ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಜಾಗೃತಿ: ಕೆ.ಎಸ್.ಆನಂದ್

KannadaprabhaNewsNetwork | Updated : Sep 23 2024, 01:28 AM IST

ಸಾರಾಂಶ

ಕಡೂರು, ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರ ರಥಯಾತ್ರೆ ಮೂಲಕ ರಾಜ್ಯಾದ್ಯಂತ 50ನೇ ಕನ್ನಡ ರಾಜ್ಯೋತ್ಸವದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕಡೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕನ್ನಡ ರಥ ಯಾತ್ರೆಗೆ ಪುಷ್ಪಾರ್ಚನೆ

ಕನ್ನಡಪ್ರಭ ವಾರ್ತೆ, ಕಡೂರು

ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರ ರಥಯಾತ್ರೆ ಮೂಲಕ ರಾಜ್ಯಾದ್ಯಂತ 50ನೇ ಕನ್ನಡ ರಾಜ್ಯೋತ್ಸವದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕಡೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜನಪ್ರತಿನಿಧಿಗಳು, ಕನ್ನಡಾಭಿಮಾನಿಗಳು, ಸಾಹಿತಿಗಳೊಂದಿಗೆ ಕನ್ನಡ ರಥ ಯಾತ್ರೆ ಬರಮಾಡಿಕೊಂಡು ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಸ್ವತಂತ್ರ ಪೂರ್ವದಲ್ಲಿ ಕರ್ನಾಟಕ ಏಕೀಕರಣ ಆಗಬೇಕೆಂಬ ನಿಟ್ಟಲ್ಲಿ ಆಲೂರು ವೆಂಕಟರಾವ್ ಸೇರಿದಂತೆ ಅನೇಕರ ಹೋರಾಟದಿಂದ 1906 ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಗೆ ಚಾಲನೆ ದೊರಕಿತು. 1950ರಲ್ಲಿ ಭಾರತ ಗಣರಾಜ್ಯವಾದಾಗ ಭಾಷೆ ಮತ್ತು ಸಂಸ್ಕೃತಿ ಭಿನ್ನತೆಯ ಆಧಾರದಲ್ಲಿ ಪ್ರಾದೇಶಿಕ ರಾಜ್ಯಗಳ ಉಗಮವಾದವು. 1956 ರಲ್ಲಿ ನವೆಂಬರ್ 1 ಮೈಸೂರು ರಾಜ್ಯ ರಚನೆಯಾಯಿತು ಎಂದರು.

ಕರ್ನಾಟಕ ನಾಮಕರಣದ ಕೂಗು ಹೆಚ್ಚಾದಾಗ ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸ್ ಕುವೆಂಪು, ಕಾರಂತರು ಸೇರಿದಂತೆ ಕರ್ನಾಟಕದ ಎಲ್ಲ ಪ್ರದೇಶಗಳಿಗೆ ಭೇಟಿ ನೀಡಿ ಅಭಿಪ್ರಾಯ ಪಡೆವ ಮೂಲಕ 1973ರ ನವಂಬರ್ 1ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು.

50ರ ಸಂಭ್ರಮದ ಆಚರಣೆ ಮಹತ್ವ ತಿಳಿಸುವ ನಿಟ್ಟಿನಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಈ ರಥಯಾತ್ರೆ ಮೂಲಕ ಕನ್ನಡದ ಅಭಿಮಾನ ಮೂಡಿಸುವ ಮತ್ತು ಭಾಷೆಗೆ ಶಕ್ತಿ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ.

ಕನ್ನಡಿಗರ ಹೋರಾಟದಿಂದ ಇಂದು ಕನ್ನಡದಲ್ಲಿ ಐಎಎಸ್ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಇನ್ನು ನಮ್ಮ ಮಕ್ಕಳಿಗೆ ಕನ್ನಡದ ಅಭಿಮಾನ ಮೂಡಿಸುವ ಕೆಲಸ ಮಾಡೋಣ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ರಥಯಾತ್ರೆ ಮೂಲಕ ಕನ್ನಡಕ್ಕೆ ಶಕ್ತಿ ತುಂಬ ಕೆಲಸ ಆಗಿದೆ ಕನ್ನಡದ ಭಾಷೆಗೆ ನೆಲಕ್ಕೆ ಸಂಸ್ಕೃತಿಗೆ ಧಕ್ಕೆ ಬಂದಲ್ಲಿ ಪ್ರತಿಯೊಬ್ಬ ಕನ್ನಡಿಗನು ಬೀದಿಗಿಳಿದು ಹೋರಾಟ ಮಾಡಬೇಕು. ಗೋಕಾಕ್ ಚಳುವಳಿ ಹೋರಾಟದ ನೇತೃತ್ವದ ಶಕ್ತಿ ಡಾ. ರಾಜಕುಮಾರ್ ಕನ್ನಡಿಗರ ಮನಸಿನಲ್ಲಿ ನೆಲೆಸಿದ್ದಾರೆ. ಕನ್ನಡ ಭಾಷೆ ಮತ್ತು ಸಂಸ್ಕೃತಿ, ಪರಂಪರೆ ರಕ್ಷಿಸಬೇಕಾದ ಜವಾಬ್ದಾರಿ ಕನ್ನಡಿಗರೆಲ್ಲರ ಮೇಲಿದೆ. ಈ ರಥಯಾತ್ರೆ ನಾಡಿನ ಉದ್ದಗಲಕ್ಕೂ ಸಂಚರಿಸುವ ಮುಖಾಂತರ ಜಾಗೃತಿ ಮೂಡಿಸುತ್ತಿದೆ ಎಂದರು. .

ತಹಸೀಲ್ದಾರ್ ಸಿ.ಆರ್.ಪೂರ್ಣಿಮಾ, ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು ಮುಖ್ಯಾಧಿಕಾರಿ ಮಂಜುನಾಥ್, ಬಿಇಒ ಸಿದ್ದರಾಜ ನಾಯ್ಕ,ಪುರಸಭೆ ಸದಸ್ಯರಾದ ಈರಳ್ಳಿ ರಮೇಶ್, ಯಾಸೀನ್, ಮರುಗುದ್ದಿ ಮನು, ಸುಧಾ ಉಮೇಶ್ ಸೂರಿ ಶ್ರೀನಿವಾಸ್, ಸಿಂಗಟಗೆರೆ ಸಿದ್ದಪ್ಪ, ನಿಂಗಪ್ಪಮತ್ತಿತರರು ಇದ್ದರು.22ಕೆಕೆಡಿಯು2.

ಕಡೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜನಪ್ರತಿನಿಧಿಗಳು, ಕನ್ನಡಾಭಿಮಾನಿಗಳು, ಸಾಹಿತಿಗಳು ಕನ್ನಡ ರಥ ಯಾತ್ರೆ ಬರಮಾಡಿಕೊಂಡರು.

Share this article