ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಗ್ರಾಮ ಸಭೆ

KannadaprabhaNewsNetwork |  
Published : Oct 13, 2025, 02:03 AM IST
 ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಗ್ರಾಮ ಸಭೆ ಪಂಚಾಯತಿ ಸಮುದಾಯ ಭವನದಲ್ಲಿಪಂಚಾಯಿತಿ ಅಧ್ಯಕ್ಷ ಕುಶನ್ ರೈ ಅವರ ಅಧ್ಯಕ್ಷತೆಯಲ್ಲಿ ಜರುಗಿತ್ತು. | Kannada Prabha

ಸಾರಾಂಶ

ಸಾರ್ವಜನಿಕರ ಕುಂದು ಕೊರತೆಗಳನ್ನು ಸರಿಪಡಿಸಿ ಉತ್ತಮ ಅಭಿವೃದ್ಧಿ ಕಾರ್ಯ ಗ್ರಾಮ ಪಂಚಾಯಿತಿಯಿಂದ ಆಗುತ್ತಿದೆ ಎಂದು ಪಂಚಾಯಿತಿಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಾರ್ವಜನಿಕರ ಕುಂದು ಕೊರತೆಗಳನ್ನು ಸರಿಪಡಿಸಿ ಉತ್ತಮ ಅಭಿವೃದ್ಧಿ ಕಾರ್ಯ ಗ್ರಾಮಪಂಚಾಯಿತಿಯಿಂದ ಆಗುತ್ತಿದೆ ಎಂದು ಪಂಚಾಯಿತಿಯ ಸಾರ್ವಜನಿಕರು

ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಗ್ರಾಮ ಸಭೆ ಪಂಚಾಯಿತಿ ಸಮುದಾಯ ಭವನದಲ್ಲಿ ಪಂಚಾಯಿತಿ ಅಧ್ಯಕ್ಷ ಕುಶನ್ ರೈ ಅವರ ಅಧ್ಯಕ್ಷತೆಯಲ್ಲಿ ಜರುಗಿತ್ತು . ನೋಡಲ್ ಅಧಿಕಾರಿ ಬಾಲಕೃಷ್ಣ ರೈ ಕೆ, ರವರ ಸಮ್ಮುಖದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮೆಚ್ಚುಗೆಯ ನುಡಿಗಳು ಕೇಳಿಬಂದವು.

ಸಭೆಯನ್ನು ಉದ್ದೇಶಿಸಿ ಅಧ್ಯಕ್ಷ ಕುಶನ್ ರೈ ಮಾತನಾಡಿ ಎಲ್ಲಾ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಕೊಡಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಸರಿಪಡಿಸುವಂಥ ಕಾರ್ಯ ಆಗಬೇಕು ಎಂದು ಆಲೋಚಿಸಿದ್ದೆವು. ಗ್ರಾಮ ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಬಂದು ತಮ್ಮ ತಮ್ಮ ಕುಂದುಕೊರತೆಯನ್ನು ತಿಳಿಸಿದ್ದರಿಂದ ಸಾರ್ವಜನಿಕರಿಗೂ ಹಾಗೂ ಸಮಾಜಕ್ಕೂ ಉತ್ತಮ ಕೆಲಸಗಳು ನಡೆಯುತ್ತದೆ. ಯಾರೇ ಅಧಿಕಾರಕ್ಕೆ ಬಂದರು ಸಾರ್ವಜನಿಕರು ಹೀಗೆ ಸ್ಪಂದಿಸುತ್ತಾ ಹಾಗೆಯೇ ಸಂಘ-ಸಂಸ್ಥೆಗಳು ಪಂಚಾಯಿತಿ ಜೊತೆ ಸೇರಿ ಕೆಲಸ ಮಾಡಿದರೆ ಇನ್ನೂ ಹೆಚ್ಚು ಅಭಿವೃದ್ಧಿ ಕಾರ್ಯಗಳು ಆಗುತ್ತವೆ ಎಂದರು.

ಏಳು ಗ್ರಾಮಗಳ ಸಾರ್ವಜನಿಕರು ಸೇರಿ ಗ್ರಾಮ ಸಭೆ ನಡೆಸಿದರು. ಸಭೆಯಲ್ಲಿ ಕಂದಾಯ ಇಲಾಖೆ ಅಕ್ಷತಾ ಶೆಟ್ಟಿ ಬಿ, ಚೆಸ್ಕಾಂ ಜೂನಿಯರ್ ಇಂಜಿನಿಯರ್ ಚೈತ್ರೇಶ್ ಸಿ ಎಸ್, ಆರೋಗ್ಯ ಇಲಾಖೆ LHV ಹೇಮಲತಾ, ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ದರ್ಶನ್, ಪೊಲೀಸ್ ಇಲಾಖೆ ಹರೀಶ್ ಐ.ಎಲ್, ಗಜಲಕ್ಷ್ಮಿ ಜಿ ಸಿ ಪಶುವೈದ್ಯ ಪರೀಕ್ಷಕರು, ಪಂಚಾಯತ್ ರಾಜ್ ಇಂಜಿನಿಯರ್ ಉಪ ವಿಭಾಗ ರಘು, ಅರಣ್ಯ ಇಲಾಖೆ ಅಧಿಕಾರಿ ಭವ್ಯ ಹಾಜರಿದ್ದು.. ಅವರವರ ಇಲಾಖೆ ಸೌಲಭ್ಯಗಳನ್ನು ವಿವರಿಸಿ ಹಾಗೂ ಸಾರ್ವಜನಿಕರ ತೊಂದರೆಗಳಿಗೆ ಪರಿಹಾರ ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್ 1) ಬಾಲಕೃಷ್ಣ ರೈ ಕೆ ಅವರು ಮಾತನಾಡಿ ತಮ್ಮ ಇಲಾಖೆಯಲ್ಲಿ ಇರುವಂತ ಎಲ್ಲಾ ಸವಲತ್ತುಗಳ ಬಗ್ಗೆ ಕೂಲಂಕುಶವಾಗಿ ವಿವರಿಸಿದರು.ಈ ಸಂದರ್ಭ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ ರೇಖಾ ಬಾಲು ಬಿ.ಎಸ್, ಸದಸ್ಯರಾದ ಮುಂಡಂಡ ವಿಜು ತಿಮ್ಮಯ್ಯ, ಅಪ್ಪಚಂಡ ಮೀನಾಕ್ಷಿ ದೇವಯ್ಯ, ಮೂಡೆರ ಶರ್ಮಿಳಾ ಮನು, ಪಾರೆಮಜುಲು ರೀತಾ ಸುದರ್ಶನ್, ಪುಷ್ಪ ಎಂ ಎನ್, ಯಶ್ವಿನ್ ಪೊನ್ನಪ್ಪ, ಮುಂಡಂಡ ಪವಿ ಸೋಮಣ್ಣ, ಮುಕ್ಕಾಟೀರ ಸೌಮ್ಯ ಸತೀಶ್, ಬೈಲೋಳಿ ಸುಮ ಸುಂದರಿ, ಹೆಚ್ ಎನ್ ನಿಂಗಪ್ಪ, ಶೃತಿ ಹೆಚ್ ಡಿ, ಹೀರ ಸುಬ್ಬಯ್ಯ, ರಘು, ಪಿ ಡಿ ಓ ಚಂದ್ರಮೌಳಿ ಕೆ.ಎಂ, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!