ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕನ್ನಡ ಭಾಷೆಯದ್ದಾಗಿದೆ. ಜ್ಞಾನಪೀಠ ಪ್ರಶಸ್ತಿಗಳ ಸಾಮ್ರಾಟ ಕನ್ನಡಿಗರು. ಕನ್ನಡ ಭಾಷೆ ಎಲ್ಲ ಭಾಷೆಗಳಿಗಿಂತ ಶ್ರೀಮಂತ ಭಾಷೆ. ಕನ್ನಡ ಭಾಷೆಯನ್ನು ಉತ್ತುಂಗಕ್ಕೇರಿಸುವಲ್ಲಿ ಪ್ರತಿಯೊಬ್ಬ ಕನ್ನಡಿಗ ದಿಟ್ಟ ಹೆಜ್ಜೆ ಇಡಬೇಕು ಎಂದು ಎಸಿ ಅಬೀದ್ ಗದ್ಯಾಳ ಹೇಳಿದರು.
ಇಂಡಿ: ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕನ್ನಡ ಭಾಷೆಯದ್ದಾಗಿದೆ. ಜ್ಞಾನಪೀಠ ಪ್ರಶಸ್ತಿಗಳ ಸಾಮ್ರಾಟ ಕನ್ನಡಿಗರು. ಕನ್ನಡ ಭಾಷೆ ಎಲ್ಲ ಭಾಷೆಗಳಿಗಿಂತ ಶ್ರೀಮಂತ ಭಾಷೆ. ಕನ್ನಡ ಭಾಷೆಯನ್ನು ಉತ್ತುಂಗಕ್ಕೇರಿಸುವಲ್ಲಿ ಪ್ರತಿಯೊಬ್ಬ ಕನ್ನಡಿಗ ದಿಟ್ಟ ಹೆಜ್ಜೆ ಇಡಬೇಕು ಎಂದು ಎಸಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡ ಸಾರಸತ್ವಲೋಕದಲ್ಲಿ ಕನ್ನಡ ಭಾಷೆಗೆ ವಿಶ್ವದಲ್ಲಿಯೇ ಸಾಕಷ್ಟು ಗೌರವ ಇದೆ. ಕನ್ನಡ ದ್ರಾವಿಡ್ ಭಾಷೆಗಳಲ್ಲಿ 2 ನೇ ಪುರಾತನ ಭಾಷೆ. ಕನ್ನಡ ಸಾಹಿತ್ಯ, ಪರಂಪರೆ ಕಾಲಕಾಲಕ್ಕೆ ಪರಿಷ್ಕೃತ ಗಮನಿಸಿದಾಗ ಕನ್ನಡ ಭಾಷೆ ಗಟ್ಟಿಯಾಗಿ ಬೆಳೆಯುತ್ತಿದೆ. ಕನ್ನಡ ನಾಡು ಸಂಸ್ಕೃತಿಕ ಬೀಡು ಈ ನಿಸರ್ಗದ ಮಡಿಲಲ್ಲಿ ಜನಿಸಿರುವುದೇ ಕನ್ನಡಿಗರ ಭಾಗ್ಯ ಎಂದರು.
ವಿಶ್ವದ ಅನೇಕ ದೇಶಗಳು ಸುತ್ತಾಡಿದರೂ ಭಾರತ ಭೂಪುಟದಲ್ಲಿ ಕಣ್ಣಾಡಿಸಿದರೂ ಕನ್ನಡ ನಾಡಿಗೆ ಸಿಗುವುಷ್ಟು ಗೌರವ ಯಾವುದೇ ರಾಜ್ಯಗಳಿಗೆ ಇಲ್ಲ. ಕನ್ನಡ ನಾಡು ಗಂಧದ ಬೀಡು, ಕಲೆಗಳ ಸಾಹಿತಿಗಳ ವೀರರ ನಾಡು. ಕನ್ನಡ ನಾಡು ಆಳಿದ ವಿಜಯನಗರ ಅರಸರ ಕಾಲದಲ್ಲಿ ಮುತ್ತು ರತ್ನಗಳನ್ನು ಬೀದಿಯಲ್ಲಿ ಮಾರಾಟ ಮಾಡುವಂತೆ ಸುವರ್ಣ ಯುಗವಾಗಿತ್ತು ಎಂದು ಇತಿಹಾಸವನ್ನು ಸ್ಮರಿಸಿದರು.ತಹಸೀಲ್ದಾರ ಬಿ.ಎಸ್.ಕಡಕಬಾವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡಿಗರು ಜಾಗತಿಕ ಮಟ್ಟದಲ್ಲಿ ತಮ್ಮ ವ್ಯಕ್ತಿತ್ವದ ಛಾಪು ಮೂಡಿಸಿದ್ದಾರೆ. ಇಂಗ್ಲೀಷ ಸಾಹಿತ್ಯಕ್ಕೂ ಮುಂಚೆ 600 ವರ್ಷಗಳ ಹಿಂದೆ ಬಸವಾದಿ ಶರಣರು ಈ ಕಲ್ಯಾಣ ನಾಡಿನಲ್ಲಿ ವಚನ ರಚಿಸಿದ್ದು, ಜಗತ್ತಿನ ಯಾವ ದೇಶದಲ್ಲಿ ಇಲ್ಲ. ಕನ್ನಡ ನೆಲ, ಜಲದ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು, ಕನ್ನಡ ನಾಡಿನಲ್ಲಿ ಅನೇಕ ಸಾಧು ಸಂತರು, ಧಾರ್ಮಿಕ ಯುಗ ಪುರುಷರು, ಶರಣರು, ಕವಿಪುಂಗರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೋಳಿಸಿದ್ದಾರೆ ಶ್ಲಾಘಿಸಿದರು.
