ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಪುರಸಭೆ ಮುಂಭಾಗದ ಬಂಡಿಸಿದ್ದೇಗೌಡ ವೃತ್ತದಲ್ಲಿ ಶ್ರೀಪಂಚಮುಖಿ ವಿನಾಯಕ ಗೂಡ್ಸ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಹಮ್ಮಿಕೊಂಡಿದ್ದ 7ನೇ ವರ್ಷದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ತಮ್ಮ ನಿತ್ಯದ ಕಾಯಕದ ಜೊತೆಗೆ ಒಗ್ಗಟ್ಟಿನಿಂದ ರಾಜ್ಯೋತ್ಸವ ಆಚರಣೆಯಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸುವ ಮೂಲಕ ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಸಂಸ್ಕೃತಿಯ ಮೇಲಿನ ನಿಮ್ಮ ಸಾಮಾಜಿಕ ಕಾಳಜಿ ಎದ್ದು ಕಾಣುತ್ತಿದೆ ಎಂದು ಶ್ಲಾಘಿಸಿದರು.ಗೂಡ್ಸ್ ಆಟೋ ಚಾಲಕರುಗಳ ದುಡಿಮೆ ಕೇವಲ ನಿಮ್ಮ ಕುಟುಂಬದ ನಿರ್ವಹಣೆಗೆ ಮಾತ್ರ ಸೀಮಿತವಾಗದೆ ಸಮಾಜದ ಆರ್ಥಿಕ ಚಟುವಟಿಕೆಗಳಿಗೂ ನಿಮ್ಮ ಶ್ರಮ ದೊಡ್ಡ ಕೊಡುಗೆ ನೀಡುತ್ತಿದೆ. ಬಿಸಿಲು-ಮಳೆ ಎನ್ನದೆ ದುಡಿಯುವ ನಿಮ್ಮ ಸೇವೆಯನ್ನು ಸಮಾಜ ಗುರುತಿಸಬೇಕು ಎಂದರು.
ಈ ವೇಳೆ ಪಂಚಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಂ.ಎಲ್.ದಿನೇಶ್, ಪುರಸಭಾ ಮಾಜಿ ಸದಸ್ಯ ಎಸ್.ಪ್ರಕಾಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರಜನಿಕಾಂತ್, ಮುಖಂಡ ಸುರೇಶ್, ಅಭಿಷೇಕ್, ರುಕ್ಮಾಂಗದ, ಗೂಡ್ಸ್ ಆಟೋ ಸಂಘದ ಅಧ್ಯಕ್ಷ ಎನ್.ಕಿರಣ್ ಕುಮಾರ್, ಉಪಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಆದರ್ಶ ಖಜಾಂಚಿ ಮನು, ಪದಾಧಿಕಾರಿಗಳಾದ ಬಾಬಣ್ಣ, ಸ್ವಾಮಿ, ಪರಮೇಶ್, ಹರೀಶ, ಆಟೋ ಮುಜೀಬ್ ಇತರರು ಉಪಸ್ಥಿತರಿದ್ದರು.