ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕನ್ನಡ ಭಾಷೆ, ನಾಡು, ಸಂಸ್ಕೃತಿಯ ಬಗ್ಗೆ ನವೆಂಬರ್ ೧ರಂದು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗದೇ ನಮ್ಮೆಲ್ಲರ ಹೃದಯದ ಹಬ್ಬವಾಗಬೇಕು. ಧ್ವಜಾರೋಹಣ ಮತ್ತು ಸಾಂಸ್ಕೃತಿಕ ನಡೆಸಿ ತೆಪ್ಪಗಿರದೇ ಕನ್ನಡ ನಮ್ಮ ಉಸಿರು, ನಮ್ಮ ಗುರುತು ಎಂದು ಘೋಷಣೆಯಾಗದೇ ಕನ್ನಡವೇ ನಮ್ಮ ಜೀವನದ ಧ್ಯೇಯವಾಗಬೇಕೆಂದು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಬೆನ್ನೂರ ಹೇಳಿದರು.ಬನಹಟ್ಟಿಯ ಜನತಾ ಶಿಕ್ಷಣ ಸಂಘದ ಶ್ರೀತಮ್ಮಣ್ಣಪ್ಪ ಚಿಕ್ಕೋಡಿ ಕಲಾ, ವಾಣಿಜ್ಯ, ಬಿಬಿಎ, ಬಿಸಿಎ ಮತ್ತು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು, ಸಿಬ್ಬಂದಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ನಮ್ಮ ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರಗಳಲ್ಲಿ ಕನ್ನಡವೇ ಅಡಗಿದೆ. ವೀರ ನಾಡಿನ ಸಂಜಾತರಾದ ನಾವೆಲ್ಲರೂ ಕನ್ನಡ ಬಳಸಿ ಬದುಕುವ, ಕೆಲಸ ಮಾಡುವ, ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಬೇಕಿದೆ ಎಂದರು. ಅತಿಥಿಯಾಗಿ ಆಗಮಿಸಿದ ನಿರ್ದೇಶಕ ಪಂಡಿತ ಹನಗಂಡಿ ಮಾತನಾಡಿ, ನಾಡು-ನುಡಿ, ಕನ್ನಡ ಸಂಸ್ಕೃತಿ ಮರೆತರೆ ನಮ್ಮ ಮೂಲತ್ವಕ್ಕೇ ಧಕ್ಕೆಯಾಗಿ ಕನ್ನಡತನ ಸಂಪೂರ್ಣ ನಶಿಸುತ್ತದೆ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಸುರೇಶ ನಿಡೋಣಿ, ನಾಡು-ನುಡಿ, ಜಲ, ಸಂಸ್ಕೃತಿ, ಸಂಸ್ಕಾರ ಹಾಗೂ ಕನ್ನಡದ ಪ್ರಾಚೀನತೆಯ ಬಗ್ಗೆ ವಿವರಿಸಿದರು. ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ಅಧ್ಯಕ್ಷತೆ ವಹಿಸಿದ್ದರು.ಡಾ.ಮನೋಹರ ಶಿರಹಟ್ಟಿ ಸ್ವಾಗತಿಸಿದರು. ವಿ.ವೈ.ಪಾಟೀಲ ವಂದಿಸಿದರು. ಸಮಾರಂಭದಲ್ಲಿ ಡಾ.ರೇಷ್ಮಾ ಗಜಾಕೋಶ, ಡಾ.ಬಿ.ಆರ್.ಕೆಂಗನಾಳ, ಡಾ.ಎಸ್.ಕೆ.ವರದಾಯಿ, ಜಿ.ಎಸ್.ಪಾಟೀಲ, ರಮೇಶ ಮಾಗೂರಿ, ವೆಂಕಟೇಶ ಕುಲಕರ್ಣಿ, ರತ್ನ ಪಾಟೀಲ, ಚೇತನ ಮೂಳೆಗಾಂವಿ, ಎಸ್.ಎಸ್.ಶಿಂಧೆ, ಶ್ವೇತಾ ಮಠದ, ಬಸವರಾಜ ತಳವಾರ, ಐ.ಜಿ.ಫಣಿಬಂಧ, ಶಿವು ಇಟ್ನಾಳ ಸೇರಿದಂತೆ ಎಲ್ಲ ವಿಭಾಗಗಳ ವಿದ್ಯಾರ್ಥಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.ಪದ್ಮಾವತಿ ಶಾಲೆಯಲ್ಲಿ ನಾಡದೇವಿಗೆ ಪೂಜೆ:
