ರಂಗೋಲಿಯಲ್ಲಿ ಅರಳಿದ ಕನ್ನಡ ರಾಜ್ಯೋತ್ಸವ ಸಂಭ್ರಮ

KannadaprabhaNewsNetwork |  
Published : Nov 02, 2023, 01:01 AM IST
ಕಲಬುರಗಿಯಲ್ಲಿ ರಂಗೋಲಿಯಲ್ಲಿ ಅರಳಿದ ಕನ್ನಡ ರಾಜ್ಯೋತ್ಸವ ಸಂಭ್ರಮ | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಕರೆಯಿಂದ ಉತ್ತೇಜನಗೊಂಡ ಮಹಿಳೆಯರು ಧ್ವಜ ಬಿಡಿಸಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂದು ಬರೆದು ದೀಪಗಳನ್ನು ಹಚ್ಚಿ ಸಂಭ್ರಮದಿಂದ ಸುವರ್ಣ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.

ಕಲಬುರಗಿ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಕರೆಯಿಂದ ಉತ್ತೇಜನಗೊಂಡ ಮಹಿಳೆಯರು ಧ್ವಜ ಬಿಡಿಸಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂದು ಬರೆದು ದೀಪಗಳನ್ನು ಹಚ್ಚಿ ಸಂಭ್ರಮದಿಂದ ಸುವರ್ಣ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸುನಂದ ಜೋಶಿ, ಮಹಿಳೆಯರೆಲ್ಲರೂ ಪ್ರತಿಯೊಂದು ಹಬ್ಬವನ್ನು ಆಚರಿಸುವಂತೆ ರಾಜ್ಯ ಹಬ್ಬವಾದ ಕನ್ನಡ ರಾಜ್ಯೋತ್ಸವವನ್ನು ರಂಗೋಲಿ ಬಿಡಿಸಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂದು ಬರೆದು ದೀಪದಿಂದ ಅಲಂಕರಿಸಿ ಆಚರಿಸಿದ್ದು ಸಂತಸ ತಂದಿದೆ ಎಂದರು. ಹೇಮಾ ರೇವೂರ್, ಗೀತಾ ಪಾಟೀಲ್, ರಜನಿ ಸೂಗೂರ್, ಅಶ್ವಿನಿ ಕಾರಟಗಿ, ವನಿತಾ ಪುರೋಹಿತ್, ಅನುರಾಧಾ ವಿ ಜೋಶಿ, ಕವಿತಾ ಪಾಟೀಲ್, ಸೀತಾ ಕುಲಕರ್ಣಿ, ಲಕ್ಷ್ಮಿ ಪೊಲೀಸಪಾಟೀಲ್, ವಿಜಯಶ್ರೀ ಕುಲಕರ್ಣಿ, ಶ್ರೇಷ್ಠ ಪುರೋಹಿತ್ ಇದ್ದರು. ಕರುಣೇಶ್ವರ ನಗರದ ವಿನಾಯಕ ಹೌಸಿಂಗ್ ಬಡಾವಣೆಯ ಮಹಿಳೆಯರು, ಮಾತೆಯರು ಸೇರಿ ಸುವರ್ಣ ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದ ಧ್ವಜವನ್ನು ರಂಗೋಲಿಯಲ್ಲಿ ಬಿಡಿಸುವುದರ ಮೂಲಕ ವಿಶಿಷ್ಟವಾಗಿ ಆಚರಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