ಡಾ.ಕಾಂತು ಇಂಡಿ ಉಪನ್ಯಾಸ ನೀಡಿ, ಕನ್ನಡ ನಾಡನ್ನು ಒಗ್ಗೂಡಿಸಿದ ಮಹನೀಯರನ್ನು ಸ್ಮರಿಸುವ ದಿನವಿದು. ಹೀಗಾಗಿ ಕನ್ನಡ ಭಾಷೆ ಉಳಿಸಿ,ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪೊಲೀಸ ಉಪಾಧೀಕ್ಷಕ ಜಗದೀಶ, ಗ್ರೇಡ್-2 ತಹಸೀಲ್ದಾರ್ ಧನಪಾಲ ಶೆಟ್ಟಿ ದೇವೂರ, ಬಿಇಒ ಟಿ.ಎಸ್.ಆಲಗೂರ, ಬಿಆರ್‌ಸಿ ಎಸ್.ಆರ್.ನಡಗಡ್ಡಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಎಇಇ ಎಸ್.ಆರ್.ರುದ್ರವಾಡಿ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ತೋಟಗಾರಿಕಾಧಿಕಾರಿ ಎಚ್,ಎಸ್ ಪಾಟೀಲ, ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ಎಇಇ ದಯಾನಂದ ಮಠ, ಇಇ ಸಂಜವಾಡ, ಹೆಸ್ಕಾಂ ಎಇಇ ಆರ್.ಎಸ್.ಮೇಡೆಗಾರ, ಆಹಾರ ನಿರೀಕ್ಷಕ ಪರಮಾನಂದ ಹೂಗಾರ, ಜಾವೀದ ಮೋಮಿನ್, ಪ್ರಶಾಂತ ಕಾಳೆ, ನಿಜಣ್ಣ ಕಾಳೆ, ಜಟ್ಟೆಪ್ಪ ರವಳಿ, ಚಂದ್ರಶೇಖರ ವಾಲಿಕಾರ, ಬಾಳು ಮುಳಜಿ, ರಾಜು ಪಡಗಾನೂರ, ರಾಮಸಿಂಗ್ ಕನ್ನೋಳ್ಳಿ, ಹಣಮಂತ ಅರವತ್ತು, ದಶರಥ ಕೋರಿ, ಮಂಜುನಾಥ ನಾಯಕೋಡಿ, ಪ್ರಕಾಶ ರೋಡಗಿ, ಧರ್ಮು ವಾಲಿಕಾರ, ಶಿವು ಮಲಕಗೊಂಡ, ಪಯಾಜ ಬಾಗವಾನ, ಬಾಬು ಗುಡಮಿ, ಶಿವು ಬಡಿಗೇರ, ಸದಾಶಿವ ಈರನಕೇರಿ, ಮಹೇಶ ಹೂಗಾರ, ಶ್ರೀಶೈಲ ಪೂಜಾರಿ ಮುಂತಾದವರು ಇದ್ದರು.
ಶಿಕ್ಷಕ ಎ.ಒ.ಹೂಗಾರ ನಿರೂಪಿಸಿ, ವಂದಿಸಿದರು. ಈ ವೇಳೆ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಪುರಸ್ಕೃತೆ ಪಡೆದ ಶಿಕ್ಷಕಿ ಬಡಿಗೇರ ರನ್ನು ಸನ್ಮಾನಿಸಲಾಯಿತು.ಕನ್ನಡಪ್ರಭ ವಾರ್ತೆ ಇಂಡಿ:ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕನ್ನಡ ಭಾಷೆಯದ್ದಾಗಿದೆ. ಜ್ಞಾನಪೀಠ ಪ್ರಶಸ್ತಿಗಳ ಸಾಮ್ರಾಟ ಕನ್ನಡಿಗರು. ಕನ್ನಡ ಭಾಷೆ ಎಲ್ಲ ಭಾಷೆಗಳಿಗಿಂತ ಶ್ರೀಮಂತ ಭಾಷೆ. ಕನ್ನಡ ಭಾಷೆಯನ್ನು ಉತ್ತುಂಗಕ್ಕೇರಿಸುವಲ್ಲಿ ಪ್ರತಿಯೊಬ್ಬ ಕನ್ನಡಿಗ ದಿಟ್ಟ ಹೆಜ್ಜೆ ಇಡಬೇಕು ಎಂದು ಎಸಿ ಅಬೀದ್ ಗದ್ಯಾಳ ಹೇಳಿದರು.