ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಕುವೆಂಪು ಬಡಾವಣೆಯಲ್ಲಿರುವ ಕೆ.ಎನ್.ಎ. ಮೈಲ್‌ಸ್ಟೋನ್ ಆಂಗ್ಲ ಮಾಧ್ಯಮ ಶಾಲೆಯ ಸಮೀಪದಿಂದ ಕನ್ನಡನಾಡಿನ ನೆಲಜಲ ರಕ್ಷಣೆಯ ಘೋಷಣಾ ಫಲಕ ಹಿಡಿದು ಮೆರವಣಿಗೆಯಲ್ಲಿ ಹೊರಟ ನೂರಾರು ವಿದ್ಯಾರ್ಥಿಗಳು ಕನಕ ಭವನ ವೃತ್ತ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತ, ಸುಭಾಷ್ ವೃತ್ತ ಸೇರಿದಂತೆ ಪ್ರಮುಖ ವೃತ್ತ ಹಾಗೂ ಬೀದಿಗಳಲ್ಲಿ ನೃತ್ಯ ಮಾಡುತ್ತಾ ಸಾಗಿ ಗಮನ ಸೆಳೆದರು. ದಾರಿ ಉದ್ದಕ್ಕೂ ಭಾರತ್ ಮಾತಾಕಿ ಜೈ, ಕನ್ನಡಾಂಭೆಗೆ ಜೈ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವ ಘೋಷಣೆ ಕೂಗಿ ಸಾರ್ವಜನಿಕರ ಗಮನ ಸೆಳೆದರು. ಸಂಸ್ಥೆಯ ಅಧ್ಯಕ್ಷ ಕೆ.ಎ.ವೆಂಕಟೇಶ್ ಬಾಬು, ಮೈ ಸ್ಟೋನ್ ಅಕಾಡೆಮಿಯ ಎಂ.ಬಿ. ಪ್ರಜ್ವಲ್, ಶೀತಲ್ ಪಿ. ರಮೇಶ್ ಪತ್ತಾರ್, ಸುಧಾಕರ್ ಮೆರವಣಿಗೆಯ ಮಾರ್ಗದರ್ಶಕರಾಗಿದ್ದರು.