ಕನ್ನಡಪ್ರಭ ವಾರ್ತೆ ನಾಪೋಕ್ಲು
ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಪಯಸ್ವಿನಿ ಯುವಕ ಸಂಘ ರಿ ಸಂಪಾಜೆ ಕೊಡಗು ಆಶ್ರಯದಲ್ಲಿ ದ್ವಿತೀಯ ವರ್ಷದ (ಕೆಸರ್ದ ಪರ್ಬ) ಕೆಸರು ಗದ್ದೆ ಕ್ರೀಡಾಕೂಟ ಸಂಪಾಜೆಯಲ್ಲಿ ನಡೆಯಿತು.ಕ್ರೀಡಾಕೂಟದ ಉದ್ಘಾಟನೆ ಯನ್ನು ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಂಪಾಜೆ ಅನಂತ ಎನ್. ಸಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಪಯಸ್ವಿನಿ ಯುವಕ ಸಂಘದ ಅಧ್ಯಕ್ಷ ತೀರ್ಥಪ್ರಸಾದ್ ದುಗ್ಗಳ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಸಂಪಾಜೆ ಗ್ರಾ.ಪಂ. ಅಧ್ಯಕ್ಷರಾದ ರಮಾದೇವಿ ಬಾಲಚಂದ್ರ ಕಳಗಿ , ಪಂಚಲಿಗೇಶ್ವರ ದೇವಸ್ಥಾನ ಸಂಪಾಜೆ ಅಧ್ಯಕ್ಷ ಜಯಕುಮಾರ್ ಚಿದ್ಕರ್, ಪಕೀರ ಅಂಬಟೆಕಜೆ ನಿರ್ದೇಶಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಂಪಾಜೆ ಹಾಗೂ ವಿಶೇಷ ಸನ್ಮಾನಿತಾರಾಗಿ ಡಾ.ಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಲಾಯಿತು.
ಕ್ರೀಡಾಕೂಟ ದ ವಾಲಿಬಾಲ್ ಪಂದ್ಯಾಟ ದಲ್ಲಿ ಪ್ರಥಮ ಕೂರ್ಗ್ ವರಿಯರ್ಸ್ ದ್ವಿತೀಯ ಹಿಲ್ ಕ್ರಿಸ್ಟ್ ತೃತೀಯ ಟೀಮ್ ಆದ್ಯ ಪಾಲೆಮಾಡು, ಚತುರ್ಥ ಟೀಮ್ ಉರ್ಕೋಲ್ಲಿಸ್ ಪಡೆದುಕೊಂಡು ಮಹಿಳೆಯರ ವಾಲಿಬಾಲ್ ಪಂದ್ಯಾಟ ದಲ್ಲಿ ಪ್ರಥಮ ರೋಟರಿ ಸುಳ್ಯ, ದ್ವಿತೀಯ ಟೀಮ್ ಕುಕ್ಕುಜಡ್ಕ ಪಡೆದುಕೊಂಡಿತು . ಹಗ್ಗಜಗ್ಗಾಟ ದ ಕೊಡಗು ಭಾಗದ ತಂಡದಲ್ಲಿ ಪ್ರಥಮ ವಿಷ್ಣು ಬಳಗ ಸಂಪಾಜೆ, ದ್ವಿತೀಯ ಪಯಸ್ವಿನಿ ಸಂಪಾಜೆ ಪಡೆದುಕೊಂಡಿತು. ನಂತರ ಮುಕ್ತ 525 kg ಹಗ್ಗಜಗ್ಗಾಟ ಪಂದ್ಯಾಟ ದಲ್ಲಿ ಪ್ರಥಮ ವಿಷ್ಣು ಬಳಗ ಸಂಪಾಜೆ ಪಡೆದುಕೊಂಡರೆ ದ್ವಿತೀಯ ವಿನಾಯಕ ಕುಂಬ್ರ ತೃತೀಯ ಶಿವ ಕೃಪಾ ಆಡಿಟೋರಿಯಂ, ಚತುರ್ಥ ಮೊಗರು ಬಂದರು, ಮಹಿಳೆಯರ ಹಗ್ಗಜಗ್ಗಾಟ ದಲ್ಲಿ ಪ್ರಥಮ ಮಹಾದೇವ ಸ್ಪೋರ್ಟ್ಸ್ ಕ್ಲಬ್ ಬಲಮುರಿ, ದ್ವಿತೀಯ ನಾಗಶ್ರೀ ಸುಳ್ಯ ಪಡೆದುಕೊಂಡಿತು .ಇನ್ನು ಅನೇಕ ವಿವಿಧ ಆಟೋಟ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ, ಪುರುಷ ಹಾಗೂ ಮಹಿಳೆಯರಿಗೆ ನಡೆಯಿತು. ವಿಜೇತರಾದ ಎಲ್ಲ ತಂಡಗಳಿಗೂ ವೇದಿಕೆಯಲ್ಲಿ ಗಣ್ಯರಿಂದ ಬಹುಮಾನ ವಿತರಣೆ ನಡೆಯಿತು. ಸಭಾ ಕಾರ್ಯಕ್ರಮ ದ ನಿರೂಪಣೆ ಯನ್ನು ವಿಕ್ರಂತ್ ಸಂಪಾಜೆ ಹಾಗೂ ಸುಂದರ ಸಂಪಾಜೆ ನೆರವೇರಿಸಿ ಪಂದ್ಯಾಟ ಕೂಟದ ವೀಕ್ಷಕ ವಿವರಣೆ ಯನ್ನು ಖ್ಯಾತ ವೀಕ್ಷಕ ವಿವರಣೆ ಗಾರರು ಆದ ಸುರೇಶ್ ಪಡೀಪಂಡ ಮಾಡಿದರು. ಈ ಸಂದರ್ಭ ಪಯಸ್ವಿನಿ ಸಂಘದ ಎಲ್ಲಾ ಪದಾಧಿಕಾರಿಗಳು ಅನೇಕ ಕ್ರೀಡಾ ಪ್ರೇಮಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.