ಕನನಡಪ್ರಭ ವಾರ್ತೆ ಕಲಬುರಗಿ
ನಂತರ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಫಜಲ್ಫುರ ಘಟಕದಲ್ಲಿ ಚಾಲಕರಾಗಿರುವ ನಾಗಪ್ಪ ಸಿದ್ದಪ್ಪ ಉಪ್ಪಿನ್ ಅವರ ಕನ್ನಡ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, 5 ಸಾವಿರ ನಗದು ನೀಡಿ ಪುರಸ್ಕರಿಸಿ, ಸಾರಿಗೆ ನೌಕರರ ಕನ್ನಡ ಅಭಿಮಾನ ಸರ್ವರಿಗೂ ಮಾದರಿಯಾಗಲಿ ಎಂದು ಹೇಳಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, ತಮ್ಮ ಸ್ವಂತ ಹಣದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯ ದಿನದಂದು ಬಸ್‍ಗೆ ಅಲಂಕಾರ ಮಾಡಿ ಕನ್ನಡದ ಪ್ರೇಮವನ್ನು ಮೆರೆದ ನಾಗಪ್ಪ ಅವರು ಕನ್ನಡದ ಕಂಪು ಹರಡಲು ಕಾರಣಿಕರ್ತರಾಗಿದ್ದಾರೆ. ಈ ಕನ್ನಡ ಮನೋಭಾವನೆ ಎಲ್ಲರಲ್ಲಿ ಮೂಡಬೇಕಾಗಿದೆ ಎಂದು ಹೇಳೀದರು.ಆಸ್ಟ್ರೇಲಿಯಾ, ಕೆನಡಾ, ಮೆಲ್ಲೋನ್ ಸೇರಿದಂತೆ ವಿಶ್ವದ ಎಲ್ಲೆಡೆ ಕನ್ನಡ ಭಾಷೆಯನ್ನು ಅಧ್ಯಯನ ಮಾಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಕನ್ನಡ ಕಲಿಕೆ ಎನ್ನುವುದು ಕೀಳರಿಮೆ ಎಂಬಂತಾಗಿರುವುದು ವಿಷಾದನೀಯ. ತನು ಕನ್ನಡ. ಮನ ಕನ್ನಡವಾಗುವ ಮೂಲಕ ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.