ಕನ್ನಡಪ್ರಭ ಪುರವಣಿ ಮುಂದಿನ ಪೀಳಿಗೆಗೆ ಉಪಯುಕ್ತ: ಜನಾರ್ದನ ರೆಡ್ಡಿ

KannadaprabhaNewsNetwork |  
Published : Sep 18, 2026, 04:15 AM IST
ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ 79ನೇ ಕಲ್ಯಾಣ ಉತ್ಸವ ಸಮಾರಂಭದಲ್ಲಿ ಶಾಸಕ ಗಾಲಿ ಜನಾರ್ದ ರೆಡ್ಡಿ ಅವರು ಕನ್ನಡಪ್ರಭ ವಿಶೇಷ ಪುರವಣಿ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಕನ್ನಡಪ್ರಭ ಹೋರಾಟಗಾರರ ಇತಿಹಾಸದ ಕಲ್ಯಾಣ ಉತ್ಸವ ಪುರವಣಿ ಹೊರತಂದಿರುವುದು ಪ್ರಶಂಸನೀಯ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಗಂಗಾವತಿ: 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಕನ್ನಡಪ್ರಭ ಹೋರಾಟಗಾರರ ಇತಿಹಾಸದ ಕಲ್ಯಾಣ ಉತ್ಸವ ಪುರವಣಿ ಹೊರತಂದಿರುವುದು ಪ್ರಶಂಸನೀಯ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ತಾಲೂಕ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ ಆಯೋಜಿಸಿರುವ 79ನೇ ಕಲ್ಯಾಣ ಉತ್ಸವ ಸಮಾರಂಭದಲ್ಲಿ ಪುರವಣಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ಹಿಂದೆ ಹೈದರಾಬಾದ್‌ ವಿಮೋಚನಾ ದಿನಾಚರಣೆ ಎಂದು ಕರೆಯಲಾಗುತ್ತಿತ್ತು. ಈಗ ಕಲ್ಯಾಣ ಉತ್ಸವ ಎಂದು ಸರ್ಕಾರ ಬದಲಾಯಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹೋರಾಟಗಾರರ ಸಮಗ್ರ ಇತಿಹಾಸವನ್ನು ಮೆಲಕು ಹಾಕಿರುವ ಕನ್ನಡಪ್ರಭ ಪತ್ರಿಕೆ ಮೆಚ್ಚುಗೆಗೆ ಕಾರಾಣವಾಗಿದೆ ಎಂದರು.

ಗಂಗಾವತಿ- ನವಲಿ ಸೇರಿದಂತೆ ಅಖಂಡ ಗಂಗಾವತಿ ತಾಲೂಕಿನಲ್ಲಿ ಬಹಳಷ್ಟು ಹೋರಾಟಗಾರರು ನಿಜಾಮರ ವಿರುದ್ಧ ದಂಗೆ ಎದ್ದು ಸೆರೆಮನೆವಾಸ ಅನುಭವಿಸಿದ್ದಾರೆ. ಗಂಗಾವತಿ ರಾಮಭಟ್ ಜೋಷಿ, ಡಾ. ಎಚ್.ಕೆ. ರಾಮರಾವ್‌, ಗೌಳಿ ಮಹಾದೇವಪ್ಪ, ವೆಂಕೋಬಾಚಾರ ಬೋವಿನಾಳ, ಅಯೋಧ್ಯಾ ರಾಮಚಾರ, ಗುರುರಾಜರಾವ್‌ ಬೆಳ್ಳುಬ್ಬಿ, ನರಸಿಂಹಚಾರ ನವಲಿ, ರಾಘವೇಂದ್ರರಾವ್‌ ಚೆಳ್ಳೂರು ಸೇರಿದಂತೆ ಅನೇಕ ಮಹನೀಯರು ಹೋರಾಟದ ಮುಂಚೂಣಿಯಲ್ಲಿದ್ದು, ರಜಾಕಾರರ ವಿರುದ್ಧ ಹೋರಾಟ ನಡೆಸಿದ್ದಾರೆ. ಅಂತಹ ಮಹನೀಯರ ಇತಿಹಾಸ ಇರುವ ಪುರವಣಿ ಮುಂದಿನ ಪೀಳಿಗೆಗೆ ಉಪಯುಕ್ತ ಎಂದರು.

