ಕನ್ನಡಪ್ರಭ ವಾರ್ತೆ ಮಂಡ್ಯ
ದುಬೈ ಕರ್ನಾಟಕ ಸಂಘದ ವತಿಯಿಂದ ದುಬೈನಲ್ಲಿ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಿತು.ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಪೀಠಾಧಿಪತಿ ಶ್ರೀತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ದುಬೈನಂತಹ ರಾಷ್ಟ್ರದಲ್ಲಿ ಕನ್ನಡ ಪಸರಿಸುತ್ತಿರುವ ಇಲ್ಲಿನ ಕನ್ನಡಿಗರ ಕಾರ್ಯ ಶ್ಲಾಘನೀಯ. ತಮ್ಮತನವನ್ನು ಬಿಟ್ಟುಕೊಡದೆ ಈ ದೇಶದಲ್ಲೂ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡ ತಾಯಿಯನ್ನು ಮೆರೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮಾದಾರ ಲಿಂಗಯ್ಯನ ಹುಂಡಿ ಶ್ರೀ ಬೆಟ್ಟದ ಮಠದ ಶ್ರೀಗೌರಿಶಂಕರ ಸ್ವಾಮೀಜಿ, ಕುಣಿಗಲ್‌ನ ಶ್ರೀಅರೆಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ, ಬೆಳ್ಳಾವಿಯ ಶ್ರೀಕಾರದ ವೀರಬಸವ ಮಹಾ ಸ್ವಾಮೀಜಿ, ಎಲೆರಾಂಪುರದ ಶ್ರೀಕುಂಚಿಟಿಗರ ಮಹಾಸಂಸ್ಥಾನ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ, ಸರಗೂರಿನ ಶ್ರೀಹೊಸಮಠದ ಶ್ರೀಬಸವರಾಜೇಂದ್ರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಉದ್ಯಮಿ ಪರ್ವ ಗ್ರೂಪ್‌ನ ಸಂಸ್ಥಾಪಕ ನೀಲೇಶ್, ವೈಸ್ ಛೇರ್ಮನ್ ಶಶಿಧರ್ ನಾಗಪ್ಪ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.ಹಿರಿಯ ಚಿತ್ರನಟಿ ಜಯಮಾಲಾ, ನಟ ಡಾಲಿ ಧನಂಜಯ ಸೇರಿದಂತೆ ಹಲವಾರು ಮುಖಂಡರು ಸಾವಿರಾರು ಕನ್ನಡಿಗರು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರತಿಯೊಬ್ಬರು ಕಣ್ಣನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು: ವೆಂಕಟೇಶ್ಕನ್ನಡಪ್ರಭ ವಾರ್ತೆ ಪಾಂಡವಪುರ
ಪ್ರತಿಯೊಬ್ಬ ಮನುಷ್ಯನಿಗೂ ಮುಖ್ಯವಾಗಿರುವ ಕಣ್ಣನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಕೆ.ವೆಂಕಟೇಶ್ ಹೇಳಿದರು.ತಾಲೂಕಿನ ಹರವು ಗ್ರಾಮದ ಸಂಘದ ಆವರಣದಲ್ಲಿ ಮೈಸೂರಿನ ವಾಸನ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಕಣ್ಣಿಲ್ಲದಿದ್ದರೆ ಇಡೀ ಜಗತ್ತೇ ಕತ್ತಲಾಗಿರುತ್ತದೆ. ಹೀಗಾಗಿ ಮುಖ್ಯವಾದ ಅಂಗ ಕಣ್ಣಿನ ರಕ್ಷಣೆ ಮಾಡಿಕೊಳ್ಳುವುದು ಅತ್ಯವಶ್ಯಕ ಎಂದರು.
ಈ ವೇಳೆ ಸಂಘದ ಉಪಾಧ್ಯಕ್ಷ ಎಚ್.ಸಿ.ಪುನೀತ್ ರಾಜ್, ನಿರ್ದೇಶಕರಾದ ಎಚ್.ವಿ.ಗೋವಿಂದರಾಜು, ಆರ್.ಮಧುಸೂದನ್, ಬಿ.ವಿ.ಕಿಶೋರ್, ಎಚ್.ಎಸ್.ಮಧು, ಎಚ್.ವಿ.ನವೀನ್ ಕುಮಾರ್, ರೇಣುಕಮ್ಮ, ಎಸ್.ಆರ್.ಶೃತಿ, ಎಚ್.ಬಿ.ಅರುಣ್, ಎಂ.ಜ್ಯೋತಿ, ಎಚ್.ಎನ್.ನಿಂಗರಾಜು, ಕಾರ್ಯದರ್ಶಿ ಎಚ್.ಆರ್.ಸುನೀತಾ, ಸಿಬ್ಬಂದಿ ವರ್ಗದರಾದ ಎಚ್.ಎಸ್.ನಳಿನಾ, ಲಕ್ಷ್ಮಿ, ಪ್ರಸನ್ನ, ಜಯರಾಂ, ವಾಸನ್ ಕಣ್ಣಿನ ಆಸ್ಪತ್ರೆಯ ನೇತ್ರಾಧಿಕಾರಿಗಳಾದ ಪೃಥ್ವಿರಾಜ್, ತೀರ್ಥ, ಮ್ಯಾನೇಜರ್ ವಿಶ್ವನಾಥರೆಡ್ಡಿ, ಸಂಯೋಜಕ ಎ.ಎಂ.ಮಹೇಶ್ ಸೇರಿದಂತೆ ಇತರರಿದ್ದರು.