ರಬಕವಿ-ಹೊಸೂರಿನ ಪದ್ಮಾವತಿ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ೭೦ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಕಸಾಪ ಅಧ್ಯಕ್ಷ ಮ.ಕೃ.ಮೇಗಾಡಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಕನ್ನಡ ಭಾಷೆಯ ಇತಿಹಾಸ, ಸಂಸ್ಕೃತಿ, ಪರಂಪರೆ, ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಳ ಬಗ್ಗೆ ವಿವರಿಸಿದರು. ಆಡಳಿತಾಧಿಕಾರಿ ಭಾರತಿ ತಾಳಿಕೋಟಿ, ಪ್ರಾಚಾರ್ಯರಾದ ಶ್ರೀಶೈಲ ಕುಂಬಾರ, ಬಸವರಾಜ ಕಲಾದಗಿ, ಸತೀಶ ಬೆಳಗಲಿ ವೇದಿಕೆಯಲ್ಲಿದ್ದು ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಭಾಷಣ, ನೃತ್ಯ, ರಾಜ್ಯದ ಜಿಲ್ಲಾವಾರು ವೇಷಭೂಷಣವನ್ನು ಏರ್ಪಡಿಸಲಾಗಿತ್ತು. ಶಿವಾನಂದ ಕಾಮಶೆಟ್ಟಿ ಸ್ವಾಗತಿಸಿದರು. ಶಾಖಾಂಬರಿ ಜುಂಜಪ್ಪನವರ ನಿರೂಪಿಸಿದರು. ಸಿದ್ದಮ್ಮ ನಿಂಬರಗಿ ವಂದಿಸಿದರು.ತಾಲೂಕು ಆಡಳಿತದಿಂದ ರಾಜ್ಯೋತ್ಸವ:ರಬಕವಿ-ಬನಹಟ್ಟಿ ತಾಲೂಕು ಆಡಳಿತದಿಂದ ಬನಹಟ್ಟಿ ಎಸ್‌ಆರ್‌ಎ ಮೈದಾನದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ತಹಸೀಲ್ದಾರ್ ಗಿರೀಶ ಸ್ವಾದಿ ಧ್ವಜಾರೋಹಣ ನೆರವೇರಿಸಿದರು. ಶಾಸಕ ಸಿದ್ದು ಸವದಿ ನಾಡು-ನುಡಿ ಮತ್ತು ಸಂಸ್ಕೃತಿ ಉಳಿವಿಗಾಗಿ ನಾವೆಲ್ಲರೂ ಒಂದೇ ಸೂತ್ರದಡಿ ಕೈಜೋಡಿಸಬೇಕಿದೆ ಎಂದರು. ತಾಪಂ ಇಒ ಸಿದ್ದಪ್ಪ ಪಟ್ಟಿಹಾಳ, ನಗರಾಧ್ಯಕ್ಷೆ ವಿದ್ಯಾ ದಬಾಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಾನಪ್ಪ ಹುಲಜತ್ತಿ, ಸಿಪಿಐ ಡಿ.ಆರ್.ಪಾಟೀಲ, ಪಿಎಸ್‌ಐ ಶಾಂತಾ ಹಳ್ಳಿ, ಬಸವರಾಜ ಹನಗಂಡಿ, ಪ್ರಶಾಂತ ಹೊಸಮನಿ, ಜಿ.ಆರ್.ನಾವಿ, ಎಂ.ಎಸ್.ಗಡೆಣ್ಣವರ, ರತ್ನಾ ಜಳಕಿ, ಪ್ರೀತಿ ಆಲಗೂರ ಸೇರಿದಂತೆ ಪ್ರಮುಖರಿದ್ದರು.ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯೋತ್ಸವ:ರಬಕವಿ-ರಾಮಪುರದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳ, ಕಾಲೇಜು ವಿದ್ಯಾರ್ಥಿ ಸಮೂಹದೊಡನೆ ರಾಜ್ಯೋತ್ಸವ ಆಚರಿಸಲಾಯಿತು. ಚೇರಮನ್ ಸಿದ್ದಪ್ಪ ಮೇಣಿ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಾರ್ಯದರ್ಶಿ ಶಕೀಲ ನದಾಫ್, ರಾಮಣ್ಣ ಸಿಂಗನ್, ಪ್ರಾಚಾರ್ಯ ಎ.ಕೆ.ಕಾಡದೇವರ, ಎಂ.ಆರ್.ಮುಲ್ಲಾ, ಬಾಗಲಕೋಟ ಸೇರಿದಂತೆ ಎಲ್ಲ ವಿಭಾಗಗಳ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.