ಪುರವಣಿ ಬಿಡುಗಡೆ ಸಂದರ್ಭದಲ್ಲಿ ತಹಸೀಲ್ದಾರ್‌ ವಸಂತಕುಮಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಸ್ಮಾಯಿಲ್ ಖಾದ್ರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮರೆಡ್ಡಿ ಪಾಟೀಲ್, ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಗೊಂಡಬಾಳ, ಕನ್ನಡಪ್ರಭ ವರದಿಗಾರ ರಾಮಮೂರ್ತಿ ನವಲಿ, ಜಯಶ್ರೀ ಹಕ್ಕಂಡಿ ಉಪಸ್ಥಿತರಿದ್ದರು.

ಕಲ್ಯಾಣ ಕರ್ನಾಟಕ ಉತ್ಸವಕ್ಕೆ ರಜೆ ಘೋಷಿಸಲಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಸರ್ಕಾರ ಘೋಷಣೆ ಮಾಡಲಿ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಗಂಗಾವತಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ನಗರಸಭೆ, ತಾಪಂ ಆಯೋಜಿಸಿರುವ 79ನೇ ಕಲ್ಯಾಣ ಉತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೈದರಾಬಾದ್ ಕರ್ನಾಟಕ ವಿಮೋಚನೆಯಾದ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ 6 ಜಿಲ್ಲೆಗಳಲ್ಲಿ ಈ ದಿನಾಚರಣೆಗೆ ಸರ್ಕಾರ ರಜೆ ಘೋಷಿಸಬೇಕು ಎಂದು ಆಗ್ರಹಿಸಿದರು.ಈ ಹೋರಾಟದಲ್ಲಿ ಜಿಲ್ಲೆ ಸೇರಿದಂತೆ ಅಖಂಡ ಗಂಗಾವತಿ ತಾಲೂಕಿನಲ್ಲಿ ಬಹಳಷ್ಟು ಮಹನೀಯರು ತ್ಯಾಗ, ಬಲಿದಾನ ಮಾಡಿದ್ದಾರೆ. ಅಂತಹ ಮಹನೀಯರನ್ನು ಎಲ್ಲರೂ ಸ್ಮರಿಸಬೇಕು ಎಂದರು.

ಪೊಲೀಸ್, ಸ್ಕೌಟ್ಸ್, ಎನ್‌ಸಿಸಿ, ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಆನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ತಹಸೀಲ್ದಾರ್‌ ವಸಂತಕುಮಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಸ್ಮಾಯಿಲ್ ಖಾದ್ರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮರೆಡ್ಡಿ ಪಾಟೀಲ್, ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಗೊಂಡಬಾಳ ಉಪಸ್ಥಿತರಿದ್ದರು. ಜಯಶ್ರೀ ಹಕ್ಕಂಡಿ ಕಾರ್ಯಕ್ರಮ ನಿರೂಪಿಸಿದರು. ಬಿಇಒ ವೀರಭದ್ರಪ್ಪ ಗೊಂಡಬಾಳ ಸ್ವಾಗತಿಸಿದರು. ರಾಜಾಸಾಬ ಸಂಗಡಿಗರು ನಾಡಗೀತೆ, ವಂದೇ ಮಾತರಂ ಪ್ರಸ್ತುತ ಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಾರ್ದನ ರೆಡ್ಡಿ ಮಾತನಾಡುವುದನ್ನು ಕಲಿಯಲಿ: ತಂಗಡಗಿ
ಕೊಪ್ಪಳದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಸ್ಥಾಪಿಸಿ: ಸಿ.ವಿ. ಚಂದ್ರಶೇಖರ