್ತೆ ಆಲಮೇಲ
ಕನ್ನಡ ಭಾಷೆ, ನೆಲ, ಜಲದ ವಿಚಾರಗಳು ಆತ್ಮ ಗೌರವದ ಪ್ರತೀಕಗಳು. ಅವುಗಳ ಮೇಲೆ ಅನ್ಯರ ದಾಳಿಯನ್ನು ಸಹಿಸುವುದಿಲ್ಲ ಎಂದು ಮೋರಟಗಿ ಕಲ್ಪವೃಕ್ಷ ಮಹಾವಿದ್ಯಾಲಯದ ಪ್ರೊ ಸಿ.ಎಸ್.ಆನಂದ ಹೇಳಿದರು.ಪಟ್ಟಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ೭೦ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕನ್ನಡದ ಗೌರವವನ್ನು ಸದಾ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಕನ್ನಡದ ಗತವೈಭವವನ್ನು ಕಾಣಬೇಕಿದೆ ಎಂದರು.
ಪಪಂ ಅಧ್ಯಕ್ಷ ಸಾಧಿಕ ಸುಂಬಡ ಕಾರ್ಯಕ್ರಮವನ್ನು ಬೆಳಗಿಸಿ ಉದ್ಘಾಟಿಸಿದರು. ತಹಸೀಲ್ದಾರ ಎಸ್.ಎಸ್.ನಾಯಕಲಮಠ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ರಾಮು,ಜಿ ಅಗ್ನಿ, ಪಪಂ ಮುಖ್ಯಾಧಿಕಾರಿ ಸುರೇಶ ನಾಯಕ, ಎಸ್.ಐ ಅರವಿಂದ ಅಂಗಡಿ, ತಾಲೂಕ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಶೋಕ ಕೊಳಾರಿ, ತಾಲೂಕ ನೌಕರರ ಸಂಘದ ಅಧ್ಯಕ್ಷ ರವಿ ಬಿರಾದಾರ, ಎಪಿಎಮ್‌ಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ ವೇದಿಕೆಯಲ್ಲಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಶರಣ ಗುಂದಗಿ ಮಾತನಾಡಿದರು.ಸಾಧಕರಿಗೆ ಗೌರವ: ತಾಲೂಕು ಆಡಳಿತವು ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಹತ್ತು ಜನ ಸಾಧಕರನ್ನು ಸನ್ಮಾನಿಸಿತು. ಮಾಧ್ಯಮ
ಕ್ಷೇತ್ರದಿಂದ ದೇವಣಗಾಂವದ ಗುರು ಹಿರೇಮಠ ಸೇರಿ ಒಟ್ಟು ಹತ್ತು ಸಾಧಕರನ್ನು ಸನ್ಮಾನಿಸಲಾಯಿತು. ಕಸಾಪ ಗೌರವ ಕಾರ್ಯದರ್ಶಿ ಶ್ರೀಶೈಲ ಮಠಪತಿ ನಿರೂಪಿಸಿದರು. ಅಪ್ಪು ಶೆಟ್ಟಿ ವಂದಿಸಿದರು.ಭವ್ಯ ಮೆರವಣಿಗೆ: ನಾಡದೇವಿ ಭವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ಬೆಳಿಗ್ಗೆ ತಹಸೀಲ್ದಾರ್ ಕಚೇರಿಯಿಂದ ಪ್ರಾರಂಭವಾಗಿ, ಬಸ್ ನಿಲ್ದಾಣದ ಪಕ್ಕಕೆ ಇರುವ ಕನ್ನಡಾಂಬೆ ವೃತ್ತಕ್ಕೆ ತೆರಳಿ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ತಾಲೂಕಿನ ಎಲ್ಲ ಅಧಿಕಾರಿಗಳು ಹಾಗೂ ಗಣ್ಯರು ಧ್ವಜಾರೋಹಣ ನಡೆಸಿದರು.
ಕಂದಾಯ ಅಧಿಕಾರಿ ಎಮ್.ಎ.ಅವರಾದಿ, ಗ್ರಾಮ ಆಡಳಿತ ಅಧಿಕಾರಿ ವಿನೋದ ಬಿಸೆ, ಯಮನೂರ ಗೊಂದಳಿ, ಮಡಿವಾಳಪ್ಪ ಬಿರಾದಾರ, ತಹಸೀಲ್ದಾರಎಸ್.ಎಸ್.ನಾಯಕಲಮಠ, ಕಂದಾಯ ನಿರೀಕ್ಷಕ ಎ.ಎಂ.ಅತ್ತಾರ,ಮುಖಂಡರಾದ ರಮೇಶ ಬಂಟನೂರ, ಪ್ರಭು ವಾಲೀಕಾರ, ಬಸವರಾಜ ತೆಲ್ಲೂರ, ಅಂಬಾದಾಸ ಬಿಳಂಬಗಿ, ಗಂಗಪ್ಪ ಭೋವಿ, ಹಸನಸಾಬ ಮುಲ್ಲಾ, ಭಾಗಣ್ಣಾ ಗುರಕಾರ, ಕರವೇ ತಾಲೂಕು ಅಧ್ಯಕ್ಷ ಶಶಿಧರ ಗಣಿಹಾರ, ಬುಡ್ಡಾ ಕಣ್ಣಿ, ಮಾಲಾಲಿ ಕಮಲಾಪೂರ, ಆದಮ ಕಣ್ಣಿ, ಬಶೀರ ತಾಂಬೋಳಿ, ದಸ್ತಗೀರ ವಡಗೇರಿ ಹಾಗೂ ಪೊಲೀಸ ಸಿಬ್ಬಂದಿ ಇದ್ದರು.