ಎಲ್ಲ ಹಂತದಲ್ಲಿ ಕನ್ನಡ ಕಡ್ಡಾಯ ಅನುಷ್ಠಾನವಾಗಬೇಕು-ಸಂಸದ ಬೊಮ್ಮಾಯಿ

KannadaprabhaNewsNetwork |  
Published : Nov 12, 2025, 02:45 AM IST
 10ಎಸ್‌ವಿಆರ್‌01 | Kannada Prabha

ಸಾರಾಂಶ

ಕನ್ನಡಿಗರಿಗೆ ಉದ್ಯೋಗ ಸಿಕ್ಕರೆ ಕನ್ನಡಕ್ಕೆ ಸ್ವಾಭಿಮಾನ ಸಿಕ್ಕಂತಾಗುತ್ತದೆ. ಆದ್ದರಿಂದ, ಎಲ್ಲ ಹಂತದಲ್ಲಿಯೂ ಕನ್ನಡವನ್ನು ಕಡ್ಡಾಯ ಮಾಡುವಂತದ್ದನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ತಂದಿದ್ದೇನೆ. ಆದರೆ, ದುರ್ದೈವ ಇಂದಿನ ಸರ್ಕಾರ ಅದನ್ನು ಅನುಷ್ಠಾನ ಮಾಡುತ್ತಿಲ್ಲ. ಅದನ್ನು ಅನುಷ್ಠಾನ ಮಾಡಿದರೆ ಕನ್ನಡಿರಿಗೆ ಶಿಕ್ಷಣ, ಉದ್ಯೋಗ ದೊರಕುವಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು.

