ಹನೂರು : ಕನ್ನಡಪ್ರಭ ರೈತರತ್ನ ಪ್ರಶಸ್ತಿ ಪುರಸ್ಕೃತ ದಯಾನಂದ ಹೂಲದಲ್ಲಿ ಕೃಷಿ ಸಚಿವ ಚೆಲುವನಾರಾಯಣಸ್ವಾಮಿ ರಾಗಿ ಬಿತ್ತನೆ ಕಾರ್ಯ ನೆರವೇರಿಸುವ ಸ್ಥಳವನ್ನು ಬುಧವಾರ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಚಿಂಚಳ್ಳಿ ಗ್ರಾಮದ ಬಳಿಯಲ್ಲಿರುವ ಶುದ್ಧ ಫಾರಂನಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ರಾಗಿ ಬಿತ್ತನೆ ಕಾರ್ಯ ಹಾಗೂ ಡ್ರೋನ್ ಮೂಲಕ ನ್ಯಾನೋ ಯುರಿಯಾ ಸಿಪಂಡಣೆ ಮಾಡಲು ಶುದ್ಧ ಫಾರಂಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಗುರುಪ್ರಸಾದ್ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಇನ್ಸ್‌ಪೆಕ್ಟರ್ ಪಿ. ಅನಂತ್ ಕುಮಾರ್ ಭೇಟಿ ನೀಡಿ ಕಾರ್ಯಕ್ರಮ ನಡೆಯುವ ಸ್ಥಳ ಪರಿಶೀಲನೆ ನಡೆಸಿ ಸಿದ್ಧತೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.ಸಕಲ ಸಿದ್ಧತೆ:
ಸಚಿವ ಚೆಲುವನಾರಾಯಣಸ್ವಾಮಿ ಶುದ್ಧಫಾರಂನಲ್ಲಿ ರಾಗಿ ಬಿತ್ತನೆ ಮಾಡುವ ಸ್ಥಳವನ್ನು ಹದಗೊಳಿಸಿದ್ದು ಶುದ್ಧ ಫಾರಂನಲ್ಲಿ ಗುರುವಾರ ನಡೆಯುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಯು ನಡೆಯುತ್ತಿದೆ. ಇದೇ ವೇಳೆಯಲ್ಲಿ ತಹಸೀಲ್ದಾರ್ ಗುರುಪ್ರಸಾದ್ ಭೇಟಿ ನೀಡಿ ಸಚಿವರು ಬಂದಾಗ ಯಾವುದೇ ಲೋಪದೋಷಗಳು ಉಂಟಾಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಿಗಿ ಭದ್ರತೆ:
ಶುದ್ಧಫಾರಂನಲ್ಲಿ ರಾಗಿ ಬಿತ್ತನೆ ಮಾಡಿ ಸಚಿವ ಚೆಲುವನಾರಾಯಣಸ್ವಾಮಿ ರೈತರ ಕುಂದು ಕೊರತೆಗಳ ಬಗ್ಗೆ ಸಭೆಯಲ್ಲಿ ಭಾಗವಹಿಸುವ ರೈತರಿಗೆ ಕೃಷಿ ಸಂಬಂಧಿತ ಮಾಹಿತಿ ಮತ್ತು ಅದಕ್ಕೆ ರೈತರಿಗೆ ಸಲಹೆ ಸೂಚನೆಗಳು ನೀಡುವ ಮೂಲಕ ಕಾರ್ಯಕ್ರಮ ನಡೆಯುತ್ತಿರುವುದರಿಂದ ಹನೂರು ತಾಲೂಕಿನ ವಿವಿಧ ರೈತ ಸಂಘಟನೆಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಜೊತೆಗೆ ಸಾರ್ವಜನಿಕರು ಸಹ ಕಾರ್ಯಕ್ರಮದಲ್ಲಿ ಬರುವುದರಿಂದ ಹೆಚ್ಚಿನ ಭದ್ರತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮವಿಸ ಬೇಕು ಎಂದು ತಿಳಿಸಿದರು.ಸ್ಥಳ ಪರಿಶೀಲನೆ:
ಸಚಿವರು ರಾಗಿ ಬಿತ್ತನೆ ಮಾಡುವ ಸ್ಥಳ ಹಾಗೂ ಕಾರ್ಯಕ್ರಮದ ಸ್ಥಳ ಮತ್ತು ಶುದ್ಧ ಫಾರಂನಲ್ಲಿ ಕನ್ನಡಪ್ರಭ ರೈತರತ್ನ ವಿಜೇತ ದಯಾನಂದ್ ಅವರ ಜೊತೆ ಸಮಗ್ರ ಕೃಷಿ ಬಗ್ಗೆ ವಿವರ ಪಡೆಯಲಿದ್ದಾರೆ. ಸ್ಥಳಗಳನ್ನು ಸಹ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದರು.ಇದೇ ವೇಳೆಯಲ್ಲಿ ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ಚಾಮರಾಜನಗರ ಜಂಟಿ ಕೃಷಿ ನಿರ್ದೇಶಕ ಅಬೀದ್ ಸಹಾಯಕ ಕೃಷಿ ನಿರ್ದೇಶಕ ನಿಶಾಂತ್, ಕೊಳ್ಳೇಗಾಲ ಸಹಾಯಕ ಕೃಷಿ ಅಧಿಕಾರಿ ರಂಗಸ್ವಾಮಿ, ಕೃಷಿ ತಾಂತ್ರಿಕ ಅಧಿಕಾರಿ ಮನೋಹರ್, ಹನೂರು ಪಟ್ಟಣದ ಕೃಷಿ ಅಧಿಕಾರಿ ನಾಗೇಂದ್ರ, ಇನ್ಸ್ಪೆಕ್ಟರ್ ಪಿ ಅನಂತ್ ಕುಮಾರ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ , ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಶೇಷಣ್ಣ ಇದ್ದರು