ಹೀಗೆ ಬನ್ನಿ ...ನ್ಯಾಯಾಲಯ ಇಲ್ಲಿದೆ....!

KannadaprabhaNewsNetwork |  
Published : Dec 31, 2024, 01:00 AM IST
38 | Kannada Prabha

ಸಾರಾಂಶ

ಚಾಮರಾಪುರಂ ನ ಕೃಷ್ಣರಾಜ ಬೂಲ್ ವಾರ್ಡ್ ರಸ್ತೆಯಲ್ಲಿ ನ್ಯಾಯಾಲಯಗಳ ಪಾರಂಪರಿಕ ಕಟ್ಟಡ ವಿದೆ.

ನ್ನಡಪ್ರಭ ವಾರ್ತೆ ಮೈಸೂರುಮೈಸೂರಿನಲ್ಲಿ ಒಟ್ಟು 43 ನ್ಯಾಯಾಲಯಗಳಿವೆ.ಯಾವ ಯಾವ ನ್ಯಾಯಾಲಯಗಳು ಎಲ್ಲೆಲ್ಲಿವೆ ಎಂಬ ಮಾಹಿತಿ ಇರದೆ ಸಾರ್ವಜನಿಕರು ಪರದಾಡುತ್ತಿರುವ ವಿಚಾರವಾಗಿ ಕನ್ನಡಪ್ರಭದಲ್ಲಿ ವರದಿಯಾಗಿತ್ತು. ಇದರ ಪರಿಣಾಮವಾಗಿ ಮೈಸೂರಿನ ಚಾಮರಾಜಪುರಂ ಕೃಷ್ಣರಾಜ ಬೂಲ್ ವಾರ್ಡ್ ಬಳಿ ಇರುವ ಪಾರಂಪರಿಕ ನ್ಯಾಯಾಲಯಗಳ ಪ್ರವೇಶ ದ್ವಾರದ ಬಳಿ ಯಾವ ನ್ಯಾಯಾಲಯ ಎಲ್ಲಿದೆ ಎಂಬ ವಿವರ ಉಳ್ಳ ಫಲಕವನ್ನು ಈಗ ಅನಾವರಣಗೊಳಿಸಲಾಗಿದೆ.ಚಾಮರಾಪುರಂ ನ ಕೃಷ್ಣರಾಜ ಬೂಲ್ ವಾರ್ಡ್ ರಸ್ತೆಯಲ್ಲಿ ನ್ಯಾಯಾಲಯಗಳ ಪಾರಂಪರಿಕ ಕಟ್ಟಡ ವಿದೆ. ಈ ಪಾರಂಪರಿಕ ನ್ಯಾಯಾಲಯಗಳ ಆವರಣದಲ್ಲಿ ಒಟ್ಟು 23 ನ್ಯಾಯಾಲಯಗಳಿವೆ.ಅವುಗಳೆಂದರೆ...ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳು(8), ಪೋಕ್ಸೋ ವಿಶೇಷ ನ್ಯಾಯಾಲಯ (1), ಲಘು ವ್ಯವಹಾರಗಳ ನ್ಯಾಯಾಲಯಗಳು(2), ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ(11), (ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವೂ ಸೇರಿದಂತೆ ಒಂದನೇ ಹೆಚ್ಚುವರಿಯಿಂದ 10ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಗಳು), ಕಾರ್ಮಿಕ ನ್ಯಾಯಾಲಯ (1).ಜಯನಗರದ ಮಳಲವಾಡಿಯಲ್ಲಿ ನಿರ್ಮಾಣವಾಗಿರುವ ನೂತನ ನ್ಯಾಯಾಲಯಗಳ ಸಂಕೀರ್ಣದಲ್ಲಿ ಒಟ್ಟು 20 ನ್ಯಾಯಾಲಯಗಳಿವೆ.ಅವುಗಳೆಂದರೆ...ಕೌಟುಂಬಿಕ ನ್ಯಾಯಾಲಯ(4), ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯ(4), ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ(4), ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ(3)(11 ರಿಂದ 13ನೇ ಹೆಚ್ಚುವರಿ ಸಿವಿಲ್ ಜಡ್ಜ್ ನ್ಯಾಯಾಲಯ), ಜೆ.ಎಂ.ಎಫ್.ಸಿ 2ನೇ ನ್ಯಾಯಲಯ(1), ಜೆ.ಎಂ.ಎಫ್.ಸಿ 3ನೇ ನ್ಯಾಯಾಲಯ (1), ಜೆ.ಎಂ.ಎಫ್.ಸಿ 4ನೇ ನ್ಯಾಯಾಲಯ(1), ಜೆ.ಎಂ.ಎಫ್.ಸಿ 5ನೇ ನ್ಯಾಯಾಲಯ(1), ಔದ್ಯಮಿಕ ನ್ಯಾಯಾಧೀಕರಣ (1),-----------------ಕೋಟ್ಫಲಕದಲ್ಲಿ ಯಾವ ನ್ಯಾಯಾಲಯ ಎಲ್ಲಿದೆ ಎಂಬ ವಿವರದೊಂದಿಗೆ ಕ್ಯೂ ಆರ್ ಕೋಡ್ ಕೂಡಾ ನೀಡಿರುವುದರಿಂದ ನ್ಯಾಯಾಲಯವನ್ನು ಅರಸಿಕೊಂಡು ಬರುವ ಸಾರ್ವಜನಿಕರು, ಪೊಲೀಸರು, ವಕೀಲರು ಹಾಗೂ ಅಧಿಕಾರಿಗಳಿಗೆ ಅನುಕೂಲವಾಗಿದೆ.- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