ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಜು.10ರಂದು ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಸಚಿವ ಮಾಂಕಾಳ್ ಎಸ್. ವೈದ್ಯ ಉದ್ಘಾಟಿಸಲಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳ ಶಾಸಕರು, ಸಚಿವರು, ಮಾಜಿ ಸಚಿವರ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರತಿದಿನ ಭಜನೆ, ಪಾದಪೂಜೆ, ಯಕ್ಷಗಾನ, ಭರತನಾಟ್ಯ, ಪ್ರವಚನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ದೇವಲಿಂಗೇಶ್ವರ ಭಕ್ತ ಮಂಡಳಿ ದೇವರಗುಡ್ಡ ಇದರ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಸಂಚಾಲಕ ನವೀನ್ ಪ್ರಕಾಶ್, ಕಾರ್ಯದರ್ಶಿ ಸುನಿಲ್ ಕನ್ಯಾಡಿ ಹಾಗೂ ಉಪಾಧ್ಯಕ್ಷ ರವೀಂದ್ರ ಆರ್ಲ ಇದ್ದರು...........................ಚಾತುರ್ಮಾಸ್ಯ ಸಮಯ ಪ್ರತಿ ಹುಣ್ಣಿಮೆ, ಅಮಾವಾಸ್ಯೆ, ಏಕಾದಶಿಯಂದು ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಮೌನ ಚಾತುರ್ಮಾಸ್ಯ ಇರುತ್ತದೆ. ಭಕ್ತಿ ಯೋಗ, ಕರ್ಮ ಯೋಗ, ಜ್ಞಾನ ಯೋಗಕ್ಕೆ ಆಧ್ಯಾತ್ಮಿಕ ಮೌಲ್ಯಗಳನ್ನು ಅನುಸರಿಸುವುದು ಮುಖ್ಯವಾಗಿದೆ. ನಾಲ್ಕು ಚಾತುರ್ಮಾಸ್ಯಗಳನ್ನು ಕನ್ಯಾಡಿಯ ಮಠದಲ್ಲೇ ನೆರವೇರಿಸಲಾಗಿದ್ದು, ಕಳೆದ ವರ್ಷ ಭಟ್ಕಳದಲ್ಲಿ ಚಾತುರ್ಮಾಸ್ಯ ನಡೆದಿತ್ತು. ಮುಂದಿನ ವರ್ಷಗಳಲ್ಲಿ ಚಾತುರ್ಮಾಸ್ಯವನ್ನು ಅಯೋಧ್ಯೆ, ಹರಿದ್ವಾರ, ನೈಮಿಷಾರಣ್ಯ, ವಾರಣಾಸಿ ಮೊದಲಾದ ಸ್ಥಳಗಳಲ್ಲಿ ನಡೆಸಲು ಯೋಚಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.