ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಹೆಬ್ಬಾಳಿನ ಕನ್ನಿಕಾ ಕಾವೇರಿ ಶಾಲೆಯಲ್ಲಿ ಮೈಸೂರು ಸಸ್ಯಾರಾಧನಾ ಸಮಿತಿ ಮತ್ತು ಡಾ.ಡಿ. ಮಾದೇಗೌಡ ಸೇವಾ ಪ್ರತಿಷ್ಟಾನವು ಆಯೋಜಿಸಿದ್ದ ಸಸ್ಯಾರಾಧನೆ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಅವರು ಬಹುಮಾನ ವಿತರಿಸಿ ಮಾತನಾಡಿದರು.
ಮುಂದೆ ಈ ದೇಶವನ್ನಾಳುವ ಮಕ್ಕಳಲ್ಲಿ ಛಲದಿಂದ ಬದುಕುವ ಕಲೆ ಕಲಿಸದಿದ್ದರೆ, ಅವರು ಕಲಿಯುವ ಯಾವ ಶಿಕ್ಷಣವೂ ಪ್ರಯೋಜನವಾಗುವುದಿಲ್ಲ. ಕಷ್ಟದಲ್ಲಿ ಬೆಳೆದ ಮಕ್ಕಳು ಜೀವನದ ಅರ್ಥ ಚೆನ್ನಾಗಿ ಕಲಿತಿರುತ್ತವೆ. ಸುಖದಲ್ಲಿ ಬೆಳೆದ ಮಕ್ಕಳು ಜೀವನ ಸರಿಯಾಗಿ ರೂಪಿಸಿಕೊಳ್ಳದೆ ಹಾಳು ಮಾಡಿಕೊಳ್ಳುತ್ತವೆ. ಹೀಗಾಗಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯೇತರ ವಿಷಯವಾಗಿ ಜೀವನದಲ್ಲಿ ಬರುವ ಕಷ್ಟ ಎದುರಿಸಿ ನಿಲ್ಲುವ ಬದುಕುವ ಕಲೆ ಕಲಿಸಬೇಕು ಎಂದರು.ವಿದ್ಯಾವಂತರಲ್ಲೇ ಬದುಕುವ ಬಗ್ಗೆ ಅಸಹನೆ ಅಶಿಸ್ತು ಹೆಚ್ಚಾಗುತ್ತಿದೆ. ಇದರಿಂದ ವಿದ್ಯಾವಂತರಲ್ಲೇ ಸಣ್ಣಪುಟ್ಟ ಕಷ್ಟಗಳಿಗೂ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಪ್ರವೃತ್ತಿ ಬೆಳೆಯುತ್ತಿದೆ. ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಆತ್ಮಹತ್ಯೆ ಪಿಡುಗು ಹೆಚ್ಚಾಗುತ್ತಿದೆ. ಹೆತ್ತ ಮಕ್ಕಳನ್ನು ಕೊಲ್ಲುವವರಿಗೆ ಭಗವಂತ ರೌರವ ನರಕ ಕಾಣಿಸುತ್ತಾನೆ. ಆದ್ದರಿಂದ ಮಕ್ಕಳನ್ನು ನಿಮಗೆ ಸಾಕಲಾಗದಿದ್ದರೂ ಪರವಾಗಿಲ್ಲ, ಕೊಲ್ಲುವ ನೀಚ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.
ನಾವೆಲ್ಲಾ ಪರಸ್ಪರ ಸೌಹಾರ್ದ ವಾತಾವರಣ ರೂಪಿಸಿಕೊಂಡು ಆರೋಗ್ಯವಂತ ಮನಸ್ಸಿನಿಂದ ಉತ್ತಮ ಸಮಾಜ ರೂಪಿಸಿಕೊಳ್ಳಬಹುದಾಗಿದೆ. ಆದ್ದರಿಂದ ಮಕ್ಕಳಿಗೆ ನಮ್ಮ ಕಷ್ಟದ ಇತಿಹಾಸ ಹೇಳುತ್ತಾ, ಅವರ ಭವಿಷ್ಯ ಹೇಗೆ ಸುಖವಾಗಿ ರೂಪಿಸಿಕೊಳ್ಳಬಹುದೆಂಬುದನ್ನು ದೃಷ್ಟಾಂತ ಸಹಿತ ವಿವರಿಸಿ ಮನದಟ್ಟು ಮಾಡಿಸಬೇಕು ಎಂದು ಹೇಳಿದರು.
ಡಿ. ಮಾದೇಗೌಡ ಸೇವಾ ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಕುಂಬಾರಕೊಪ್ಪಲು ದಿನೇಶ್, ಕನ್ನಿಕಾ ಕಾವೇರಿ ಶಾಲೆಯ ಅಧ್ಯಕ್ಷ ಲೋಕೇಶ್ ಅಪ್ಪಣ್ಣ, ಕಾರ್ಯದರ್ಶಿ ಎಂ.ಸಿ. ಚೋಂದಮ್ಮ, ಮುಖ್ಯೋಪಾಧ್ಯಾಯಿನಿ ಕೆ.ಎ. ಮನೋರಮ, ಗ್ರಂಥಾಲಯ ಮುಖ್ಯಸ್ಥ ವಿ. ಪ್ರಶಾಂತ್, ವಿಜ್ಞಾನ ಪ್ರಯೋಗಾಲಯದ ನಿರ್ವಾಹಕಿ ಹೇಮಲತಾ ಮೊದಲಾದವರು ಇದ್ದರು.