ನವೆಂಬರ್ 3ನೇ ವಾರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

KannadaprabhaNewsNetwork |  
Published : Nov 08, 2025, 01:45 AM IST
6ಕೆಆರ್ ಎಂಎನ್ 6.ಜೆಪಿಜಿ | Kannada Prabha

ಸಾರಾಂಶ

ರಾಮನಗರ: ನಗರಸಭೆ ವತಿಯಿಂದ ನವೆಂಬರ್ 3ನೇ ವಾರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ರಾಜ್ಯೋತ್ಸವ ವೇದಿಕೆಯಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪರಿಗೆ ಪೌರ ಸನ್ಮಾನ ನೀಡಿ ಗೌರವಿಸುವುದಾಗಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ರಾಮನಗರ: ನಗರಸಭೆ ವತಿಯಿಂದ ನವೆಂಬರ್ 3ನೇ ವಾರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ರಾಜ್ಯೋತ್ಸವ ವೇದಿಕೆಯಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪರಿಗೆ ಪೌರ ಸನ್ಮಾನ ನೀಡಿ ಗೌರವಿಸುವುದಾಗಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ನಡೆದ ತುರ್ತು ಸಭೆಯಲ್ಲಿ 2025-26ನೇ ಸಾಲಿನ ಆಯವ್ಯಯದಲ್ಲಿ ಅನುದಾನ ಮೀಸಲಿಟ್ಟಿದ್ದು ಸದಸ್ಯರೆಲ್ಲರ ಒಪ್ಪಿಗೆ ಮೇರೆಗೆ ಕನ್ನಡ ರಾಜ್ಯೋತ್ಸವ ಆಚರಣೆ ವಿಚಾರದಲ್ಲಿ ನಾಗರಿಕರ ಅಭಿಪ್ರಾಯ ಪಡೆಯಲು ನ.10ರಂದು ಸಂಜೆ 4 ಗಂಟೆಗೆ ಆರ್.ವಿ.ಸಿ.ಎಸ್ ಕಲ್ಯಾಣ ಮಂದಿರದಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು. ಗ್ರಾಪಂ ಸದಸ್ಯರಾಗಿ, ಭೂನ್ಯಾಯ ಮಂಡಳಿ ಸದಸ್ಯರಾಗಿ, ಮೂರು ಬಾರಿ ಶಾಸಕರಾಗಿ, ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ 57 ವರ್ಷ ಸುಧೀರ್ಘ ಅವಧಿಗೆ ಜನಸೇವೆ ಸಲ್ಲಿಸಿರುವ ಸಿ.ಎಂ.ಲಿಂಗಪ್ಪ ಅವರಿಗೆ ನಗರದ ನಾಗರೀಕರ ಪರವಾಗಿ ಪೌರ ಸನ್ಮಾನ ನೀಡಿ ಗೌರವಿಸುವ ನಗರಸಭಾಧ್ಯಕ್ಷರ ಉದ್ದೇಶಕ್ಕೆ ಸಭೆ ಒಪ್ಪಿಗೆ ಸೂಚಿಸಿತು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ಸಾಧನೆ ಗೈದವರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವದ ವೇಳೆ ವಿಧಾನಸೌಧದ ಶಿಲ್ಪಿ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ನೀಡಲು ಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿತು. ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು 30ನೇ ವಾರ್ಡ್ ಸದಸ್ಯೆ ಪಾರ್ವತಮ್ಮ, 6ನೇ ವಾರ್ಡ್ ಸದಸ್ಯ ಸೋಮಶೇಖರ್ (ಮಣಿ), 25ನೇ ವಾರ್ಡ್ ಸದಸ್ಯ ಮುತ್ತುರಾಜ್, 28ನೇ ವಾರ್ಡ್ ಸದಸ್ಯ ಮಂಜುನಾಥ್‌ ಅವರನ್ನು ಒಳಗೊಂಡಂತೆ ಅಧ್ಯಕ್ಷರ ಒಪ್ಪಿಗೆ ಮೇರೆಗೆ ಇತರ ಮೂವರನ್ನು ಒಳಗೊಂಡ ಸಮತಿ ರಚಿಸಲು ಸಭೆಯಲ್ಲಿ ಒಪ್ಪಿಗೆ ದೊರೆಯಿತು.

ಸಭೆಯಲ್ಲಿ 6ನೇ ವಾರ್ಡಿನ ಸದಸ್ಯ ಸೋಮಶೇಖರ್ (ಮಣಿ) ಮಾತನಾಡಿ, ರಾಮನಗರದ ಮೇಯಿನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಜೆ.ಪಿ.ರಾಜರತ್ನಂ ಅವರನ್ನು ಸ್ಮರಿಸಬೇಕಾಗಿದೆ. ಹೀಗಾಗಿ ರಾಜ್ಯೋತ್ಸವ ಆಚರಣೆಯ ವೇದಿಕೆಗೆ ಜೆ.ಪಿ.ರಾಜರತ್ನಂ ಅವರ ಹೆಸರು ನಾಮಕರಣ ಮಾಡಬೇಕು. ರಾಜ್ಯೋತ್ಸವ ಕಾರ್ಯಕ್ರಮ ನಡೆಯುವ ಸ್ಥಳದ ಹೆಬ್ಬಾಗಿಲಿಗೆ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಹೆಸರಿಡುವಂತೆ ಸಲಹೆ ನೀಡಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಆಯುಕ್ತ ಡಾ.ಜಯಣ್ಣ ಉಪಸ್ಥಿತರಿದ್ದರು.

6ಕೆಆರ್ ಎಂಎನ್ 6.ಜೆಪಿಜಿ

ರಾಮನಗರ ನಗರಸಭೆಯ ಪ್ರಶಸ್ತಿ ಭವನದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ತುರ್ತು ಸಭೆ ನಡೆಯಿತು.

PREV

Recommended Stories

ಬ್ರಾಹ್ಮಣ ಸಮುದಾಯಕ್ಕೆ ಸೌಲಭ್ಯ ನೀಡಲು ಬದ್ಧ : ಸಚಿವ ದಿನೇಶ್‌ ಗುಂಡೂರಾವ್‌
ಬೆಂಗಳೂರು ನಗರದ 6 ಆರ್‌ಟಿಒ ಕಚೇರಿ ಮೇಲೆ ದಾಳಿ: ಹಲವು ಅಕ್ರಮ ಪತ್ತೆ