ಕನ್ನಡಪ್ರಭ ವಾರ್ತೆ ಮೈಸೂರುಮಹಾರತ್ನ ಟ್ರಸ್ಟ್ ವತಿಯಿಂದ ಮೈಸೂರು ಮಹಾಲಿಂಗು ಎಂ. ಲಕ್ಷ್ಮೀಪುರ ಅವರ ನೇತೃತ್ವದಲ್ಲಿ ಕಲಾಮಂದಿರ ಆವರಣದ ಕಿರುರಂಗಮಂದಿರದ ಮೆಟ್ಟಿಲುಗಳ ಮೇಲೆ ಶತವರುಷದ ಶುಭ ನಾಡಗೀತೆ ಕಾರ್ಯಕ್ರಮ ಬುಧವಾರ ಜರುಗಿತು.ಎಂ. ಮೈಸೂರು ಮಹಾಲಿಂಗು, ದೇವಾನಂದ ವರಪ್ರಸಾದ್, ಭವತಾರಿಣಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯಶಂಕರ್, , ದಿವ್ಯಾ, ಹಂಸಿನಿ, ನಿಂಗರಾಜು, ಲೋಕೇಶ್, ದಿನೇಶ್ ಚಮ್ಮಾಳಿಗೆ, ಆಶಾ, ಸುಮಂತ್ ವಶಿಷ್ಠ, ರವಿರಾಜ್ ಮಹೇಶ್ ಬಾಗ್ಳಿ, ಗಣೇಶ್, ಮಂಜು, ದೇವರಾಜ್, ಗುರುರಾಜ್, ಶ್ರೀಕಾಂತ್, ಸಿದ್ದರಾಜು, ವಿನಯ್. ವಾಣಿಶ್ರೀ, ಎಸ್. ಪ್ರಿಯಾ, ಚಿನ್ಮಯಿ ವಶಿಷ್ಠ, ಸಂಗೀತ ಅವರು ಗಾಯನ ಪ್ರಸ್ತುತಪಡಿಸಿದರು.ವಾದ್ಯ ವೃಂದದಲ್ಲಿ ಪುರುಷೋತ್ತಮ ಕಿರಗಸೂರು- ಕೀಬೋರ್ಡ್, ತಬಲ- ಕಿರಣ್, ಪ್ರದೀಪ್- ರಿದಂ ಪ್ಯಾಡ್ ಸಾಥ್ ನೀಡಿದರು.ಕಾರ್ಯಕ್ರಮವನ್ನು ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು.ಜಾನಪದ ವಿದ್ವಾಂಸ ಮೈಸೂರು ಕೃಷ್ಣಮೂರ್ತಿ ಅವರು ನಾಡಗೀತೆ- ನೂರರ ಸಂಭ್ರಮದ ಬಗ್ಗೆ ಮಾತನಾಡಿದರು. ವಿದ್ವಾನ್ ಸುರೇಶ್ ಮಾತನಾಡಿದರು. ಜಾನಪದ ಅಕಾಡೆಮಿ ಸದಸ್ಯ ಡಾ.ಮೈಸೂರು ಉಮೇಶ್, ಟ್ರಸ್ಟ್ ಗೌರವಾಧ್ಯಕ್ಷ ಸಿ.ವಿ. ಪಾರ್ಥಸಾರಥಿ, ಅಗಸ್ತ್ಯ ಕ್ರೆಡಿಟ್ ಕೋ-ಆಪ್ ಸೊಸೈಟಿ ಅಧ್ಯಕ್ಷ ಎಂ.ಡಿ. ಗೋಪಿನಾಥ್, ನಿರ್ದೇಶಕರಾದ ಪ್ರಶಾಂತ್ ತಾತಾಚಾರ್, ವಿಕ್ರಂ ಅಯ್ಯಂಗಾರ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಸಮಾಜ ಸೇವಕರಾದ ಸುಚೀಂದ್ರ, ಎಂ. ಪ್ರಸಾದ್, ರಮೇಶ್, ಗೋಪಾಲರಾಜ್ ಅರಸ್, ಸುಮಿತ್ರಾ, ಆನಂದ್, ಅಜಯ್ ಶಾಸ್ತ್ರಿ, ಪ್ರಿಯದರ್ಶಿನಿ, ಟ್ರಸ್ಟ್ ಕಾರ್ಯದರ್ಶಿ ರೂಪಾ,ಖಜಾಂಚಿ ನಾಗರತ್ನ ಮೊದಲಾದವರು ಭಾಗವಹಿಸಿದ್ದರು.ಇದಾದ ನಂತರ ಕಿರುರಂಗಮಂದಿರ ಆವರಣಧಲ್ಲಿ ಬಾರಯ್ಯ ಬೆಳದಿಂಗಳೆ- ಜನಪದ ಗೀತಾಮೃತ ಕಾರ್ಯಕ್ರಮ ನಡೆಯಿತು. ಎಚ್.ವಿ. ರಾಜೀವ್, ಅಂಶಿ ಪ್ರಸನ್ನಕುಮಾರ್ ಅವರಿಗೆ ಕನ್ನಡರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಮಹಾರತ್ನ ಸಂಗೀತ ಶಾಲೆಯ ಕೆ.ಎಸ್. ಹರ್ಷಿತ್, ಎಂ.ಡಿ, ಉದ್ವಿತ್, ಕೆ.ಎಸ್. ನಮಿತಾ, ಆರ್. ಕೃತಿಕಾ, ಕುಶಾಲ್ ಡಿ. ಪಟೇಲ್, ಮನೋಜ್ಞ ಡಿ. ಪಟೇಲ್, ಗಾಯಿತ್ರಿ, ಆರ್. ತೇಜಸ್ವಿನ್, ಪ್ರೀತಂ, ರೂಪಾ ಪ್ರೇಮಕುಮಾರ್, ಪ್ರೇಮಾಬಾಯಿ, ಅನುಪಮಾ, ಮಂಜುಳಾ, ಚಂಪಾವತಿ, ಕಾಂತಾಮಣಿ, ರೇಣುಕಾ, ಭಾಗ್ಯಲಕ್ಷ್ಮೀ, ಎಸ್.ಕೆ. ಲತಾ, ನಾಗಮ್ಮ,. ಎಸ್. ಪ್ರಿಯಾ, ಲಕ್ಷ್ಮೀ ಪರಶುರಾಮ್, ಭಾರತಿ ಶಿರೂರು, ಶಾರದಾ, ಕೆ.ಎಸ್. ಆಂಡಾಳ್, ಚಿನ್ಮಯಿ ವಶಿಷ್ಠ, ನೀಲಾವತಿ, ಅನ್ನಪೂರ್ಣ ಶಂಕರ್, ಸಿ.ಕೆ. ಆಶಾ, ಅಂಬಿಕಾ, ಮಂಗಳಾ, ಸಂದೇಶ್ ಕುಮಾರ್, ಚನ್ನಬಸಪ್ಪ, ನಂದಕುಮಾರ್ ಭಾಗವಹಿಸಿದ್ದರು.