ಸವಣೂರು: ಕನ್ನಡಿಗರಿಗೆ ಉದ್ಯೋಗ ಸಿಕ್ಕರೆ ಕನ್ನಡಕ್ಕೆ ಸ್ವಾಭಿಮಾನ ಸಿಕ್ಕಂತಾಗುತ್ತದೆ. ಆದ್ದರಿಂದ, ಎಲ್ಲ ಹಂತದಲ್ಲಿಯೂ ಕನ್ನಡವನ್ನು ಕಡ್ಡಾಯ ಮಾಡುವಂತದ್ದನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ತಂದಿದ್ದೇನೆ. ಆದರೆ, ದುರ್ದೈವ ಇಂದಿನ ಸರ್ಕಾರ ಅದನ್ನು ಅನುಷ್ಠಾನ ಮಾಡುತ್ತಿಲ್ಲ. ಅದನ್ನು ಅನುಷ್ಠಾನ ಮಾಡಿದರೆ ಕನ್ನಡಿರಿಗೆ ಶಿಕ್ಷಣ, ಉದ್ಯೋಗ ದೊರಕುವಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಗುಂಡೂರ ಗ್ರಾಮದ ಕೀರ್ತಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ(ಆಯ್‌ಕ್ಯೂಎಸಿ) ಮತ್ತು ಕನ್ನಡ ಮತ್ತು ಸಂಸ್ಕೃತಿಕ ಸಂಘ ಇವುಗಳ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜರುಗಿದ ಕೀರ್ತಿ ಕನ್ನಡ ಕಲೋತ್ಸವ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡಿಗರಿಗೆ ಕನ್ನಡದ ನೆಲದಲ್ಲಿ ಶಿಕ್ಷಣ ಮತ್ತು ಉದ್ಯೋಗ ದೊರಕುವದು ಬಹು ಮುಖ್ಯವಾಗಿದೆ. ಕನ್ನಡಿಗರೆ ಜ್ಞಾನವಂತರಾಗಬೇಕು. ಅಂತವರ ಕೈಯಲ್ಲಿ ಉದ್ಯೋಗ ಇದ್ದರೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಶಿಕ್ಷಣ, ಉದ್ಯೋಗ ಸೃಷ್ಠಿಯಾದರೆ ಅಂತಹ ಕ್ಷೇತ್ರ ಉತ್ತಮವಾಗಿ ನಡೆಯುತ್ತದೆ. ಗುಣಮಟ್ಟದ ಶಿಕ್ಷಣವನ್ನು ನೀಡುವಂತ ಕೆಲಸವಾಗಬೇಕು. ಜ್ಞಾನ, ದ್ಯಾನ ವಿದ್ಯಾರ್ಥಿ ಜೀವನದಲ್ಲಿ ಬಹಳ ಮುಖ್ಯ. ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನವನ್ನು ಇತರರಿಗೆ ಹಂಚಿಕೊಳ್ಳಬೇಕು ಅಂದಾಗ ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿಯಾಗುತ್ತದೆ. 21ನೇ ಶತಮಾನ ಜ್ಞಾನದ ಶತಮಾನ. ಯಾರಿಗೆ ಜ್ಞಾನ ಇದೆ ಅವರು ಜಗತ್ತನ್ನು ಆಳುತ್ತಾರೆ. ಅಂತಹ, ಜ್ಞಾನದ ಬಂಡಾರವನ್ನೇ ತೆರೆಯುವಂತ ಕೆಲಸವನ್ನು ಪೋಲಿಸ್‌ಗೌಡ್ರ ಮಾಡಿದ್ದಾರೆ.ಶಿಗ್ಗಾಂವಿ-ಸವಣೂರ ಕ್ಷೇತ್ರದಲ್ಲಿ 4ರಿಂದ 5 ಕೋಟಿ ಅನುದಾನದಲ್ಲಿ ಸರ್ಕಾರಿ ಕಾಲೇಜು, ಪಾಲಿಟೆಕ್ನಿಕ್, ಜಿಟಿಟಿಸಿ, ಮೊರಾರ್ಜಿ ವಸತಿ ಶಾಲೆ, ಕಾಲೇಜು, ಐಟಿಐ ಮತ್ತು ಸವಣೂರಿನಲ್ಲಿ ಸುಮಾರು 67 ಕೋಟಿ ರು. ಅನುದಾನದಲ್ಲಿ ಸರ್ಕಾರಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿ ಶಿಕ್ಷಣದ ಜೊತೆಗೆ ಕ್ಷೇತ್ರದ ಜನರ ಬದುಕನ್ನು ಹಸನಗೊಳಿಸುವ ಉದ್ದೇಶದಿಂದ ಜವಳಿ ಪರ್ಕ್ ತೆರೆದು ಸುಮಾರು 5 ಸಾವಿರ ಮಹಿಳೆಯರಿಗೆ ಉದ್ಯೋಗವನ್ನು ನೀಡುವಂತ ಕೆಲಸವನ್ನು ಮಾಡಿರುವದು ಸಂತೋಷವನ್ನು ತಂದಿದೆ. ಇನ್ನು ಹೆಚ್ಚಿನ ಯೋಜನೆಗಳನ್ನು ಕ್ಷೇತ್ರದಲ್ಲಿ ರೂಪಿಸುವ ಗುರಿಯನ್ನು ಕೂಡಾ ಹೊಂದಲಾಗಿದೆ ಎಂದರು.ಕಾರ್ಯಕ್ರಮದ ಸಾನಿಧ್ಯವನ್ನು ಬೆಂಗಳೂರ ವಿಭೂತಿಪುರ ವೀರಸಿಂಹಾಸನ ಸಂಸ್ಥಾನಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿ, ಇಂದಿನ ದಿನಮಾನದಲ್ಲಿ ವಿದ್ಯಾಸಂಸ್ಥೆಗಳು ಇಂದು ಉದ್ಯಮವಾಗಿ ನಿರ್ಮಾಣಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ 2020ರಲ್ಲಿ ದೇಶದಲ್ಲಿ ನ್ಯಾಷನಲ್ ಎಜ್ಯುಕೇಶನ್ ಪಾಲಿಸಿಯನ್ನು ಜಾರಿಗೆ ತಂದರು. ಅದನ್ನು ದೇಶದಲ್ಲಿಯೇ ಮೊದಲು ಜಾರಿಗೆ ತಂದಿರುವದು ಕರ್ನಾಟಕ ರಾಜ್ಯದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು. ಭಗವಂತ ಕೊಟ್ಟಂತ ಸಾಮರ್ಥ್ಯದಲ್ಲಿ ಜ್ಞಾನ, ಧ್ಯಾನವನ್ನು ತಮ್ಮದಾಗಿಸಿಕೊಂಡು ಜಗತ್ತಿಗೆ ಕೊಡುಗೆಯನ್ನು ನೀಡುವಂತ ಕೆಲಸವನ್ನು ಮಾಡಬೇಕು. ಕನ್ನಡ ನಾಡು ನುಡಿ ಬಗ್ಗೆ ಗೌರವನ್ನು ಇಟ್ಟುಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆ ಅಧ್ಯಕ್ಷೆ ಶಶಿಕಲಾ ಪೊಲೀಸ್‌ಗೌಡ್ರ ವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಿದರು.ಕಾರ್ಯಕ್ರಮದಲ್ಲಿ ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಗಂಗಣ್ಣ ಸಾತಣ್ಣವರ, ಗಂಗಾಧರ ಬಾಣದ, ಬಿ.ಎಂ.ಪಾಟೀಲ,ಶಿವಾನಂದ ಮ್ಯಾಗೇರಿ, ಶಂಕರಗೌಡ ಪಾಟೀಲ, ವಿಶ್ವನಾಥ ಹರವಿ, ಬಸವರಾಜ ಸವೂರ, ಮಹಾಂತೇಶ ಮೆಣಸಿನಕಾಯಿ, ಪ್ರದೀಪ ಸವೂರ, ಅಶೋಕ ಉಳ್ಳಟ್ಟಿ, ದೇವಣ್ಣ ಚಾಕಲಬ್ಬಿ, ಗಿರೀಶಗೌಡ ಪಾಟೀಲ ಸೇರಿದಂತೆ ಕಾಲೇಜು ಆಡಳಿತ ಮಂಡಳಿ, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

PREV

Recommended Stories

ಪರಪ್ಪನ ಅಗ್ರಹಾರ ಜೈಲಿಗೆ ಅಂಶು ಕುಮಾರ್‌ ಅಧೀಕ್ಷಕ
ಬಟ್ಟೆ ವ್ಯಾಪಾರ ಸೋಗಲ್ಲಿ 1 ಕೋಟಿಯ ಬುಲೆಟ್‌ ಬೈಕ್‌ ಕದ್ದ